ದೇಶದ ನಂಬರ್ 1 ಭಷ್ಟ್ರಾಚಾರಿ ಇಲಾಖೆಯಾಗಿ ಹೊರಹೊಮ್ಮಿದ ಕೇಂದ್ರ ಗೃಹ ಸಚಿವಾಲಯ!

ನವದೆಹಲಿ: ಕಳೆದ ವರ್ಷ ಅತೀ ಹೆಚ್ಚು ಭ್ರಷ್ಟಾಚಾರದ ದೂರುಗಳು ಕೇಂದ್ರದ ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧ ದಾಖಲಾಗಿದೆ ಎಂದು ಕೇಂದ್ರ ಜಾಗೃತ ಆಯೋಗದ ಇತ್ತೀಚಿನ ವಾರ್ಷಿಕ ವರದಿಯು ಬಹಿರಂಗಪಡಿಸಿದೆ. ಬಿಜೆಪಿಯ ಅತ್ಯುನ್ನತ ನಾಯಕರಲ್ಲೊಬ್ಬರಾದ ಅಮಿತ್ ಶಾ ಅವರು ಕೇಂದ್ರ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹ ಸಚಿವಾಲಯದ ನಂತರ ಅತೀ ಹೆಚ್ಚು ಭ್ರಷ್ಟಾಚಾರದ ಪ್ರಕರಣಗಳು ರೈಲ್ವೆ ಮತ್ತು ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವವರ ವಿರುದ್ಧ ದಾಖಲಾಗಿವೆ.

ಒಟ್ಟಾರೆಯಾಗಿ, 2022 ರಲ್ಲಿ 1,15,203 ದೂರುಗಳನ್ನು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳಾದ್ಯಂತ ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ಉದ್ಯೋಗಿಗಳ ವಿರುದ್ಧ ಸ್ವೀಕರಿಸಲಾಗಿದೆ ಎಂದು ಆಯೋಗ ಹೇಳಿದೆ. ಇವುಗಳಲ್ಲಿ, 85,437 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಮತ್ತು 29,766 ಬಾಕಿ ಉಳಿದಿವೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಕೆರೆಯ ಮಣ್ಣನ್ನು ನುಂಗಿದ “ಸರ್ಕಾರಿ ನೌಕರರ ಸಂಘದ ಅಧ್ಯಕ್ಷ”! 71 ಲಕ್ಷರೂ ವಂಚನೆ!!

ಕೇಂದ್ರ ಗೃಹ ಸಚಿವಾಲಯವು ತನ್ನ ಉದ್ಯೋಗಿಗಳ ವಿರುದ್ಧ ಕಳೆದ ವರ್ಷ 46,643 ದೂರುಗಳನ್ನು ಸ್ವೀಕರಿಸಿದ್ದರೆ, ರೈಲ್ವೆಯಿಂದ 10,580 ಮತ್ತು ಬ್ಯಾಂಕ್‌ಗಳಿಂದ 8,129 ದೂರುಗಳು ಬಂದಿವೆ ಎಂದು ವರದಿ ತಿಳಿಸಿದೆ. ಗೃಹ ಸಚಿವಾಲಯದ ಉದ್ಯೋಗಿಗಳ ವಿರುದ್ಧ ದಾಖಲಾದ ಒಟ್ಟು ದೂರುಗಳಲ್ಲಿ 23,919 ವಿಲೇವಾರಿಯಾಗಿದೆ ಮತ್ತು 22,724 ದೂರುಗಳು ಇನ್ನೂ ವಿಲೇವಾರಿಗೆ ಬಾಕಿ ಇದೆ.

ರೈಲ್ವೆಯು 9,663 ದೂರುಗಳನ್ನು ವಿಲೇವಾರಿ ಮಾಡಿದ್ದು, 917 ದೂರುಗಳು ಇನ್ನೂ ಬಾಕಿ ಉಳಿದಿವೆ. ಬ್ಯಾಂಕ್‌ಗಳು 7,762 ಭ್ರಷ್ಟಾಚಾರ ದೂರುಗಳನ್ನು ವಿಲೇವಾರಿ ಮಾಡಿದ್ದು, 367 ಬಾಕಿ ಉಳಿದಿವೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಕೇಂದ್ರ ಲೋಕೋಪಯೋಗಿ ಇಲಾಖೆ ಸೇರಿದಂತೆ), ದೆಹಲಿ ಅಭಿವೃದ್ಧಿ ಪ್ರಾಧಿಕಾರ, ದೆಹಲಿ ಮೆಟ್ರೋ ರೈಲು ನಿಗಮ, ದೆಹಲಿ ಅರ್ಬನ್ ಆರ್ಟ್ ಕಮಿಷನ್, ಹಿಂದೂಸ್ತಾನ್ ಪ್ರಿಫ್ಯಾಬ್ ಲಿಮಿಟೆಡ್, ನಗರಾಭಿವೃದ್ಧಿ ನಿಗಮ ನಿಯಮಿತ, NBCC ಮತ್ತು NCR ಯೋಜನಾ ಮಂಡಳಿ, ವಸತಿ ಮತ್ತು ಗೃಹ ಮತ್ತು ವಸತಿ ಸಚಿವಾಲಯದ ನೌಕರರ ವಿರುದ್ಧ 4,710 ದೂರುಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ರಾಜ್ಯ ಶಿಕ್ಷಣ ನೀತಿ ಬಂದ ತಕ್ಷಣ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ನಿಲ್ಲುವುದಿಲ್ಲ: ಬಿ. ಶ್ರೀಪಾದ ಭಟ್

ವರದಿಯು ಕಲ್ಲಿದ್ದಲು ಸಚಿವಾಲಯದಲ್ಲಿರುವವರ ವಿರುದ್ಧ 4,304 ದೂರುಗಳು (4,050 ವಿಲೇವಾರಿ), 4,236 ಕಾರ್ಮಿಕ ಸಚಿವಾಲಯದ ವಿರುದ್ಧ (4,016 ವಿಲೇವಾರಿ) ಮತ್ತು 2,617 ಪೆಟ್ರೋಲಿಯಂ ಸಚಿವಾಲಯದ ಉದ್ಯೋಗಿಗಳ ವಿರುದ್ಧ (2,409 ವಿಲೇವಾರಿ ಮಾಡಲಾಗಿದೆ) ದಾಖಲಾಗಿದೆ ಎಂದು ಹೇಳದೆ.

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ನೌಕರರ ವಿರುದ್ಧ 2,150 ದೂರುಗಳು, ರಕ್ಷಣಾ ಸಚಿವಾಲಯದ ನೌಕರರ ವಿರುದ್ಧ 1,619, ದೂರಸಂಪರ್ಕ ಇಲಾಖೆಯ ನೌಕರರ ವಿರುದ್ಧ 1,308, ಹಣಕಾಸು ಸಚಿವಾಲಯದ ನೌಕರರ ವಿರುದ್ಧ 1,202 ಮತ್ತು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ವಿರುದ್ಧ 1,101 ದೂರುಗಳು ದಾಖಲಾಗಿವೆ ಎಂದು ವರದಿ ಹೇಳಿದೆ.

ವಿಮಾ ಕಂಪನಿಗಳಲ್ಲಿ ಕೆಲಸ ಮಾಡುವವರ ವಿರುದ್ಧ 987, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದ ನೌಕರರ ವಿರುದ್ಧ 970 ಮತ್ತು ಉಕ್ಕು ಸಚಿವಾಲಯದ ನೌಕರರ ವಿರುದ್ಧ 923 ದೂರುಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.

ವಿಡಿಯೊ ನೋಡಿ: ಸೌಜನ್ಯ ಪ್ರಕರಣ – SIT ತನಿಖೆಗೆ ಆಗ್ರಹಿಸಿ ಆಗಸ್ಟ್ 28 ಕ್ಕೆ ಬೃಹತ್ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *