ಬೆಂಗಳೂರು: ಕೇಂದ್ರದ ಬಿಜೆಪಿ ಸರಕಾರವು ಲಸಿಕೆ ವಿಚಾರವಾಗಿ ಪದೇ ಪದೇ ‘ಯೂ-ಟರ್ನ್’ ಹೊಡೆಯುತ್ತಿದ್ದು, ವೃತ್ತದೊಳಗೆ ತಿರುಗುತ್ತಿರುವಂತೆ ಭಾಸವಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ʻಕೇಂದ್ರ ಸರ್ಕಾರವು ಲಸಿಕಾ ನೀತಿಗೆ ಸಂಬಂಧಿಸಿದಂತೆ ಹಲವು ಬಾರಿ ‘ಯೂ-ಟರ್ನ್’ ಹೊಡೆಯುತ್ತಿದ್ದು, ವೃತ್ತದಲ್ಲಿ ತಿರುಗುತ್ತಿರುವಂತೆ ಅನಿಸುತ್ತಿದೆ ರಾಜ್ಯಗಳೋ ಅಥವಾ ಕೇಂದ್ರವೋ? ಉಚಿತವೋ ಅಥವಾ ಹಣ ನೀಡಬೇಕೋ? 45 ಅಥವಾ ಎಲ್ಲರಿಗೂ? ನಮಗೆ ಸರಿಯಾದ ನಿರ್ಧಾರ ಕೈಗೊಳ್ಳುವ ಸರಕಾರ ಬೇಕಿತ್ತು, ಆದರೆ ಪದೇ ಪದೇ ಒಂದೊಂದು ನಿರ್ಧಾರಗಳನ್ನು ಪ್ರಕಟಿಸುವ ಸರಕಾರವಾಗಿದೆʼ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ದೇಶದ ಎಲ್ಲ ಜನರಿಗೂ ಉಚಿತ ಲಸಿಕೆ: ಪ್ರಧಾನಿ ನರೇಂದ್ರ ಮೋದಿ
ನೆನ್ನೆ ಪ್ರಧಾನಿ ನರೇಂದ್ರಮೋದಿ ಅವರು ʻಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ನೀಡಲಿದೆ. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿದೆ. ಮುಂದಿನ ಎರಡು ವಾರಗಳ ನಂತರ ಲಸಿಕೆಯನ್ನು ನೀಡಲಿದೆ. ರಾಜ್ಯಗಳು ಖರೀದಿಗೆ ಅನುವ ಮಾಡಿಕೊಟ್ಟ ಶೇಕಡಾ ಶೇಕಡಾ 25 ರಷ್ಟು ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ವಹಿಸಿಕೊಳ್ಳಲಿದೆ ಎಂದು ಭಾಷಣ ಮಾಡಿದ್ದರು.
ಪ್ರಧಾನಿ ಹೇಳಿಕೆಯ ನಂತರ ಹಲವು ಮಂದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಂದ್ರ ಬಿಜೆಪಿ ಸರಕಾರದ ಯು ಟರ್ನ್ ಬಗ್ಗೆ ದೊಡ್ಡ ಪ್ರಮಾಣದ ಮಂದಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಬಗ್ಗೆ ಟ್ವಟ್ಟರ್ ನಲ್ಲಿಯೂ ಟ್ರೆಂಡಿಂಗ್ ಯು ಟರ್ನ್ ಪದ ಬಳಕೆಯಾಗುತ್ತಿದೆ.