ಕರ್ನಾಟಕದಲ್ಲಿ 38,960 ಜಲಮೂಲಗಳ ಗಣತಿ ಪೂರ್ಣ; ನೀರು ಸಂರಕ್ಷಣೆಗೆ ಬಳಸಲು ಸರ್ಕಾರಕ್ಕೆ ಮಹತ್ವದ ಮಾಹಿತಿ

ಬೆಂಗಳೂರು: ಕರ್ನಾಟಕದಲ್ಲಿ ಸಣ್ಣ ನೀರಾವರಿ ಯೋಜನೆಗಳು ಹಾಗೂ ಜಲಮೂಲಗಳ ಸಮಗ್ರ ಗಣತಿ ಕಾರ್ಯ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಒಟ್ಟು 38,960 ಜಲಮೂಲಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ. 30,671 ಗ್ರಾಮಗಳು, 300 ನಗರ ಸ್ಥಳೀಯ ಸಂಸ್ಥೆಗಳು ಹಾಗೂ 7,128 ನಗರ ವಾರ್ಡ್‌ಗಳನ್ನು ಒಳಗೊಂಡಂತೆ ಗಣತಿ ನಡೆಸಲಾಗಿದೆ. ಕರ್ನಾಟಕದಲ್ಲಿ 

ಸಣ್ಣ ನೀರಾವರಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಗಣತಿಯ ಕ್ಷೇತ್ರಕಾರ್ಯ ಆಗಸ್ಟ್ 2026ರಲ್ಲಿ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಂಪೂರ್ಣ ಆರ್ಥಿಕ ನೆರವಿನಿಂದ ಈ ಬೃಹತ್ ಸಮೀಕ್ಷೆ ನಡೆಸಲಾಗಿದೆ.

ಗಣತಿಯಲ್ಲಿ ಜಲಮೂಲಗಳ ಜೊತೆಗೆ 14,18,894 ಅಂತರ್ಜಲ ಯೋಜನೆಗಳು ಮತ್ತು 77,573 ಮೇಲ್ಮೈ ನೀರಿನ ಯೋಜನೆಗಳು ದಾಖಲಾಗಿವೆ. ಸಣ್ಣ ನೀರಾವರಿ ಗಣತಿಯಲ್ಲಿ 2,000 ಹೆಕ್ಟೇರ್‌ವರೆಗೆ ನೀರಾವರಿ ಸಾಮರ್ಥ್ಯ ಹೊಂದಿರುವ ಯೋಜನೆಗಳನ್ನು ಪರಿಗಣಿಸಲಾಗಿದೆ. ಕೆರೆ, ಕಟ್ಟೆ ಸೇರಿದಂತೆ ವಿವಿಧ ಜಲಮೂಲಗಳ ವಿವರಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗಿದೆ. ಕರ್ನಾಟಕದಲ್ಲಿ 

ಇದನ್ನೂ ಓದಿ :ಗಣೇಶನ ಕೈಯಲ್ಲಿ ಕನಿಷ್ಠ ವೇತನದ ಬೇಡಿಕೆ; ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಹೋರಾಟದ ಪೋಸ್ಟರ್ ವೈರಲ್

ರಾಜ್ಯದಲ್ಲಿ ಬರ, ಅಂತರ್ಜಲ ಕುಸಿತ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂತಹ ನಿಖರವಾದ ನೀರಿನ ಮಾಹಿತಿ ಅತ್ಯಂತ ಅಗತ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ. ಗಣತಿ ವರದಿಯನ್ನು ಕೇವಲ ದಾಖಲೆ ರೂಪದಲ್ಲಿ ಇಟ್ಟುಕೊಳ್ಳದೆ, ನೀರು ಸಂರಕ್ಷಣಾ ಯೋಜನೆಗಳಿಗೆ ನೇರವಾಗಿ ಬಳಸಬೇಕು ಎಂಬುದಕ್ಕೂ ಅವರು ಒತ್ತು ನೀಡಿದ್ದಾರೆ.

ಜಲಮೂಲಗಳ ಸ್ಥಿತಿ ಮತ್ತು ಅವುಗಳ ಅಗತ್ಯವನ್ನು ಆಧರಿಸಿ ಕೆರೆಗಳ ಪುನಶ್ಚೇತನ, ಅಂತರ್ಜಲ ಮರುಪೂರಣ, ಚೆಕ್‌ಡ್ಯಾಂ ನಿರ್ಮಾಣ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲು ಈ ಮಾಹಿತಿ ನೆರವಾಗಲಿದೆ. ವಿಶೇಷವಾಗಿ ಬರಪೀಡಿತ ಪ್ರದೇಶಗಳಲ್ಲಿ ನೀರಿನ ಸಂರಕ್ಷಣಾ ಕಾಮಗಾರಿಗಳನ್ನು ರೂಪಿಸಲು ಗಣತಿ ಪ್ರಮುಖ ಆಧಾರವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆ ಮತ್ತು ಬರ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಗಣತಿ ಮತ್ತಷ್ಟು ಮಹತ್ವ ಪಡೆದಿದೆ. ಸೆಪ್ಟೆಂಬರ್ ಆರಂಭದ ವೇಳೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 30 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು.

ಇದನ್ನೂ ನೋಡಿ : ಜಿಡಿಪಿ ಬೆಳವಣಿಗೆ ಎಂದರೆ ಅಸಮಾನತೆ, ನಿರುದ್ಯೋಗದ ಬೆಳವಣಿಗೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *