ಮಾಜಿ ಸಚಿವ ಅನಿಲ್ ದೇಶಮುಖ್ ಮನೆ ಮೇಲೆ ಸಿಬಿಐ ದಾಳಿ

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಭ್ರಷ್ಟಾಚಾರ ಆರೋಪ ಮೇಲೆ ಪ್ರಕರಣವನ್ನು ದಾಖಲಿಸಿದ ಸಿಬಿಐ. ತಕ್ಷಣದಲ್ಲೇ ಇಂದು ಬೆಳ್ಳಂಬೆಳಗ್ಗೆ ಅವರ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ತಂಡ ಅವರಿಗೆ ಸಂಬಂಧಿಸಿದ ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದೆ.

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ ನಿನ್ನೆ ದೇಶಮುಖ್‌ ಅವರ ಮೇಲಿನ ಆರೋಪದ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿತ್ತು. ಅದರ ನಂತರ ಇಂದು ಸಿಬಿಐ ಅವರ ಮನೆಗಳ ಮೇಲೆ ದಾಳಿ ಮಾಡಿದೆ. ದಾಳಿ ಮಾಡುವ ಮುಂಚಿತವಾಗಿ ಭ್ರಷ್ಟಾಚಾರ ಪ್ರಕರಣವನ್ನು ದಾಖಲಿಸಿದೆ.

ಇದನ್ನು ಓದಿ: ಪ್ರಧಾನಿಗಳಿಗೆ ಆಮ್ಲಜನಕ ಹಾಗೂ ಔಷಧಿ ಪೂರೈಸಲು ಹಲವು ರಾಜ್ಯಗಳಿಂದ ಬೇಡಿಕೆ

ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಅನಿಲ್ ದೇಶಮುಖ್ ವಿರುದ್ಧದ ಪ್ರಕರಣದ ತನಿಖೆ ನಡೆದು ನಂತರ ಸಿಬಿಐಗೆ ವಹಿಸಿದೆ. ಅನಿಲ್ ದೇಶಮುಖ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧರ ಕೈಗೊಳ್ಳಲು ಸಿಬಿಐಗೆ ಬಾಂಬೆ ಹೈಕೋರ್ಟ್ 15 ದಿನ ಕಾಲಾವಕಾಶ ಕೊಟ್ಟಿತ್ತು. ಅದರಂತೆ ಸಿಬಿಐ ತನ್ನ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ದೇಶಮುಖ್‌ ಮತ್ತು ಇತರರ ಮೇಲೆ ನೆನ್ನೆ ಪ್ರಕರಣ ದಾಖಲಿತು.

ಮುಂಬೈ ಮತ್ತು ನಾಗಪುರದಲ್ಲಿರುವ ಅನಿಲ್ ದೇಶಮುಖ್ ಅವರ ಮನೆ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ಸಿಬಿಐ ಅಧಿಕಾರಿಗಳ ದಾಳಿ ನಡೆಸಿದ್ದಾರೆ.

ಈಗಾಗಲೇ ಸಿಬಿಐ ಅಧಿಕಾರಿಗಳು ಅನಿಲ್ ದೇಶ್‌ಮುಖ್ ಅವರ ವೈಯಕ್ತಿಕ ಸಹಾಯಕರಾದ ಸಂಜೀವ್ ಪಾಲಂಡೆ ಮತ್ತು ಕುಂದನ್ ಶಿಂಧೆ, ಮಾಜಿ ಪೋಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಇಬ್ಬರು ಚಾಲಕರು, ಬಾರ್ ಮಾಲೀಕರು, ಮುಂಬೈ ಪೊಲೀಸ್ ಅಧಿಕಾರಿಗಳು ಮತ್ತು ಮಾಜಿ ಸಚಿವರಿಗೆ ಹತ್ತಿರವಿರುವ ಜನರನ್ನು ಸಹ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತ್ತು.

ಇದನ್ನು ಓದಿ: ನೌಕರರ ಮೇಲ್ವಿಚಾರಣೆಗೆ ವಿಶೇಷ ಕಾರ್ಯಪಡೆ: ಸಿಪಿಐಎಂ ನಾಯಕ‌ ತರಿಗಾಮಿ ತೀವ್ರ ವಿರೋಧ

ಮುಂಬೈನ ಐಪಿಎಸ್ ಅಧಿಕಾರಿ ಪರಮ್ ಬಿರ್ ಸಿಂಗ್ ಅವರು ಪ್ರತಿ ತಿಂಗಳೂ ₹100 ಕೋಟಿ ಲಂಚ ಸಂಗ್ರಹಿಸುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಅನಿಲ್ ದೇಶಮುಖ್ ಸೂಚಿಸಿದ್ದರು ಎಂದು ಆರೋಪಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ ನಂತರ ಮಾಜಿ ಸಚಿವರನ್ನು ಏಪ್ರಿಲ್ 14 ರಂದು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.

ಮುಂಬೈನಲ್ಲಿರುವ ಬಾರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ದೊಡ್ಡ ಪ್ರಮಾಣದ ಹಣವನ್ನು ಸಂಗ್ರಹ ಮಾಡಬೇಕೆಂದು ಅನಿಲ್ ದೇಶ್‌ಮುಖ್ ತನ್ನ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಆರೋಪ ಬಂದ ಕೆಲ ದಿನಗಳಲ್ಲಿ ಅನಿಲ್ ದೇಶಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *