ಹಗರಣಗಳ ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ರಸ್ತೆ ಅಪಘಾತದಲ್ಲಿ ಮೃತ- ತನಿಖೆಗೆ ಪಿಡಿಪಿ ಒತ್ತಾಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಹಗರಣಗಳ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಯೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳು ಏಪ್ರಿಲ್ 27ರ ಶನಿವಾರ ಮಾಹಿತಿ ನೀಡಿದ್ದಾರೆ. ಬಳಿಕ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಈ ಘಟನೆಯ ತನಿಖೆಗೆ ಒತ್ತಾಯಿಸಿದೆ.

ವರದಿಗಳ ಪ್ರಕಾರ ಮೃತ ಸಿಬಿಐ ಅಧಿಕಾರಿಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಶರ್ಮಾ ಎಂದು ಗುರುತಿಸಲಾಗಿದ್ದು, ವರದಿಗಳ ಪ್ರಕಾರ, ಜಮ್ಮುವಿನ ಪಲೋರಾ ಪ್ರದೇಶದ ಮಾಂಡ್ಲಿಕ್ ನಗರದ ನಿವಾಸಿ ಶರ್ಮಾ ತಮ್ಮ ಮನೆಗೆ ಹೋಗುವ ದಾರಿಯಲ್ಲಿ ಸ್ಪೀಡ್ ಬ್ರೇಕರ್‌ನಲ್ಲಿ ನಿಯಂತ್ರಣ ಕಳೆದುಕೊಂಡಿದ್ದು, ಈ ಕಾರಣದಿಂದಾಗಿ ಅಪಘಾತ ಸಂಭವಿಸಿದೆ.

ಜಮ್ಮು ನಗರದಲ್ಲಿ ಮಳೆಯಾಗುತ್ತಿದ್ದಿದರಿಂದ ಬಿದ್ದು ಶರ್ಮಾ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ದಾರಿಹೋಕರೊಬ್ಬರು ಗಾಯಗೊಂಡ ಸ್ಥಿತಿಯಲ್ಲಿ ಅಧಿಕಾರಿಯನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ (ಜಿಎಂಸಿ) ಕರೆದೊಯ್ದರು.

ಅಪಘಾತದ ಸಮಯದಲ್ಲಿ ಅಧಿಕಾರಿ ಹೆಲ್ಮೆಟ್ ಇಲ್ಲದೆ ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್ ಚಲಾಯಿಸುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ. ಆದಾಗ್ಯೂ, ದಿ ವೈರ್ ಈ ವರದಿಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

ಏತನ್ಮಧ್ಯೆ, ಅಪಘಾತದ ಬಗ್ಗೆ ಶರ್ಮಾ ಅವರ ಕುಟುಂಬಕ್ಕೆ ವಿಷಯ ತಿಳಿಸಿದ ಬಳಿಕ ಕುಟುಂಬಸ್ಥರು ಆಸ್ಪತ್ರೆಗೆ ತಲುಪಿ, ವಿಶೇಷ ಚಿಕಿತ್ಸೆಗಾಗಿ ಪಂಜಾಬ್‌ನ ಆಸ್ಪತ್ರೆಗೆ ಕುಟುಂಬದವರು ಕರೆದೊಯ್ಯುತ್ತಿದ್ದಾಗ ಶರ್ಮಾ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.ಶರ್ಮಾ ಅವರ ಮರಣೋತ್ತರ ಪರೀಕ್ಷೆಯನ್ನು ಜಮ್ಮು ಜಿಎಂಸಿಯಲ್ಲಿ ನಡೆಸಿ ಬಳಿಕ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ವಕ್ತಾರರ ಹೇಳಿಕೆ ಪ್ರಕಾರ ಏಪ್ರಿಲ್ 26 ರಂದು ರಾತ್ರಿ 11.57 ರ ಸುಮಾರಿಗೆ ಸಿಬಿಐ (ಜಮ್ಮು) ನಲ್ಲಿ ನಿಯೋಜಿಸಲಾದ ಡೆಪ್ಯುಟಿ ಎಸ್ಪಿ ಪ್ರಶಾಂತ್ ಶರ್ಮಾ ಅವರನ್ನು ಜಮ್ಮುವಿನ ಜಿಎಂಸಿಗೆ ದಾಖಲಿಸಲಾಯಿತು. ಇದರ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಡಿಎಂಸಿ ಲುಧಿಯಾನ (ಪಂಜಾಬ್) ಗೆ ಕಳುಹಿಸಿಕೊಡುತ್ತಿರುವಾಗ ಅವರು ಮಾರ್ಗಮಧ್ಯದಲ್ಲಿ ನಿಧನರಾದರು. ನಂರ ದೇಹವನ್ನು ವೈದ್ಯಕೀಯ ಮತ್ತು ಕಾನೂನು ಔಪಚಾರಿಕತೆಗಳಿಗಾಗಿ ಜೆಎಂಸಿ ಜಮ್ಮುವಿಗೆ ಕಳುಹಿಸಲಾಗಿದೆ.

2019 ರಲ್ಲಿ ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ಬೆಳಕಿಗೆ ಬಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಹಗರಣಗಳ ತನಿಖೆಯನ್ನು ಶರ್ಮಾ ಮುನ್ನಡೆಸುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ.

ಇದನ್ನು ಓದಿ : ಭಾರತೀಯ ಸಂವಿಧಾನ ಮತ್ತು ಹಿಂದುತ್ವದ ಪ್ರತಿಪಾದಕರ ಅಂತ್ಯವಿಲ್ಲದ ಚಡಪಡಿಕೆ

ಜಮ್ಮು ಮತ್ತು ಕಾಶ್ಮೀರ ಆಡಳಿತದಲ್ಲಿ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಮತ್ತು ಜೂನಿಯರ್ ಎಂಜಿನಿಯರ್‌ಗಳ (ಜೆಇ) ನೇಮಕಾತಿಯಲ್ಲಿ ಅಕ್ರಮಗಳ ಪ್ರಕರಣವೂ ಇವುಗಳಲ್ಲಿ ಸೇರಿವೆ, ನಂತರ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲಾಯಿತು.

ಹಿರಿಯ ಪಿಡಿಪಿ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ನಯೀಮ್ ಅಖ್ತರ್ ಈ ಘಟನೆಯ ತನಿಖೆಗೆ ಒತ್ತಾಯಿಸಿದ್ದಾರೆ.ಶರ್ಮಾ ಬಹಳ ಮುಖ್ಯವಾದ ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದ ಕಾರಣ, ಇವರ ಸಾವಿಗೆ ನಿಖರ ಕಾರಣ ಹಾಗೂ ಸತ್ಯಾಂಶ ಹೊರಬರಲು ನಿಷ್ಪಕ್ಷಪಾತ, ಸಮಯೋಚಿತ ಮತ್ತು ವಿಶ್ವಾಸಾರ್ಹ ತನಿಖೆ ನಡೆಸಬೇಕೆಂದು ಪಿಡಿಪಿ ಒತ್ತಾಯಿಸುವುದಾಗಿ ಹೇಳಿದ್ದಾರೆ.ಅಲ್ಲದೇ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಸಂತಾಪ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಜಮ್ಮು ಮೂಲದ ಪತ್ರಕರ್ತ ತರುಣ್ ಉಪಾಧ್ಯಾಯ, ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳ ನೇಮಕಾತಿಗೆ ಸಂಬಂಧಿಸಿದ ಪೇಪರ್ ಸೋರಿಕೆ ಹಗರಣ ಸೇರಿದಂತೆ ಪ್ರಮುಖ ಪ್ರಕರಣಗಳನ್ನು ಶರ್ಮಾ ತನಿಖೆ ನಡೆಸುತ್ತಿದ್ದರು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಇವರು ಐಎಎಸ್ ಅಧಿಕಾರಿ ನವೀನ್ ಚೌಧರಿ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನೂ ಅವರು ನಡೆಸುತ್ತಿದ್ದರು.

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಕಿರು ಜಲವಿದ್ಯುತ್ ಯೋಜನೆ ನಿರ್ಮಾಣಕ್ಕೆ 4,287 ಕೋಟಿ ರೂಪಾಯಿ ಮೊತ್ತದ ಗುತ್ತಿಗೆ ನೀಡುವಲ್ಲಿ ಅಕ್ರಮ ಎಸಗಿರುವ ಆರೋಪದಲ್ಲಿ ನವೀನ್ ಚೌಧರಿ ಅವರನ್ನು ಸಿಬಿಐ ದಾಖಲಿಸಿತ್ತು. ಈ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ ಅವರನ್ನೂ ಏಜೆನ್ಸಿ ವಿಚಾರಣೆ ನಡೆಸಿತ್ತು.

ಜಮ್ಮು ಮತ್ತು ಕಾಶ್ಮೀರದ ಝೀಲಂ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಝೀಲಂ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಜಮ್ಮುವಿನಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಸತ್ವಾರಿ ಶಾಖೆಯಿಂದ ಪಡೆದ 73 ಕೋಟಿ ರೂಪಾಯಿಗಳ ಸಾಲದ ದುರುಪಯೋಗದ ತನಿಖೆ ನಡೆಸಿದ ಸಿಬಿಐ ತಂಡದಲ್ಲಿ ಶರ್ಮಾ ಕೂಡ ಒಬ್ಬರಾಗಿದ್ದರು ಎಂಬುದು ಇಲ್ಲಿ ಗಮನಾರ್ಹ.

ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿಯು ನಡೆಸಿದ ನೇಮಕಾತಿ ಪರೀಕ್ಷೆಗಳಲ್ಲಿನ ಹಗರಣಗಳ ತನಿಖೆಯನ್ನು ಕೇಂದ್ರಾಡಳಿತ ಪ್ರದೇಶವು ಸಿಬಿಐಗೆ ಹಸ್ತಾಂತರಿಸಿತ್ತು.

ಇದನ್ನು ನೋಡಿ : ಏನಯ್ಯಾ ಏನೀ ದರ್ಬಾರು? ಆ ದಿಲ್ಲಿ ದೊರೆಯ ದೌಲತ್‌ನಲ್ಲಿ ಹೇಳಿದ್ದೇಳಲ್ಲ ಸುಳ್ಳುಗಳೆ ನೋಡು Janashakthi Media

Donate Janashakthi Media

Leave a Reply

Your email address will not be published. Required fields are marked *