ಕಾವೇರಿ ನೀರು ವಿವಾದ: ಕೇಂದ್ರ ಸರ್ಕಾರ ಮಧ್ಯೆವೇಶಿಸಬೇಕು: ಸಿಎಂ ಸಿದ್ದರಾಮಯ್ಯ

ಬಳ್ಳಾರಿ: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯೆಪ್ರವೇಶಿಸಬೇಕು ಎಂದು ಸಿಎಂ ಸಿದ್ದರಾಮಯ್ಯನವರು ಒತ್ತಾಯಿಸಿದ್ದಾರೆ.

ಶನಿವಾರ  ತೋರಣಗಲ್‌ನ ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು ಕೆಆರ್‌ಎಸ್‌ನಲ್ಲಿ 113 ಅಡಿ ನೀರು ಬಂದಿದೆ. ಹಾರಂಗಿ ಕಬಿನಿಯಲ್ಲಿ ನೀರು ಬರಬೇಕಿತ್ತು. ಆದರೆ ಮಳೆ ಕೊರತೆಯಿಂದ ನೀರು  ಕೊಡಕ್ಕೆ ನೀರಿಲ್ಲ ಎಂದು ಮೇಕೆದಾಟು ವಿಚಾರವಾಗಿ ತಮಿಳುನಾಡು ಸರ್ಕಾರ ಅನಗತ್ಯ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ:ಕಾವೇರಿ ವಿವಾದ:ತಮಿಳುನಾಡು ಅರ್ಜಿ ವಿಚಾರಣೆ ಸೆಪ್ಟೆಂಬರ್‌-6ಕ್ಕೆ ಮುಂದೂಡಿಕೆ

ಒಂದು ದೇಶ ಒಂದು ಚುನಾವಣೆ ಜಾರಿ ಎಲ್ಲ ರಾಜ್ಯಗಳಿಗೆ ಕಷ್ಟ ಆಗಲಿದೆ

ಒಂದು ದೇಶ ಒಂದು ಚುನಾವಣೆ ಜಾರಿ ಎಲ್ಲ ರಾಜ್ಯಗಳಿಗೆ  ಕಷ್ಟವಾಗಲಿದೆ ಎನ್ನುವುದು ನನ್ನ ವೈಯಕ್ತಿಕ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ವಿಧಾಸಭೆ ಸೇರಿದಂತೆ ಸ್ಥಳೀಯ ಚುನಾವಣೆಗಳನ್ನು ನಡೆಸುವುದು ಸುಲಭವಲ್ಲ ಮಾಜಿ ರಾಷ್ಟ್ರಪತಿ ಕೋವಿಂದ್‌ ಅವರ ನೇತೃತ್ವದ ಸಮಿತಿ ವರದಿ ನೀಡಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *