ಕೊಡಗು: ತುಲಾ ಸಂಕ್ರಮಣದ ದಿನ (ಅ.17 ರಂದು) ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದ್ದು ಭಕ್ತಾದಿಗಳು ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.
ಮಕರ ಲಗ್ನದಲ್ಲಿ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥೋದ್ಭವಾಗಿದ್ದು, ಇದಕ್ಕೂ ಮುನ್ನ ಅರ್ಚಕ ಗುರುರಾಜಾಚಾರ್ ನೇತೃತ್ವದಲ್ಲಿ 6 ಮಂದಿ ಅರ್ಚಕರು ಬ್ರಹ್ಮಕುಂಡಿಕೆಗೆ ಪೂಜೆ ಸಲ್ಲಿಸಿದ್ದರು.
ಮಧ್ಯಾಹ್ನ 1:11 ಕ್ಕೆ ಕಾವೇರಿ ಉದ್ಭವಾಗಿದ್ದು ಸಹಸ್ರಾರು ಮಂದಿ ತೀರ್ಥ ಪಡೆದರು. ಕೋವಿಡ್-19 ನಿರ್ಬಂಧದ ನಡುವೆಯೂ ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳುವುದಕ್ಕೆ ನೆರೆದಿದ್ದರು.
ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಹಲವಾರು ಭಕ್ತಾದಿಗಳು ಸಂಗಮದಲ್ಲಿ ಸ್ನಾನ ಮಾಡಿದರು. ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗುತ್ತಿದ್ದಂತೆಯೇ ತೀರ್ಥವನ್ನು ಭಕ್ತಾದಿಗಳಿಗೆ ಪ್ರೋಕ್ಷಣೆ ಮಾಡಿ ಸಂಭ್ರಮಿಸಲಾಯಿತು.
ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಇದೆ.
ಕಾವೇರಿ ಮಾತೆ ಕೊಡಗು, ಕರ್ನಾಟಕಕ್ಕೆ ಅಷ್ಟೇ ಅಲ್ಲ
ತಮಿಳುನಾಡಿಗೂ ಅನ್ನ ನೀರು ಒದಗಿಸುತ್ತಿದ್ದಾಳೆ
ನಾವು ತೀರ್ಥ ತೆಗೆದುಕೊಂಡು ಮಂಡ್ಯದ ಕಾಳಿಕಾಂಭ ದೇವಾಲಯದಲ್ಲಿ ಪೂಜಿಸಿ ವಿತರಣೆ ಮಾಡಲಿದ್ದೇವೆ
ಇಡೀ ವಿಶ್ವಕ್ಕೆ ಎಲ್ಲರಿಗೂ ಒಳ್ಳೆಯದು ಮಾಡಲೆಂದು ಪ್ರಾರ್ಥಿಸಿದ್ದೇವೆ. ಕೋವಿಡ್ ನಿಯಂತ್ರಣಕ್ಕೆ ಬರಲೆಂದು ಪ್ರಾರ್ಥಿಸಿದ್ದೇನೆ.ನಾರಾಯಣಗೌಡ – ಯುವಜನ ಮತ್ತು ಕ್ರೀಡಾ ಸಚಿವ