ನವದೆಹಲಿ : ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ನರೇಂದ್ರ ಮೋದಿ ಮಾಡಿದ ಭಾಷಣ ಸದ್ಯ ನಗೆಪಾಟಲಿಗೀಡಾಗುತ್ತಿದೆ. “ಬಾಂಗ್ಲಾದೇಶ ವಿಮೋಚನೆಯ…
ರಾಷ್ಟ್ರೀಯ
‘ಕೇರಳ ರಾಜ್ಯಸಭೆ ಚುನಾವಣೆ ನಡೆಸಿ, ಕಮಿಶನ್ ಸ್ವಾತಂತ್ರ್ಯ ಎತ್ತಿಹಿಡಿಯಿರಿ ’: ಮುಖ್ಯ ಚುನಾವಣಾಧಿಕಾರಿಗೆ ನೀಲೋತ್ಪಲ ಬಸು ಪತ್ರ
ನವದೆಹಲಿ : ರಾಜ್ಯಸಭೆಯ ಮೂರು ಸ್ಥಾನಗಳಿಗೆ ಕೇರಳ ವಿಧಾನಸಭೆಯಿಂದ ಮಾರ್ಚ್ 24ರಂದು ಆರಂಭವಾಗಬೇಕಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು, ಕೊನೆಯ ಗಳಿಗೆಯಲ್ಲಿ ತಡೆಹಿಡಿದದ್ದರ ಕುರಿತು…
ರೂ.3,700 ಕೋಟಿ ರೂ.ಗಳ ವಂಚನೆ: ಸಿಬಿಐನಿಂದ 100ಕ್ಕೂ ಹೆಚ್ಚು ಕಡೆ ಧಾಳಿ
ನವದೆಹಲಿ : ವಿವಿಧ ಬ್ಯಾಂಕುಗಳಲ್ಲಿ ರೂ.3700 ಕೋಟಿ ರೂಪಾಯಿಗಳ ವಂಚನೆ ನಡೆಸಿರುವ ಕೇಂದ್ರೀಯ ತನಿಖಾ ದಳ(ಸಿಬಿಐ) ಯಿಂದ 100ಕ್ಕೂ ಹೆಚ್ಚು ಕಡೆ…
ಚುನಾವಣಾ ಬಾಂಡ್ ಗಳ ಬಗ್ಗೆ ದೂರು: ಸುಪ್ರೀಂನಲ್ಲಿ ಅರ್ಜಿ ವಜಾ
ದೆಹಲಿ : ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಚುನಾವಣಾ ಬಾಂಡ್‌ಗಳ ಮಾರಾಟ ಮತ್ತು ಖರೀದಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಲ್ಲಿ …
ಭಾರತ್ ಬಂದ್ : ಬಿಹಾರದಲ್ಲಿ ಪ್ರತಿಪಕ್ಷಗಳ ಜಂಟಿ ಹೋರಾಟ
ಪಾಟ್ನಾ : ಇಂದು ಮುಂಜಾನೆಯಿಂದಲೇ ಬಿಹಾರದ ಪ್ರತಿಪಕ್ಷಗಳಾದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ), ಕಾಂಗ್ರೆಸ್ ಮತ್ತು ಎಡಪಕ್ಷಗಳ ನೇತೃತ್ವದಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ತೀವ್ರಸ್ವರೂಪದ…
ಅಗ್ನಿ ಅವಘಡ, ಹತ್ತು ಕೊರೊನಾ ಸೋಂಕಿತರು ಬಲಿ..!
ಮುಂಬೈ : ಮುಂಬೈನ ಭಂಡಪ್ ವೆಸ್ಟ್, ಸನ್ರೈಸ್ ಖಾಸಗಿ ಕೋವಿಡ್ -19 ಆಸ್ಪತ್ರೆಯಲ್ಲಿ ಶುಕ್ರವಾರ ಆಕಸ್ಮಿಕ ಅಗ್ನಿ ಅವಗಡ ಸಂಭವಿಸಿ ಹತ್ತು…
ಕೇರಳ: ಸತತ ಎರಡನೇ ಬಾರಿ ಅಧಿಕಾರಕ್ಕೆ ಪಿಣರಾಯಿ ನೇತೃತ್ವದ ಎಡರಂಗ ಸರಕಾರ
ತಿರುವನಂತಪುರಂ : ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ದಿನಾಂಕ ಸಮೀಪಿಸುತ್ತಿದೆ. ಚುನಾವಣಾ ಪೂರ್ವ ಸಮೀಕ್ಷಗಳ ಪ್ರಕಾರ ಜನತೆಯ ನಿರ್ಧಾರದ…
ಇಂದು ಪ್ರಜಾಪ್ರಭುತ್ವಕ್ಕೆ ದುಃಖದ ದಿನ : ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ : ರಾಜ್ಯಸಭೆಯಲ್ಲಿ ರಾಷ್ಟ್ರೀಯ ರಾಜಧಾನಿ(ತಿದ್ದುಪಡಿ) ಮಸೂದೆ-2021 ಕೇಂದ್ರವು ಲೋಕಸಭೆ-ರಾಜ್ಯಸಭೆಗಳಲ್ಲಿ ಅಂಗೀಕಾರ ಮಾಡಿದ್ದು ಇದೊಂದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಿದೆ ಎಂದು ದೆಹಲಿ…
ಸಂಸತ್ತಿನ ಸ್ಥಾಯೀ ಸಮಿತಿಯ ರೈತ-ವಿರೋಧಿ ಮತ್ತು ಜನ-ವಿರೋಧಿ ಶಿಫಾರಸು ರೈತರಿಗೆ ಮಾಡಿರುವ ಅವಮಾನ, ವಿಶ್ವಾಸಘಾತ -ಎಐಕೆಎಸ್ ಖಂಡನೆ
ದೆಹಲಿ : ಅಗತ್ಯ ಸರಕುಗಳು(ತಿದ್ದುಪಡಿ) ಕಾಯ್ದೆ, 2020ನ್ನು ಜಾರಿಗೆ ತರಬೇಕೆಂದು ಆಹಾರ, ಬಳಕೆದಾರ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೇಲಿನ…
ಕೇರಳದ ಸಾಕ್ಷರರ ಮುಂದೆ ಬಿಜೆಪಿ ಆಟ ನಡೆಯಲಿಲ್ಲ – ಬಿಜೆಪಿ ಶಾಸಕ !
ತಿರುವನಂತಪುರಂ: ಕೇರಳ ರಾಜ್ಯ ಇತರ ರಾಜ್ಯಗಳಿಗೆ ಹೋಲಿಸಿದರೆ ಭಿನ್ನವಾಗಿದೆ. ಇಲ್ಲಿ ಶೇಕಡಾ 90ರಷ್ಟು ಸಾಕ್ಷರತೆ ಇದೆ. ಇಲ್ಲಿನ ಜನರು ಯೋಚಿಸುತ್ತಾರೆ, ಚರ್ಚಿಸುತ್ತಾರೆ.…
ಮತಯಂತ್ರ, ವಿವಿಪಿಎಟಿ ಮತ್ತು ಚುನಾವಣಾ ಬಾಂಡ್ ಗಳ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಬೇಕು: ಯೆಚೂರಿ
ನವ ದೆಹಲಿ : ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತ್ರಿಪಡಿಸಲು ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು…
ದೆಹಲಿ ರಾಜ್ಯಕ್ಕೆ ಇರುವ ಅಧಿಕಾರವನ್ನು ಕಸಿದುಕೊಳ್ಳಬೇಡಿ: ಮಲ್ಲಿಕಾರ್ಜುನ ಖರ್ಗೆ
ನವದೆಹಲಿ : ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿದ ದೇಶದ ರಾಜಧಾನಿ ದೆಹಲಿ ರಾಜ್ಯಕ್ಕೆ ಸಂಬಂಧಿಸಿ ತಂದಿರುವ ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ)…
ಗೃಹ ಸಚಿವರ ನೂರು ಕೋಟಿ ಹಗರಣ – ರಾಜೀನಾಮೆಗೆ ಹೆಚ್ಚಿದ ಒತ್ತಡ
ಮುಂಬೈ: ಕಳೆದ ಕೆಲ ದಿನಗಳಿಂದ ತಮ್ಮ ಬಗ್ಗೆ ಕೇಳಿಬರುತ್ತಿರುವ ಅಪಪ್ರಚಾರದ ಬಗ್ಗೆ ತೀವ್ರ ತಲ್ಲಣಗೊಂಡಿದ್ದು, ಪರಂ ಬಿರ್ ಸಿಂಗ್ ಅವರ ಆರೋಪದ…
45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ
ನವದೆಹಲಿ : ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ಕೋವಿಡ್-19 ಪ್ರಕರಣದ ಎರಡನೇ ಅಲೆ ಉಲ್ಬಣಗೊಳ್ಳುತ್ತಿದೆ. ಇಂದು ನಡೆದ ಕೇಂದ್ರ ಸರಕಾರದ ಸಚಿವ ಸಂಪುಟ…
ಸಂಸದನಿಂದ ಆಸಿಡ್ ದಾಳಿ ಬೆದರಿಕೆ: ನವನೀತ್ ಕೌರ್ ರಾಣಾ ಆರೋಪ
ಶಿವಸೇನ ಸಂಸದ ಅರವಿಂದ ಸಾವಂತ್ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ನವನೀತ್ ಕೌರ್ ರಾಣಾ ಒತ್ತಾಯ ಆಸಿಡ್ ದಾಳಿ ಮಾಡುವ ಫೋನ್ ಕರೆಗಳು…
ಮತಪಟ್ಟಿಯಲ್ಲಿ ಅಕ್ರಮ: ಇದು ಸಂಘಟಿತ ಕ್ರಮವೇನಲ್ಲ : ಪಿಣರಾಯಿ ವಿಜಯನ್
ತಿರುವನಂತಪುರಂ: ಮತದಾರರ ಪಟ್ಟಿಯಲ್ಲಿ ಒಬ್ಬ ಮಹಿಳೆ ವಿವಿಧ ಕಡೆಗಳಲ್ಲಿ ತಮ್ಮ ವಿವರಗಳು ದಾಖಲಾಗಿರುವ ಹಿಂದೆ ಯಾವುದೇ ಸಂಘಟಿತ ಪ್ರಯತ್ನವಿಲ್ಲ. ಆ ಮಹಿಳೆ…
ಮದ್ಯ ಸೇವನೆಯಿಂದ ಸಾವನ್ನಪ್ಪಿದರೆ ಯಾವುದೇ ವಿಮಾ ಪರಿಹಾರ ಇಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: ವಿಪರೀತ ಮದ್ಯಪಾನ ಸೇವಿಸಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರಕ್ಕೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಕರಣಕ್ಕೆ…
24 ಗಂಟೆಯಲ್ಲಿ, 40,715 ಹೊಸ ಕೊರೋನ ಪ್ರಕರಣ , 199 ಸಾವು
ನವದೆಹಲಿ : ದೇಶದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಕಳದೆ 24 ಗಂಟೆಗಳಲ್ಲಿ 40,715 ಕರೋನ ಸೋಂಕು ಪ್ರಕರಣಗಳು ದಾಖಲಾಗಿದೆ. ಕಳೆದ…
ಮೂವರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ
ತ್ರಿಶೂರ್: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಮೂವರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. ಇದರಿಂದ ಬಿಜೆಪಿಗೆ…
- ಮಧ್ಯಮ ವರ್ಗದ ಸಂಖ್ಯೆಯಲ್ಲೂ ಮೂರನೇ ಒಂದು ಭಾಗದಷ್ಟು ಕುಸಿತ!
ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಪ್ರಸ್ತುತ ಇಡೀ ವಿಶ್ವದ ಆರ್ಥಿಕತೆ ಕುಸಿತ ಕಂಡಿದೆ. ಅದರಲ್ಲೂ ಅಭಿವೃದ್ಧಿ ಶೀಲ ರಾಷ್ಟ್ರಗಳ ಕಥೆ ಹೇಳ ತೀರದಂತಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಭಾಗಶಃ ಎಲ್ಲಾ ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಇದಕ್ಕೆ ಭಾರತವೂ ಹೊರತಾಗಿರಲಿಲ್ಲ. ಪರಿಣಾಮ ಸಾಂಕ್ರಾಮಿಕ ರೋಗ ಕೊರೊನಾ ಕಾರಣದಿಂದ ಉಂಟಾದ ಆರ್ಥಿಕ ಹಿಂಜರಿತದಿಂದಾಗಿ ಭಾರತದ ಮಧ್ಯಮ ವರ್ಗವು 2020 ರಲ್ಲಿ ಮೂರನೇ ಒಂದು ಭಾಗದಷ್ಟು ಕುಗ್ಗಿದೆ. ದೇಶದ ಬಡವರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ವಾಷಿಂಗ್ಟನ್ ಮೂಲದ ಪ್ಯೂ ರಿಸರ್ಚ್ ಸಂಸ್ಥೆಯ ವರದಿ ತಿಳಿಸಿದೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ವಾಷಿಂಗ್ಟನ್ ಮೂಲದ ಎನ್‌ಜಿಒ ಪ್ಯೂ ರಿಸರ್ಚ್ ಗುರುವಾರ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಆರ್ಥಿಕ ಹಿಂಜರಿತ ಹೆಚ್ಚಾಗಿದ್ದು ಬಡವರ ಸಂಖ್ಯೆಗೆ ದುಪ್ಪಟ್ಟುಗೊಳ್ಳಲು ಕಾರಣ ಎಂದು ಉಲ್ಲೇಖಿಸಿದೆ.
ಆರ್ಥಿಕ ಕುಸಿತದ ಪರಿಣಾಮವಾಗಿ, ಭಾರತದ ಮಧ್ಯಮ ವರ್ಗವು ಯಾವುದೇ ಸಾಂಕ್ರಾಮಿಕ ರೋಗಗಳಿಲ್ಲದಿದ್ದರೆ ಅದು ತಲುಪಬಹುದಾದ ಸಂಖ್ಯೆಯಿಂದ 32 ಮಿಲಿಯನ್ಂತಲೂ ಕಡಿಮೆಯಾಗಿದೆ (ದೈನಂದಿನ ಆದಾಯವು 725 ರಿಂದ 1,450 ರೂಪಾಯಿ ಇರುವ ವರ್ಗ). ಸಾಂಕ್ರಾಮಿಕ ರೋಗದ ಮೊದಲು, 2020 ರಲ್ಲಿ ಭಾರತದಲ್ಲಿ 99 ಮಿಲಿಯನ್ ಜನರು ಮಧ್ಯಮ ವರ್ಗಕ್ಕೆ ಸೇರಿದವರು ಎಂದು ಅಂದಾಜಿಸಲಾಗಿದೆ. ಪ್ಯೂ ವರದಿ ಪ್ರಕಾರ, ಈ ಸಂಖ್ಯೆ ಈಗ 66 ಮಿಲಿಯನ್ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ. ಕೊರೋನಾ ಪ್ರೇರಿತ ಆರ್ಥಿಕ ಹಿಂಜರಿತದಿಂದಾಗಿ ಭಾರತದಲ್ಲಿ ಬಡವರ ಸಂಖ್ಯೆ (ದೈನಂದಿನ ಆದಾಯ 145 ರೂ. ಅಥವಾ ಅದಕ್ಕಿಂತ ಕಡಿಮೆ) 75 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಇದು ಬಡತನದ ಜಾಗತಿಕ ಹೆಚ್ಚಳದ ಶೇ.60 ರಷ್ಟಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ಬೇಡಿಕೆ ಈಗ ಎಂದಿಗಿಂತ ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ಭಾರತದಲ್ಲಿ ಬಡವರ ಸಂಖ್ಯೆ 134 ಮಿಲಿಯನ್ ತಲುಪುವ ನಿರೀಕ್ಷೆಯಿದೆ. ಇದು ಆರ್ಥಿಕ ಹಿಂಜರಿತದ ಮೊದಲು ಅಂದಾಜು ಮಾಡಲಾದ 59 ದಶಲಕ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ಭಾರತ ಮತ್ತು ಚೀನಾ ಒಟ್ಟಾಗಿ ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ಹೊಂದಿರುವುದರಿಂದ, ಪ್ಯೂ ರಿಸರ್ಚ್ ಎರಡೂ ದೇಶಗಳನ್ನು ಒಟ್ಟಿಗೆ ಅಧ್ಯಯನ ಮಾಡಿದೆ. ಭಾರತವು ಆಳವಾದ ಆರ್ಥಿಕ ಹಿಂಜರಿತದಲ್ಲಿ ಮುಳುಗಿತು. ಆದರೆ ಚೀನಾವು ಆರ್ಥಿಕ ಸಂಕುಚಿತತೆಯನ್ನು ತಡೆಯಲು ಸಾಧ್ಯವಾಯಿತು ಎಂದು ವರದಿ ವಿವರಿಸಿದೆ.
ಸಾಂಕ್ರಾಮಿಕ ರೋಗದ ಮೊದಲು, ವಿಶ್ವಬ್ಯಾಂಕ್ 2020 ರಲ್ಲಿ ಭಾರತದಲ್ಲಿ ನೈಜ ಜಿಡಿಪಿಯಲ್ಲಿ (ಶೇ. 5.8) ಮತ್ತು ಚೀನಾದಲ್ಲಿ (ಶೇ. 5.9) ಬಹುತೇಕ ಸಮಾನ ಬೆಳವಣಿಗೆಯನ್ನು ಅಂದಾಜಿಸಿತ್ತು.