” ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೆ” ಟ್ರೋಲ್ ಆದ ಮೋದಿ ಹೇಳಿಕೆ

ನವದೆಹಲಿ : ಬಾಂಗ್ಲಾದೇಶದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳಿದ ನರೇಂದ್ರ ಮೋದಿ ಮಾಡಿದ ಭಾಷಣ ಸದ್ಯ ನಗೆಪಾಟಲಿಗೀಡಾಗುತ್ತಿದೆ. “ಬಾಂಗ್ಲಾದೇಶ ವಿಮೋಚನೆಯ ಸಂದರ್ಭದ ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ” ಎಂಬ ಅವರ ಹೇಳಿಕೆಯು ಸಾಮಾಜಿಕ ತಾಣದಾದ್ಯಂತ ಟ್ರೋಲ್‌ ಆಗುತ್ತಿದೆ. ಈ ನಡುವೆ #LieLikeModi ಎಂಬ ಹ್ಯಾಶ್‌ ಟ್ಯಾಗ್‌ ಟ್ವಿಟರ್ನಲ್ಲಿ  ಟ್ರೆಂಡಿಂಗ್‌ ಆಗಿದೆ.

ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು 50ನೇ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ಆ ದೇಶದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಬಾಂಗ್ಲಾದೇಶದ ಸ್ವಾತಂತ್ರಕ್ಕಾಗಿ ಪ್ರತಿಭಟನೆ ನಡೆಸಿದ್ದು ತನ್ನ ರಾಜಕೀಯ ಜೀವನದ ಮೊದಲ ಪ್ರತಿಭಟನೆಗಳಲ್ಲಿ ಒಂದಾಗಿತ್ತು. ನನ್ನ ಸಹೋದ್ಯೋಗಿಗಳು ಮತ್ತು ನಾನು ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸತ್ಯಾಗ್ರಹದ ಸಮಯದಲ್ಲಿ ಜೈಲಿಗೆ ಹೋಗಲು ನನಗೆ ಅವಕಾಶ ಸಿಕ್ಕಿತು “ಎಂದು ಅವರು ಹೇಳಿಕೆ ನೀಡಿದ್ದರು.

ಮೋದಿಯವರ ಈ ಹೇಳಿಕೆಗೆ ಟ್ವಿಟರ್ ಮತ್ತು ಫೆಸ್ಬುಕ್ ನಲ್ಲಿ ನೆಟ್ಟಿಗರು ಆಕ್ರೋಶವ್ಯಕ್ತ ಪಡಿಸಿದ್ದಾರೆ. ಪ್ರಧಾನಿ ಮೋದಿ ತಪ್ಪಿಯೂ ಸಹ ಒಂದು ಸತ್ಯ ಹೇಳುವುದಿಲ್ಲ” ಎಂದು ಸಾಮಾಜಿಕ ತಾಣದಲ್ಲಿ ಕಾಂಗ್ರೆಸ್‌ ಮುಖಂಡ ಜೈರಾಮ್‌ ರಮೇಶ್ ವ್ಯಂಗ್ಯವಾಡಿದ್ದಾರೆ. “ಬರ್ಲಿನ್‌ ಗೋಡೆ ಬಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅದರ ಮೇಲೆ ಕೂತಿದ್ದರು”,ಕ್ಯಾಲಿಕಟ್‌ ನಲ್ಲಿ ವಾಸ್ಕೋಡಗಾಮನನ್ನು ಸ್ವಾಗತಿಸಿದ್ದು ನರೇಂದ್ರ ಮೋದಿ ” ಎಂದು ಕಾಂಗ್ರೆಸ್‌ ವಕ್ತಾರ ಶ್ರೀವತ್ಸ ಟ್ವೀಟಿಸಿದ್ದಾರೆ.

“ಅವರನ್ನು ಯಾವಾಗ ಅರೆಸ್ಟ್‌ ಮಾಡಲಾಗಿತ್ತು? ಅದರ ಕುರಿತು ಫೈಲ್‌ ಗಳಲ್ಲಿ ಏನಾದರೂ ದಾಖಲೆಗಳಿವೆಯೇ? ಎಂದು ಮಾಜಿ ಐಎಫ್‌ ಎಸ್‌ ಆಫೀಸರ್‌ ಕೆಸಿ ಸಿಂಗ್‌ ಪ್ರಶ್ನಿಸಿದ್ದಾರೆ.

ಮೋದಿ ಅವರು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಅವರನ್ನು ಜೈಲುವಾಸ ಅನುಭವಿಸಿದ್ದರು ಎಂದು ಹೇಳುತ್ತಾರೆ. ಆದರೆ ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಲು ಭಾರತ ಪಾಕಿಸ್ತಾನದೊಂದಿಗೆ ಯುದ್ಧ ಮಾಡುತ್ತಿರಲಿಲ್ಲವೇ? ಹಾಗಾದರೆ ಅವರು ಜೈಲಿಗೆ ಹೋದದ್ದಾದರೂ ಎಲ್ಲಿಗೆ? ಅವರು ಪಾಕಿಸ್ತಾನದಲ್ಲಿದ್ದರೇ? ” ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಂಯೋಜಕರಾದ ಗೌರವ್ ಪಾಂಡಿ ಟ್ವೀಟ್‌ ಮಾಡಿದ್ದಾರೆ.

ಫೆಸ್ಬುಕ್ ನಲ್ಲಿ #LieLikeModi ಎಂಬ ಹ್ಯಾಶ್ ಟ್ಯಾಗ್ ನಲ್ಲಿ 1000 ಕ್ಕೂ ಹೆಚ್ಚು ಪೋಸ್ಟ್ ಗಳು ವೈರಲ್ ಆಗಿವೆ. ಟ್ವಿಟರ್ ನಲ್ಲಿ 1.44.000 ಟ್ವೀಟ್ ಗಳನ್ನು ಮಾಡಲಾಗಿದೆ.  ಟ್ವಿಟರ್ ನಲ್ಲಿ #BalaNarendra ಎಂಬ ಹ್ಯಾಶ್ ಟ್ಯಾಗ್ ನಲ್ಲಿ 3000 ಕ್ಕೂ ಹೆಚ್ಚು ಟ್ವೀಟ್ ಮಾಡಲಾಗಿದೆ. #freedomstruggle  ಎಂಬ ಹ್ಯಾಶ್ ಟ್ಯಾಗ್ ನಲ್ಲಿ 7770 ಟ್ವೀಟ್ ಮಾಡಿಲಾಗಿದೆ.

ವೈರಲ್ ಆದ ಕೆಲ ಟ್ವೀಟ್ ಗಳು ಇಲ್ಲಿವೆ.

Donate Janashakthi Media

Leave a Reply

Your email address will not be published. Required fields are marked *