ಬೆಂಗಳೂರು | ಹುಸಿ ಬಾಂಬ್ ಸಂದೇಶ ಪ್ರಕರಣ; ಪತಿಯ ಮೇಲಿನ ಸೇಡಿಗಾಗಿ ಕೃತ್ಯವೆಸಗಿದ ಪತ್ನಿ ಬಂಧನ

ಬೆಂಗಳೂರು: ಹುಸಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪದ ಮೇಲೆ ಓರ್ವ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ತನ್ನ ಪ್ರಿಯಕರಿನಿಗಾಗಿ ಮಹಿಳೆ ತನ್ನ ಪತಿಯನ್ನು ಸಂಕಷ್ಟಕ್ಕೆ ಸಿಲುಕಿಸಲು ಹುಸಿ ಬಾಂಬ್ ಸಂದೇಶ ಕಳುಹಿಸಿದ್ದಳು ಎಂದು ತಿಳಿದು ಬಂದಿದೆ. ಪ್ರಕರಣ

36 ವರ್ಷದ ವಿದ್ಯಾರಾಣಿ ಬಂಧಿತ ಮಹಿಳೆ. ಅನೇಕಲ್‌ನ ಮಾರುತಿ ಬಡಾವಣೆಯಲ್ಲಿ ಉತ್ತರ ಕರ್ನಾಟಕ ಮೂಲದ ವಿದ್ಯಾರಾಣಿ-ಕಿರಣ್ ದಂಪತಿ ನೆಲೆಸಿದ್ದಾರೆ. ಬಂಧಿತ ವಿದ್ಯಾರಾಣಿಗೆ 6 ತಿಂಗಳ ಹಿಂದೆ ಉದ್ಯೋಗ ಹುಡುಕುವ ಆಯಪ್‌ ‘ಅಪ್ನಾ’ ಮೂಲಕ ಬಿಹಾರ ಮೂಲದ ರಾಮ್‌ ಕೇಶವ್ ಪ್ರಸಾದ್ (38) ಎಂಬುವರ ಪರಿಚಯವಾಗಿದೆ. ಅದು ಪ್ರೀತಿಗೆ ತಿರುಗೆ ಈತನೊಂದಿಗೆ ವಿದ್ಯಾರಾಣಿ ಗಂಟೆಗಟ್ಟಲೇ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದರಿಂದ ಕುಪಿತಗೊಂಡ ಪತಿ ಕಿರಣ್ ಈಕೆಯ ಮೊಬೈಲ್ ಅನ್ನು ಹೊಡೆದುಹಾಕಿದ್ದಾರೆ. ಮತ್ತೆ ಬೇರೊಂದು ಮೊಬೈಲ್ ಖರೀದಿಸಿದ್ದ ವಿದ್ಯಾರಾಣಿ ಪತಿಯ ಮೇಲಿನ ಸೇಡಿಗೆ ತನಿಖಾ ಸಂಸ್ಥೆಗಳಗೆ ಹುಸಿ ಬಾಂಬ್ ಸಂದೇಶ ಕಳುಹಿಸಿದ್ದಾಳೆ.

ಇದನ್ನೂ ಓದಿ:ರಾಜಧಾನಿಯಲ್ಲಿ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ

ಅದೇ ದಿನ ಅಂದರೆ ಡಿಸೆಂಬರ್ 1ರ ಶುಕ್ರವಾರ ಬೆಂಗಳೂರು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಬಾಂಬ್ ಸ್ಫೋಟಿಸುವ ಇ-ಮೇಲ್ ಸಂದೇಶ ಬಂದಿತ್ತು. ಹೀಗಾಗಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಕಿರಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದ್ಯಾರಾಣಿಯ ತನ್ನ ಪತಿಯ ಮೊಬೈಲ್‌ನಿಂದ ತನಿಖಾ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವುದು ಬಯಲಾಗಿದೆ. ಸದ್ಯ ಈಕೆಯನ್ನು ಬಂಧಿಸಿರುವ ಪೊಲೀಸರು ಶಾಲೆಗಳಿಗೆ ಕಳುಹಿಸಿರುವ ಬಾಂಬ್ ಸ್ಫೋಟದ ಸಂದೇಶಕ್ಕೂ ಇದಕ್ಕೂ ಸಂಬಂಧವಿದೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಈಕೆಯ ಪ್ರಿಯಕರ ರಾಮ್ ಕೇಶ್ ಪ್ರಸಾದ್ ಬಂಧನಕ್ಕೆ ಪೊಲೀಸರ ಒಂದು ತಂಡ ಬಿಹಾರಕ್ಕೆ ತೆರಳಿದೆ ಎಂದು ಬೆಂಗಳೂರು ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಲ್ದಂಡಿ ತಿಳಿಸಿದ್ದಾರೆ.

ಡಿಸೆಂಬರ್ 1ರ ಶುಕ್ರವಾರ ಅನೇಕಲ್ ಸೇರಿದಂತೆ ಬೆಂಗಳೂರಿನ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಆತಂಕಗೊಂಡಿದ್ದ ಪೋಷಕರು ಶಾಲೆಗಳಿಗೆ ದೌಡಾಯಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದರು.

ಈ ರೀತಿಯ ಅನೇಕ ಘಟನೆಗಳನ್ನು ಮುಸ್ಲಿಂರೇ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಎಲ್ಲಾ ಪ್ರಕರಣಗಳಲ್ಲಿ ಮುಸ್ಲಿಂ ಸಮುದಾಯದ ಹೆಸರನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಪಾಕಿಸ್ತಾನ್‌, ಅಲ್ಲಾ ಹೆಸರಿನಲ್ಲಿ ಸುಳ್ಳು ಪತ್ರಗಳನ್ನು ಸೃಷ್ಟಿಸುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 07 | ಭಾಗ 01 Live #wintersession2023

Donate Janashakthi Media

Leave a Reply

Your email address will not be published. Required fields are marked *