ಬೀದರ್ : 19 ವರ್ಷದ ಯುವತಿಯೊಬ್ಬಳು ತನ್ನ ಮನೆಯಿಂದ ನಾಪತ್ತೆಯಾಗಿ ಕೆಲವು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪೊಲೀಸರು ಆರಂಭದಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಶವಪರೀಕ್ಷೆ ವರದಿ ಮತ್ತು ಆರೋಪಿಯ ಹೇಳಿಕೆಯ ಆಧಾರದ ಮೇಲೆ ಅದನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಎಂದು ದಾಖಲಿಸಲಾಗಿದೆ. ಕಲ್ಲಿನಿಂದ ತಲೆಗೆ ಹೊಡೆದು ಹಲ್ಲೆ ನಡೆಸಿದ ಕಾರಣ ಮಾರಣಾಂತಿಕ ಗಾಯವಾಗಿದೆ ಎಂದು ವರದಿ ಬಹಿರಂಗಪಡಿಸಿದೆ.
ಇದನ್ನು ಓದಿ : ಆಂಬ್ಯುಲೆನ್ಸ್ ನಿರಾಕರಣೆ : ಮಕ್ಕಳಿಬ್ಬರ ಶವ ಹೊತ್ತುಕೊಂಡೇ 15 ಕಿಮೀ ಸಾಗಿದ ಕುಟುಂಬ!
ಮೂವರು ಆರೋಪಿಗಳಲ್ಲಿ ಒಬ್ಬರು ಲೈಂಗಿಕ ದೌರ್ಜನ್ಯ ಎಸಗಿ ಕೊಲೆಯನ್ನು ನಡೆಸಿದರೆ, ಇತರ ಇಬ್ಬರು ಸ್ನೇಹಿತರಾಗಿದ್ದು, ಅಪರಾಧ ನಡೆಯುವಾಗ ವಾಹನದಲ್ಲಿ ಕಾಯುತ್ತಿದ್ದರು. ಪ್ರಮುಖ ಆರೋಪಿಯು ಸಂತ್ರಸ್ತೆಯೊಂದಿಗೆ ಸಂಬಂಧ ಹೊಂದಿದ್ದು, ಪ್ರಕರಣದ ಹೆಚ್ಚಿನ ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಿಳೆ ಪರಿಶಿಷ್ಟ ಪಂಗಡಕ್ಕೆ ಸೇರಿದವಳು ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ, ನೂರಾರು ಜನರು, ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು ಬೀದರ್‌ನ ಬೀದಿಗಿಳಿದು ಲೈಂಗಿಕ ದೌರ್ಜನ್ಯ ಮತ್ತು ಹತ್ಯೆಯನ್ನು ವಿರೋಧಿಸಿದರು. ಬೃಹತ್ ಪ್ರತಿಭಟನೆಯಿಂದಾಗಿ ನಗರದಲ್ಲಿ ರಸ್ತೆಗಳು ಕೂಡ ಬಂದ್ ಆಗಿದ್ದವು.
ಇದನ್ನು ನೋಡಿ : ಬೀದರ್: 19 ವರ್ಷದ ಯುವತಿಯ ಮೇಲೆ ಅತ್ಯಾಚಾರ, ಕೊಲೆ