ಕೋವಿಡ್ ಲಸಿಕೆ ಅಡ್ಡ ಪರಿಣಾಮಗಳ ಕುರಿತು ಹೂಡಲಾಗಿದ್ದ ದಾವೆ ವಜಾ

ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ ದೇಶದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ಕೋವಿಡ್ ಲಸಿಕೆ ಅಡ್ಡ ಪರಿಣಾಮಗಳ ಕುರಿತು ಹೂಡಲಾಗಿದ್ದ ದಾವೆ ವಜಾಗೊಂಡಿದೆ.

ಜನರಿಗೆ ಕೋವಿಡ್-19 ಲಸಿಕೆಯಿಂದ ಸಾಕಷ್ಟು ಅಡ್ಡಪರಿಣಾಮಗಳಾಗಿವೆ. ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ.

ಇದನ್ನೂ ಓದಿ: `ಗೃಹಲಕ್ಷ್ಮೀ’ ಹಣದಿಂದ ವಿದ್ಯಾರ್ಥಿಗಳಿಗೆ `ಗ್ರಂಥಾಲಯ’ ಕಟ್ಟಿಸಿದ `ಮಹಾ ತಾಯಿ’

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಜೆ.ಬಿ.ಪಾರ್ದಿವಾಲ್ ಅವರಿದ್ದ ಪೀಠ ಈ ಪಿಐಎಲ್‌ನ್ನು ವಜಾಗೊಳಿಸಿತು. ಈ ಅರ್ಜಿಯ ಪ್ರಯೋಜನ ಏನು? ಎಂದು ಪ್ರಶ್ನಿಸಿದ ಪೀಠ, ಲಸಿಕೆ ಪಡೆಯದಿದ್ದರೆ ಅದರ ಪರಿಣಾಮಗಳು ಏನು ಎಂಬುದನ್ನು ನೀವು ಬಲ್ಲಿರಾ? ನಾವು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಲು ಬಯಸುವುದಿಲ್ಲ.

ಆದರೆ, ಪ್ರಚಾರ ಪಡೆಯಲು ನೀವು ಇದನ್ನು ಸಲ್ಲಿಸಿದ್ದಿರಿ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.ಪ್ರಿಯಾ ಮಿಶ್ರಾ ಹಾಗೂ ಇತರರು, ಕೋವಿಡ್-19 ಲಸಿಕೆ ಪಡೆದವರಿಗೆ ರಕ್ತ ಹೆಪ್ಪುಗಟ್ಟುವಿಕೆ ಅಂತಹ ಅಡ್ಡಪರಿಣಾಮಗಳಾಗುತ್ತಿವೆ ಎಂದು ಪಿಐಎಲ್ ಸಲ್ಲಿಸಿದ್ದರು.

ಇದನ್ನೂ ನೋಡಿ: ವಿಜಯೇಂದ್ರ ವಿರುದ್ಧದ ಪ್ರಕರಣ ಈಡಿ ಕಣ್ಣಿಗೆ ಕಾಣುತ್ತಿಲ್ಲವೇ?: ಪ್ರಿಯಾಂಕ್ ಖರ್ಗೆJanashakthi Media

Donate Janashakthi Media

Leave a Reply

Your email address will not be published. Required fields are marked *