ವೇದರಾಜ್ ಎನ್.ಕೆ
ಕಳೆದ ಸುಮಾರು ಒಂದು ತಿಂಗಳ ಬೆಳವಣಿಗೆಗಳು ಕಾರ್ಟೂನಿಸ್ಟರನ್ನೇ ಹುಡುಕಿಕೊಂಡು ಬರುವಂತಿದ್ದವು. ಮೊದಲು ಕರ್ನಾಟಕದ ಚುನಾವಣೆಗಳಲ್ಲಿ ‘ಜೈಭಜರಂಗಬಲಿ’ ಅಥವ 40% ಕಟ್, ನಂತರ 2000ರೂ. ನೋಟಿಗೆ ಮತ್ತು ಅದರಲ್ಲಿದ್ದ ಚಿಪ್ಪಿಗೆ ಶ್ರದ್ಧಾಂಜಲಿ, ಅದರ ಬೆನ್ನ ಹಿಂದೆಯೇ ಹೊಸ ಸಂಸದ್‍ಭವನದ ಉದ್ಘಾಟನೆಯಸುತ್ತ ಹುಟ್ಟಿದ/ಹುಟ್ಟಿಸಿದವಿವಾದ, ಅವನ್ನೆಲ್ಲ ಮೀರಿಸುವಂತೆ ‘ಸೆಂಗೋಲ್’ ರಂಗಪ್ರವೇಶ. ಮತ್ತು ಇವುಗಳ ನಡುವೆಯೇ ಕುಸ್ತಿಮಹಾ ಸಂಘದ ಅಧ್ಯಕ್ಷರು ಮತ್ತು ದಿಲ್ಲಿ ಪೋಲೀಸ್ ಪ್ರತಾಪಗಳು ಮತ್ತು ಹತ್ತನೇ ವರ್ಷದ ಆರಂಭ. ಇವೆಲ್ಲವುಗಳತ್ತ ಒಂದು ಪಕ್ಷಿನೋಟ:
ಕರ್ನಾಟಕ ಫಲಿತಾಂಶ-2023:
ಮೇ 10ರಂದು ಕರ್ನಾಟಕದ ಮತದಾರರ ತೀರ್ಪು ಹೊರಬಿತ್ತು. ಆಳುವ ಪಕ್ಷದಶಕ್ತಿ 104ರಿಂದ 66ಕ್ಕಿಳಿಯಿತು..

ಬಹುಶಃ ಮತದಾನ ಮಾಡುವಾಗ ಪ್ರಧಾನ ಮಂತ್ರಿಗಳ ಸಲಹೆಯಂತೆ ಜೈಭಜರಂಗಬಲಿ ಎಂದು ಮತದಾರರು ಧ್ಯಾನಿಸಿದರು,

ಗೃಹಮಂತ್ರಿಗಳು ಪಕ್ಕದಲ್ಲೇ ಇದೆ ಎಂದು ನೆನಪಿಸಿದ ಕೇರಳದತ್ತ ವೂಮತದಾರರು ಗಮನ ಹರಿಸಿದಂತೆ ಕಾಣುತ್ತದೆ!

***
2000ರೂ. ನೋಟಿನಕತೆ
ಮೇ 19ರಂದು ರಿಜರ್ವ್ ಬ್ಯಾಂಕ್ ವರ್ನರ್ ನವಂರ್ 08 , 2016ರಂದು ನೋಟು ರದ್ಧತಿಯೊಂದಿಗೆ ಪರಿಚಯಿಸಿದ 2000ರೂ. ನೋಟನ್ನು ಚಲಾವಣೆಯಿಂದ ಹಿಂತೆಗೆದು ಕೊಳ್ಳುತ್ತಿರುವುದಾಗಿ ಪ್ರಕಟಿಸಿದರು .

ಈ ಕ್ರಮವೂ ಕಪ್ಪು ಹಣದ ನಿವಾರಣೆಗಾಗಿ ಎಂದು ಭಕ್ತರಲ್ಲಿ ಹಲವರು ಹೇಳುತ್ತಿದ್ದಾರೆ. ಹಾಗಿದ್ದರೆ ಆಗತಂದದ್ದಾದರೂ ಏಕೆ ಎಂದೇನೂ ಈಗ ಕೇಳಬೇಕಾಗಿಲ್ಲ. ಏಕೆಂದರೆ ಅದು ಒಂದು ವಿಶಿಷ್ಟನೋಟು, ಅದರಲ್ಲಿ ಒಂದು ಚಿಪ್ ಅಳವಡಿಸಲಾಗಿದೆ ಎಂದು ಆಗಲೇ ಆಂಕರ್‍ಗಳು ‘ಸ್ಪಷ್ಟ’’ಪಡಿಸಿದ್ದರು ತಾನೇ?.ಆಚಿಪ್ ಕತೆ ಏನಾಯ್ತು ಎಂದು ಈಗ ಕೇಳಬೇಕಷ್ಟೇ. ವಾಸ್ತವವಾಗಿ ಆಚಿಪ್ಪನ್ನು ಈ ನೋಟಿನಲ್ಲಲ್ಲ, ಗೋದೀ ಮೀಡಿಯಾದ ಆಂಕರುಗಳ ಮೆದುಳುಗಳಲ್ಲಿ ನೆಟ್ಟಿದ್ದಿರಬಹುದು ಎಂದೀಗ ಹೇಳಬಹುದೇನೋ – ಈ ವ್ಯಂಗ್ಯಚಿತ್ರಕಾರರಂತೆ.

***
ಕುಸ್ತಿ ಮಹಾ ಸಂಘದ ಅಧ್ಯಕ್ಷ ಮತ್ತು ಆಳುವ ಪಕ್ಷದ ಸಂಸದನ ವಿರುದ್ಧ ಮಹಿಳಾ ಕುಸ್ತಿಪಟುಗಳ ಹೋರಾಟದ ಎರಡನೇ ಹಂತ ಜಂತರ್ಮಂತರ್‍ನಲ್ಲಿ ಮತ್ತೆ ಧರಣಿಯೊಂದಿಗೆ (ಎಪ್ರಿಲ್ 23ರಂದು) ಆರಂಭವಾಗಿ ತಿಂಗಳ ಮೇಲಾದರೂ ಕರ್ನಾಟಕದ ಚುನಾವಣೆಗಳಲ್ಲಿ ವ್ಯಸ್ತರಾಗಿದ್ದ ಪ್ರಧಾನಿಗಳ, ಗೃಹ ಮಂತ್ರಿಗಳ ದಿವ್ಯಮೌನ ಮುಂದುವರೆದಿತ್ತು ಎಂದಿನಂತೆ..

ನಂತರವೂ ದಿವ್ಯ ಮೌನ ಮುಂದುವರದಿದೆ. ಏಕೆಂದರೆ ಈವೇಳೆಗೆ ಪ್ರಧಾನಿಗಳ ,ಗೃಹಮಂತ್ರಿಗಳ ಗಮನವೆಲ್ಲ ಹೊಸ ಸಂಸದ್ ಭವನದ ಉದ್ಘಾಟನೆಯತ್ತ…
***
ಹೊಸ ಸಂಸದ್ ಭವನದ ‘ಗೃಹಪ್ರವೇಶ’.. ..!
ಅವರ ಗಮನವಷ್ಟೇ ಅಲ್ಲ, ಎಲ್ಲರ ಗಮನ ಕರ್ನಾಟಕದಲ್ಲಿ 40%ಕಟ್, ನೋಟುರದ್ದತಿಕತೆ, ಜಂತರ್‍ಮಂತರ್ ಬಿಟ್ಟು ಹೊಸ ಸಂಸದ್ ಭವನದತ್ತ ತಿರುಗುವಂತೆ ಮಾಡಲಾಯಿತು ಎನ್ನುತ್ತಾರೆ ಕೆಲವು ರಾಜಕೀಯ ವೀಕ್ಷಕರು. – ಏಕೆಂದರೆ, ಈ ಉದ್ಘಾಟನೆಯನ್ನು ನಿರೀಕ್ಷೆಯಂತೆ, ಸಂಪ್ರದಾಯದಂತೆ, ಸಂಸತ್ತಿನ ಮುಖ್ಯಸ್ಥರಾದರಾಷ್ಟ್ರಪತಿಗಳಲ್ಲ- ಕೇವಲ ಕಾರ್ಯಾಂಗದ ಮುಖ್ಯಸ್ಥರಾದ ಪ್ರಧಾನ ಮಂತ್ರಿಗಳು ಮಾಡುತ್ತಾರೆ ಎಂದು ಸರಕಾರ ನಿರ್ಧರಿಸಿತು. ಈ ಸಮಾರಂಭಕ್ಕೆ ಸಂಸತ್ತಿನ ಎರಡೂ ಸದನಗಳ ಸಭಾಧ್ಯಕ್ಷರುಗಳಿಗೂ ಆಹ್ವಾನವಿಲ್ಲ! ಆದ್ದರಿಂದ ಪ್ರಮುಖ ವಿರೋಧ ಪಕ್ಷಗಳೆಲ್ಲವೂ ಸಮಾರಂಭವನ್ನು ಬಹಿಷ್ಕರಿಸಿದವು.

ಒಬ್ಬರ ಏಕಾಂಗಿ ಸಾಧನೆ!ಏಕ್ ಅಕೇಲಾ…


***
‘ಸೆಂಗೋಲ್’ ರಂಗಪ್ರವೇಶ
ಇದ್ದಕ್ಕಿದ್ದಂತೆ, ಮೇ 24 ರಂದು ಗೃಹ ಮಂತ್ರಿಗಳು ಒಂದು ಪತ್ರಿ ಕಾಗೋಷ್ಠಿ ನಡೆಸಿ ಇದರಲ್ಲಿ ‘ಸೆಂಗೋಲ್’ ರಂಗ ಪ್ರವೇಶ ಮಾಡಿಸಿರುವುದು ಈಗ ಹಳೆಯಸುದ್ದಿ. ಇದಕ್ಕೆ ಸರಕಾರ ಪ್ರಚರಪಡಿಸಿದ ಕಥನ ಬಹುಪಾಲು ಕಟ್ಟು ಕತೆ ಎಂಬುದೂ ಈಗ ಗೋದೀ ಮೀಡಿಯಾದಲ್ಲಿ ಬಿಟ್ಟು ಇತರ ಎಲ್ಲ ಮಾಧ್ಯಮಗಳಲ್ಲಿ ಸಾಕಷ್ಟು ಬಯಲಿಗೆ ಬಂದಿದೆ. ಆದರೆ ಎಂದಿನಂತೆ ಸರಕಾರ ತನ್ನ ಕಥನಕ್ಕೆ ಅಂಟಿಕೊಂಡಿತು. ಏಕೆಂದರೆ ಇಂತಹ ಒಂದು ಕಥನ ಆಳುವಪಕ್ಷಕ್ಕೆ ಅಗತ್ಯವಾಗಿತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು..

ಈ ‘ರಾಜದಂಡ’ ದಮೂಲಕ ಹೊಸ ಭವನದ ಉದ್ಘಾಟನೆ ಪ್ರಧಾನ ಮಂತ್ರಿಗಳ ‘ಗೃಹಪ್ರವೇಶ’ದಿಂದ ‘ಪಟ್ಟಾಭಿಷೇಕ’ ದಸ್ವರೂಪ ಪಡೆಯಿತು.

***
ಮೇ 27ರಂದು ತಮಿಳುನಾಡಿನಿಂದ ಮಠಾಧೀಶರುಗಳ, ಪುರೋಹಿತರುಗಳ ಒಂದು ಗುಂಪನ್ನು ಪ್ರಧಾನಿಗಳು ಬರಮಾಡಿಕೊಂಡರು.

ದೇಶದ ಮೊದಲ ಪ್ರಧಾನಿಗೆ ಕೊನೆಯ ಬ್ರಿಟಿಶ್‍ವೈಸರಾಯ್ ಅಧಿಕಾರದ ಹಸ್ತಾಂತರದ ಸಂಕೇತವಾಗಿ ಕೊಟ್ಟರೆನ್ನಲಾದ ಮತ್ತು ನೆಹರೂ ಅದನ್ನು ಕಡೆಗಣಿಸಿ ಮ್ಯೂಸಿಯಂಗೆ ಕಳಿಸಿದರೆನ್ನಲಾದ ‘ರಾಜದಂಡ’ವನ್ನು ಲೋಕಸಭೆಯ ಸಭಾಧ್ಯಕ್ಷರ ಪೀಠದ ಹಿಂದೆ ಪ್ರತಿಷ್ಠಾಪಿಸಲು ಈ ಮಠಾಧೀಶರುಗಳನ್ನು ದೇಶದ ಪ್ರಧಾನಿಗಳು ಹಿಂಬಾಲಿಸಿದ ಅಭೂತಪೂರ್ವ ದೃಶ್ಯವನ್ನು ದೇಶಕಂಡಿತು.

ಮಹಾತ್ಮ ಗಾಂಧಿಯವರ ಚಾರಿತ್ರಿಕದಾಂಡೀಯಾತ್ರೆಯನ್ನು ಅಣಕಿಸುವಂತಿದ್ದ ರಾಜದಂಡಯಾತ್ರೆ, ವಾಸ್ತವವಾಗಿ ಇದರೊಂದಿಗೆ ಮುಂದಿನ ‘ದಂಡ’(ಡಂಡಾ ಅಂದರೆ ದೊಣ್ಣೆ) ಯಾತ್ರೆಯ ಉದ್ಘಾಟನೆಯೂ ಆಯಿತು.

ತಮಿಳು ನಾಡಿನಿಂದ ಬಂದ ಪುರೋಹಿತರುಗಳನ್ನು ಉದ್ದೇಶಿಸಿ ಮಾತಾಡುತ್ತ “ಈ ಸೆಂಗೋಲನ್ನು ಪ್ರಯಾಗರಾಜ್‍ನ ಆನಂದಭವನದಲ್ಲಿ ವಾಕಿಂಗ್‍ಸ್ಟಿಕ್ ಎಂದು ಪ್ರದರ್ಶಿಸಲಾಗಿತ್ತು..ಈ ಸರಕಾರ ಅದನ್ನು ಆನಂದ ಭವನದಿಂದ ಹೊರತಂದಿತು” ಎಂದರಂತೆ. ಇದರಲ್ಲಿ ಯಾವಸಂಗತಿಯೂ ನಿಜವಲ್ಲ ಎನ್ನುತ್ತಾರೆ ಪರಿಣಿತರು.
ಇದನ್ನು ದಿಲ್ಲಿಯರಾಷ್ಟ್ರೀಯ ಸಂಗ್ರಹಾಲಯ ದಿಂದ ತರಲಾಗಿತ್ತು. ನವಂಬರ್ 2022ರಲ್ಲಿ ಅಲ್ಲಿಗೆ ಅಲಹಾಬಾದಿನ (ಈಗಪ್ರಯಾಗರಾಜ್) ನಮ್ಯೂಸಿಯಂ ನಿಂದತರಲಾಗಿತ್ತು. ನೆಹರೂರವರ ವಾಕಿಂಗ್‍ಸ್ಟಿಕ್ ಎಂದು ಅಲ್ಲಿ ಇಡಲಾಗಿತ್ತು ಎಂಬು ದೂನಿಜವಲ್ಲ- ಅವರಿಗೆ ಉಡುಗೊರೆಯಾಗಿ ನೀಡಿದ ಚಿನ್ನದ ದಂಡ (ಗೋಲ್ಡನ್‍ಸ್ಟಿಕ್) ಎಂದು ಬರೆಯಲಾಗಿತ್ತಷ್ಟೇ” (ಮೀತೂಜೈನ್, ದಿವೈರ್, ಮೇ 29)
ಇದು ಚೋಳ ಸಾಮ್ರಾಜ್ಯದ ರಾಜದಂಡ, ರಾಜ ಗೋಪಾಲಾಚಾರಿಯವರ ಸಲಹೆಯಂತೆ ಮೌಂಟ್‍ಬ್ಯಾಟನ್ ಅಧಿಕಾರದಹ ಸ್ತಾಂತರ ಸಂಕೇತವಾಗಿ ನೆಹರೂರವರಿಗೆ ಕೊಟ್ಟರು ಎಂಬುದೆಲ್ಲವೂ ಯಾವುದೇ ದಾಖಲೆಗಳಿಲ್ಲದ ‘ವಾಟ್ಸ್ಆಪ್ ಇತಿಹಾಸ’ ದಸೃಷ್ಟಿ ಎಂದು ಈಗ ಗೊತ್ತಾಗಿದೆ. ಏತಕ್ಕಾಗಿ ಈ ಸೃಷ್ಟಿ ಎಂದು ತಿಳಿಯಲು ಬಹಳ ತಿಣುಕಬೇಕಾಗಿಲ್ಲ.
ಅದೇ ದಿನ, ಕೆಲವೇ ಮೀಟರುಗಳ ದೂರದಲ್ಲಿ ಜಂತರ್‍ಮಂತರ್‍ನಲ್ಲಿ ಈ ಹೊಸ‘ ರಾಜ ದಂಡ’ ದಲೈವ್ ಪ್ರದರ್ಶನವೂ ನಡೆಯಿತು.

ಬ್ರಿಟಿಶ್ವೈಸರಾಯ್ಕೊಟ್ಟರೆನ್ನಲಾದ, ಇದುವರೆಗೆ ಮ್ಯೂಸಿಯಂನಲ್ಲಿ ಸುಮ್ಮನೇ ಇರಿಸಲಾಗಿತ್ತು ಎನ್ನಲಾದ, ಮಠಾಧೀಶರುಗಳ ಆಶೀರ್ವಾದ ಪಡೆದ‘ ರಾಜದಂಡ’ ದಪ್ರಯೋಗ-ನ್ಯಾಯ ಕೇಳಿದ ಯುವ ಕುಸ್ತಿಪಟುಗಳ ಮೇಲೆ.

ಕೇಂದ್ರ ಗೃಹಮಂತ್ರಿಗಳ ಅಡಿಯಲ್ಲಿರುವ ದಿಲ್ಲಿ ಪೋಲೀಸರ ಮೇ 28ರ ಸಾಧನೆ ‘ರಾಜದಂಡ’ ಅವರಿಗೆ ಕೊಡಮಾಡಿದ ಶಕ್ತಿ


***
ಪ್ರಧಾನಿಗಳ ಪ್ರಕಾರ ಇದು ನವ ಭಾರತದ ಇನ್ನೊಂದು ಸಂಕೇತ..

ಅವರನುಡಿಗಳು ಈ ರೀತಿಯಲ್ಲಿ ಅಕ್ಷರಶಃ ನಿಜ ಎಂದು ವ್ಯಂಗ್ಯ ಚಿತ್ರಕಾರರುಗಳೂ ಅನು ಮೋದಿಸುತ್ತಿದ್ದಾರೆ ..


9 ವರ್ಷಗಳು ಮುಗಿದಿವೆ.. ..ಹತ್ತನೇ ವರ್ಷ ಆರಂಭವಾಗಿದೆ...‘ರಾಜದಂಡ’ ದೊಂದಿಗೆ

*****