ವೇದರಾಜ ಎನ್ ಕೆ
ಇದು ಈ ವಾರ ವ್ಯಂಗ್ಯಚಿತ್ರಕಾರರನ್ನು ಹುರಿದುಂಬಿಸಿದ, ಜತೆಗೆ ಕಕ್ಕಾಬಿಕ್ಕಿಯಾಗಿಸಿದ ಸುದ್ದಿಯಾಗಿರುವಂತೆ ಕಾಣುತ್ತದೆ.
ಪ್ರಧಾನ ಮಂತ್ರಿಗಳನ್ನು ಆರಿಸಿ ಕಳಿಸಿದ ವಾರಣಾಸಿಯಲ್ಲಿ 1583 ಕೋಟಿ ರೂ.ಗಳ ಹಲವು ಪ್ರಾಜೆಕ್ಟ್‌ಗಳನ್ನು ಉದ್ಘಾಟಿಸಲು ಬಂದ ಪ್ರಧಾನ ಮಂತ್ರಿಗಳು ತಮ್ಮ 32 ನಿಮಿಷಗಳ ಭಾಷಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳ “ಸರಿಸಾಟಿಯಿಲ್ಲದ ಕಾರ್ಯ”ವನ್ನು ಹಾಡಿಹೊಗಳಿದರಂತೆ.
(ಶೀರ್ಷಿಕೆಯ ವ್ಯಂಗ್ಯಚಿತ್ರ: ಕೋವಿಡ್ 2ನೇ ಅಲೆಯಲ್ಲಿ “ಫೇಲ್” ರಿಪೋರ್ಟ್ ಕಾರ್ಡ್ ಪಡೆದವರಿಂದ ಟಾಪರ್ ಸರ್ಟಿಫಿಕೇಟ್: ಕೃಪೆ: ಸತೀಶ ಆಚಾರ್ಯ/ಫೇಸ್‍ಬುಕ್)
***
ಎಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ ನಿರ್ವಹಣೆಯ ಬಗ್ಗೆ ಉತ್ತರ ಪ್ರದೇಶದ ಆಳುವ ವಲಯಗಳಲ್ಲೂ ಟೀಕೆ-ಟಿಪ್ಪಣಿಗಳು ಮತ್ತು ಬದಲಾವಣೆಗಳ ಗುಸುಗುಸುಗಳ ನಂತರ ಇಂತಹ ಸರ್ಟಿಫಿಕೆಟ್ ನೋಡಿ ರಾಜಕೀಯ ವೀಕ್ಷಕರಿಗಷ್ಟೇ ಅಲ್ಲ , ಸ್ವತಃ ಯೋಗೀಜೀಗೂ ಆಶ್ಚರ್ಯವಾಗಿರಬಹುದೇ? ಪಿಎಂ ನಿಜವಾಗಿಯೂ ಹೊಗಳುತ್ತಿದ್ದಾರೆಯೇ.. ಅಥವ ….
….ʻʻನನ್ನನ್ನು ಟ್ರಾಲ್ ಮಾಡುತ್ತಿದ್ದಾರೆಯೇ?”
(ಮಂಜುಲ್, ಫಸ್ಟ್ ಪೋಸ್ಟ್)
***
ಕೆಲವು ದಿನಗಳ ಹಿಂದೆ ದೇಶ-ವಿದೇಶಗಳಲ್ಲಿ ಸುದ್ದಿಯಾದ ಈ ರಾಜ್ಯದ ದೃಶ್ಯಗಳು ಪ್ರಧಾನಿಗಳ ಉದ್ಗಾರಗಳ ಬಗ್ಗೆ ಏನು ಹೇಳುತ್ತಿವೆ….
“ನಾವು ಒಪ್ಪುತ್ತೇವೆ”
(ಬಾಬ್…ಆಲ್ ಮೋಸ್ಟ್/ಟ್ವಿಟರ್)
***
ಉತ್ತರಪ್ರದೇಶದಲ್ಲಿ ಗಂಗಾನದಿ ಗುಂಟ ಕಾಣಿಸಿದ್ದು… ಈಗ…
“ವಿಡಂಬನೆ”
(ಸಜಿತ್ ಕುಮಾರ್, ಡೆಕ್ಕನ್ ಹೆರಾಲ್ಡ್)
***
ವಿಧಾನಸಭಾ ಚುನಾವಣೆಗೆ ಇನ್ನು ಏಳೆಂಟು ತಿಂಗಳಷ್ಟೇ ಇರುವಾಗ ನಿಜವಾಗಿಯೂ ಪ್ರಧಾನಿಗಳ ಹೊಗಳಿಕೆ “ಸರಿಸಾಟಿಯಿಲ್ಲದ್ದು”….
“ನಮಗೂ ಮತ ನೀಡುವ ಅವಕಾಶವಿದೆಯೇ?”
(ಸತೀಶ ಆಚಾರ್ಯ/ಫೇಸ್‍ಬುಕ್)
***
ಪ್ರಧಾನ ಮಂತ್ರಿಗಳು ತಮ್ಮ 32 ನಿಮಿಷದ ಭಾಷಣದಲ್ಲಿ ಹಾಡಿಹೊಗಳಿದ್ದು, “ಎರಡನೇ ಕೋವಿಡ್ ಅಲೆಯನ್ನು ಬಗ್ಗು ಬಡಿಯುವಲ್ಲಿ” ಯೋಗೀಜೀಯ “ಸರಿಸಾಟಿಯಿಲ್ಲದ ಕಾರ್ಯ”ವನ್ನೋ ಅಥವ ಅದಕ್ಕೆ ನಾಲ್ಕು ದಿನಗಳ ಹಿಂದೆ ಅವರು ಪ್ರಕಟಿಸಿದ ರಾಜ್ಯದ ಜನಸಂಖ್ಯಾ ಹತೋಟಿ ಮಸೂದೆಯನ್ನೋ ಎಂದು ಕೆಲವರಿಗೆ ಸಹಜ ಸಂದೇಹ ಇದೆ.
ಸಿಎಂರವರ ಮಹಾನ್ ಕಾರ್ಯವನ್ನು ಹೊಗಳುವಾಗ ಪಿಎಂ
“ಹೊಸ ಜನಸಂಖ್ಯಾ ನಿಯಂತ್ರಣ ಕಾಯ್ದೆ ಬಗ್ಗೆ ಹೇಳುತ್ತಿರಬಹುದೇನೋ..”
(ಅಲೋಕ್ ನಿರಂತರ್, ಫೇಸ್‍ಬುಕ್)
***
ಹೌದು, ಉತ್ತರಪ್ರದೇಶದಲ್ಲಿ ಆಳುವವರಿಗೆ ಈಗ ಮೂರನೇ ಕೋವಿಡ್ ಅಲೆಗಿಂತ ಹೆಚ್ಚಾಗಿ ಮುಂಬರುವ ವಿಧಾನಸಭಾ ಚುನಾವಣೆಯದ್ದೇ ಕಾಳಜಿ, ಆದ್ದರಿಂದಲೇ ತಾನೇ ಬಹಳಷ್ಟು ಕಾರ್ಯಕ್ರಮಗಳನ್ನು ದಿಲ್ಲಿಯಿಂದಲೇ “ದೂರ-ದರ್ಶನ”ದ ಮೂಲಕ ಮಾಡುವ ಪ್ರಧಾನಿಗಳು ಜುಲೈ 15ರಂದು ವಾರಣಾಸಿಗೇ ಹೋದದ್ದು…. ಈಗ ಪ್ರಧಾನಿಗಳು ಸೇರಿದಂತೆ ಎಲ್ಲರೂ ಸಲಹೆ ಮಾಡುವ ”ಕೋವಿಡ್-ಸೂಕ್ತ ವರ್ತನೆ”ಗಳ ಸಲಹೆ ನೀಡುತ್ತಿರುವಾಗ ಸ್ವತಃ ಪ್ರಧಾನಿಗಳು ಜುಲೈ 15ರಂದು ವಾರಣಾಸಿಯಲ್ಲಿ ಕೇಂದ್ರೀಯ ಸೆರೆಮನೆಯ “ ಹೊಸ ಮುಖ್ಯ ಪ್ರಾಚೀರ” (ಅಂದರೆ ಗೋಡೆ), ನಾಲ್ಕು ಪಾರ್ಕ್‌ಗಳು, ಚರಂಡಿಯ ಜೀರ್ಣೋದ್ಧಾರ ಇತ್ಯಾದಿಗಳ ‘ಲೋಕಾರ್ಪಣೆ’ಗಳಿಗೆ ಹೋಗಬೇಕಾಗಿರಲಿಲ್ಲ ಎನ್ನುತ್ತಾರೆ ಪ್ರಖ್ಯಾತ ಪತ್ರಕರ್ತ ರವೀಶ್ ಕುಮಾರ್.
***
“ಮುಂಬರುವ ಯುಪಿ ಚುನಾವಣೆಗಳಿಗಾಗಿ
ಒಂದು ದೊಡ್ಡ ಡೋಸಿನ ಅಗತ್ಯವಿದೆ”
( ರಾಜೇಂದ್ರ ಧೋಡಪ್‍ಕರ್/ಫೇಸ್‍ಬುಕ್)
***
ಇಂತಹ ‘ಕಾಳಜಿ’ಯ ಹಿನ್ನೆಲೆಯಲ್ಲಿ, ಅದೂ ಗಂಗಾ ನದಿ ತಟದಲ್ಲಿ ಕಾಣ ಬಂದ ದೃಶ್ಯಗಳ ಹಿನ್ನೆಲೆಯಲ್ಲಿ, ಜುಲೈ 11ರಂದು ಯೋಗೀಜೀಗೆ ಹೊಳೆದ, ಪ್ರಕಟಿಸಿದ ಜನಸಂಖ್ಯಾ ನೀತಿ ಖಂಡಿತವಾಗಿಯೂ ಆಳುವವರ ಪ್ರಶಂಸೆಗೆ ಪಾತ್ರವಾಗಿರದಿರಲು ಸಾಧ್ಯವಿಲ್ಲ.
“ಯುರೇಕಾ! ಯುರೇಕಾ! ಎರಡು ಮಕ್ಕಳ ಪಾಲಿಸಿ!”
(ಸತೀಶ ಆಚಾರ್ಯ)
***
ಈ ಹೊಸ ನೀತಿಯ ಜಾರಿಯ ನಂತರ ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರು ಸರಕಾರೀ ನೌಕರಿಗೆ ಅನರ್ಹರಾಗುತ್ತಾರೆ, ಶಿಕ್ಷಣ, ವಸತಿ ಮತ್ತು ಸಾಮಾಜಿಕ ಭದ್ರತೆಯ ಸೌಕರ್ಯಗಳಿಗೂ ಅರ್ಹರಾಗಲಾರರು ಎಂದು ಈ ಪ್ರಕಟಣೆ ಹೇಳುತ್ತದೆ.
ಅಂದರೆ ಇದುವರೆಗಿನ ಎಲ್ಲ ಘೋಷಣೆಗಳು ಇಮ್ಮಡಿಗೊಳ್ಳುತ್ತವೆ?
ಅದು ನಿರುದ್ಯೋಗ, ಆದಾಯ ನಷ್ಟ, ಸಾರ್ವತ್ರಿಕ ಲಸಿಕೀಕರಣಕ್ಕೆ ಅನುಕೂಲವಾಗುತ್ತದೆ ?
ಕಡಿಮೆ ಜನಸಂಖ್ಯೆ ಎಂದರೆ ಪ್ರತಿಯೊಬ್ಬರ ಖಾತೆಯಲ್ಲಿ 15 ಲಕ್ಷ ರೂ. ಬದಲು 30 ಲಕ್ಷ ರೂ.;
ರೈತರ ಆದಾಯ ದ್ವಿಗುಣಗೊಳ್ಳುವ ಬದಲು ನಾಲ್ಕು ಪಟ್ಟಾಗುತ್ತದೆ;
ಪ್ರತಿ ವರ್ಷ 2 ಕೋಟಿಯ ಬದಲು 4 ಕೋಟಿ ಉದ್ಯೋಗಾವಕಾಶ;
ಲಸಿಕೀಕರಣ 100% ದ ಬದಲು 200% !
ಆದರೆ ಅದಕ್ಕೆ ಮೊದಲು ಜನಗಳ ಪ್ರಶ್ನೆಗಳು ಹಲವು:
ನಿರುದ್ಯೋಗಿಗಳು- ಮೊದಲಿಗೆ, ನನ್ನ ಹೋದ ಕೆಲಸ ಮತ್ತೆ ಸಿಗುತ್ತದೆಯೇ?
ನಿವೃತ್ತರು- ನನ್ನ 30ಲಕ್ಷ ರೂ. ಉಳಿತಾಯ ಮತ್ತೆ ಸಿಗುತ್ತದೆಯೇ?
ರೈತಾಪಿಗಳು –ನನಗೆ ಸ್ವಲ್ಪ ಆದಾಯ ಸಿಗಬಲ್ಲುದೆ?
ಸಾರ್ವಜನಿಕರು– ನನಗೆ ಮೊದಲ ಲಸಿಕೆ ಸಿಗುತ್ತದೆಯೇ?
(ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ)
***
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದವರಿಗೆ ಉದ್ಯೋಗವಿಲ್ಲ ಎಂದರೆ, ಅದಕ್ಕಿಂತ ಕಡಿಮೆ ಇದ್ದರಿಗೆ ಉದ್ಯೋಗ ಸಿಕ್ಕೇ ಸಿಗುತ್ತದೆ ಎಂದೇನೂ ಅಲ್ಲ……
(ಕೀರ್ತಿಷ್, ಬಿಬಿಸಿ ನ್ಯೂಸ್ ಹಿಂದಿ)
***
ನೀವು ಉದ್ಯೋಗ ಕಾಪಾಡುವುದಾದರೆ
ಮಕ್ಕಳು ಪಡೆಯುವುದೇನು,
ನಾವು ಮದುವೆಯಾಗುವುದೂ ಇಲ್ಲ!
(ಸುಭಾನಿ, ಡೆಕ್ಕನ್ ಕ್ರಾನಿಕಲ್)
***
ಈ ವೇಳೆಗೆ ಲಸಿಕೀಕರಣದ ವೇಗ 60% ದಷ್ಟು ಇಳಿದಿದೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತ್ತೆ ಲಸಿಕೆಗಳ ಕೊರತೆ ಕಾಡುತ್ತಿದೆ ಎಂದು ವರದಿಯಾಗಿದೆ, ಸ್ವತಃ ಹೊಸ ಆರೋಗ್ಯ ಮಂತ್ರಿಗಳು ಮತ್ತು ಪ್ರಧಾನ ಮಂತ್ರಿಗಳೂ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸಿನಲ್ಲಿ ಮೂರನೇ ಅಲೆಯ ಬಗ್ಗೆ ಎಚ್ಚರಿಸಿದ್ದಾರೆ.
ಆದರೆ ಇಂತಹ ಸಮಯದಲ್ಲಿ ಎರಡನೇ ಅಲೆಯ ‘ಟಾಪರ್’ ಸಿಎಂ ತಮ್ಮ ಅಸ್ಸಾಂ ಸಹಯೋಗಿಯೊಡನೆ ತೋರಿಸುತ್ತಿರುವುದು ಬೇರೆಯೇ! ನಮ್ಮ ರಾಜ್ಯದ ಮಂತ್ರಿಗಳೂ ಅವರೊಡನೆ ಸ್ಪರ್ಧೆಗೆ ಇಳಿದಿದ್ದಾರೆ!
2 ಮಕ್ಕಳು ಸಾಕು ಎನ್ನುತ್ತಿದ್ದಾರೆ…..
ವಿ ಫಾರ್ ವ್ಯಾಕ್ಸೀನ್ ಎನ್ನಬೇಕಾದಾಗ
ಈ ಎರಡು ಮುಖ್ಯಮಂತ್ರಿಗಳು
(ಇ.ಪಿ.ಉನ್ನಿ, ಇಂಡಿಯನ್ ಎಕ್ಸ್‌ಪ್ರೆಸ್)
********