ಗಣರಾಜ್ಯೋತ್ಸವ : ಮಣಿಪುರ, ಉತ್ತರಾಖಂಡ ಉಡುಗೆಯಲ್ಲಿ ಮಿಂಚಿದ ಮೋದಿ – ಚುನಾವಣಾ ಗಿಮಿಕ್ ಎಂದ ನೆಟ್ಟಿಗರು

ಹೊಸದಿಲ್ಲಿ: ಭಾರತದ 73 ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಹಾಗೂ ಮಣಿಪುರದ ಶಾಲು ಧರಿಸಿ ಗಮನ ಸೆಳೆದರು.

ಮುಂದಿನ ತಿಂಗಳು ಮತದಾನ ನಡೆಯಲಿರುವ ಪ್ರಮುಖ ಐದು ರಾಜ್ಯಗಳಲ್ಲಿ ಉತ್ತರಾಖಂಡ ಹಾಗೂ ಮಣಿಪುರ ಕೂಡ ಸೇರಿವೆ.”ಕ್ಯಾಪ್ ಅನ್ನು “ಬ್ರಹ್ಮಕಮಲ” ದಿಂದ ಅಲಂಕರಿಸಲಾಗಿದೆ. ಇದು ಉತ್ತರಾಖಂಡದ ರಾಜ್ಯ ಪುಷ್ಪವಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಟ್ವೀಟ್ ಮಾಡಿದ್ದಾರೆ.

ತಮ್ಮ ರಾಜ್ಯದ ಬಗ್ಗೆ ಪ್ರಧಾನಿ ಮೋದಿಯವರ ಇಂಗಿತಕ್ಕೆ ಹೆಮ್ಮೆ ವ್ಯಕ್ತಪಡಿಸಿದ ಧಾಮಿ “ಉತ್ತರಾಖಂಡದ 1.25 ಕೋಟಿ ಜನರ ಪರವಾಗಿ ನಾನು ಪ್ರಧಾನ ಮಂತ್ರಿಗೆ ಧನ್ಯವಾದ ಹೇಳುತ್ತೇನೆ” ಎಂದು ಟ್ವೀಟಿಸಿದ್ದಾರೆ.

ಕೇದಾರನಾಥ ಪವಿತ್ರ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಪ್ರಧಾನಿ ಮೋದಿ ಬ್ರಹ್ಮಕಮಲ ಹೂವನ್ನು ಬಳಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಾಸ್ಕ್​ ಕಡ್ಡಾಯವಾಗಿದೆ. ಹೀಗಾಗಿ ಪ್ರಧಾನಿ ಕೂಡ ಮಾಸ್ಕ್​ ಧರಿಸಿದ್ದಾರೆ. ಇದರಲ್ಲೂ ಒಂದು ವಿಶೇಷತೆ ಇದೆ. ಪ್ರಧಾನಿ ಮೋದಿ ಧರಿಸಿದ ಮಾಸ್ಕ್​ ಅನ್ನು ಮಣಿಪುರದ ಹ್ಯಾಂಡಲೂಮ್​ ಬಟ್ಟೆ ತಯಾರಿಸುವ ಅಂಗಡಿಯಲ್ಲಿ ತಯಾರಿಸಲಾಗಿದೆ. ಇದನ್ನು ಗುಮ್ಚಾ ಮಾಸ್ಕ್​ ಎಂದು ಕರೆಯುತ್ತಾರೆ. ಇದರ ಜತೆಗೆ ಕಪ್ಪು ಮತ್ತು ಬಿಳಿಯ ಬಣ್ಣದ ದಾರದಲ್ಲಿ ನೇಯ್ದ ಉಡುಗೆಯನ್ನು ಧರಿಸಿದ್ದು, ಇದು ಮಣಿಪುರದ ಮೆಟೈ ಬುಡಕಟ್ಟು ಜನಾಂಗ ತಯಾರಿಸುವ ವಿಶೇಷ ಉಡುಗೆಯಾಗಿದೆ. ಈ ಬಾರಿಯ ಪ್ರಧಾನಿ ಮೋದಿ ಉಡುಗೆ ಪಂಚರಾಜ್ಯ ಚುನಾವಣೆಯನ್ನು ಪ್ರತಿನಿಧಿಸುವಂತಿದೆ.

ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಹಾಗೂ ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಮತದಾನ ನಡೆಯಲಿದೆ. ಪ್ರಧಾನಿಯವರು ಆ ರಾಜ್ಯದ ಮತದಾರರನ್ನು ಸೆಳೆಯುವುದಕ್ಕಾಗಿ ಈ ಕಾರ್ಯಕ್ರಮವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಹಬ್ಬದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು ದ್ರೋಹವಲ್ಲವೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

Donate Janashakthi Media

One thought on “ಗಣರಾಜ್ಯೋತ್ಸವ : ಮಣಿಪುರ, ಉತ್ತರಾಖಂಡ ಉಡುಗೆಯಲ್ಲಿ ಮಿಂಚಿದ ಮೋದಿ – ಚುನಾವಣಾ ಗಿಮಿಕ್ ಎಂದ ನೆಟ್ಟಿಗರು

  1. Saluting pattern of BJP leaders seems to be changed as their palm facing down to earth and not front. Yogi and Modi salute are similar

Leave a Reply

Your email address will not be published. Required fields are marked *