ನವ ಕೇರಳ ಸದಸ್ಸ್ | ಜನರನ್ನು ನೇರವಾಗಿ ಭೇಟಿಯಾಲಿರುವ ಪಿಣರಾಯಿ ವಿಜಯನ್ ಸಚಿವ ಸಂಪುಟ

ಕಾಸರಗೋಡು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟವು ನವೆಂಬರ್ 18ರ ಶನಿವಾರದಿಂದ ಜನರ ಭೇಟಿಗಾಗಿ ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸುವ ಪ್ರಯತ್ನವಾಗಿ ರಾಜ್ಯಾದ್ಯಂತ ಪ್ರವಾಸವನ್ನು ಪ್ರಾರಂಭಿಸಲಿದ್ದಾರೆ. ರಾಜ್ಯದ ಉತ್ತರದ ತುದಿಯಾದ ಮಂಜೇಶ್ವರಂನಿಂದ ಪ್ರಾರಂಭವಾಗುವ ಪ್ರವಾಸವು ಡಿಸೆಂಬರ್ 24 ರಂದು ರಾಜ್ಯ ರಾಜಧಾನಿಯಾದ ತಿರುವನಂದಪುರಂನಲ್ಲಿ ಕೊನೆಗೊಳ್ಳಲಿದೆ.

ಸಾಪ್ತಾಹಿಕ ಕ್ಯಾಬಿನೆಟ್ ಸಭೆಗಳನ್ನು ತಪ್ಪಿಸದಂತೆ, 140 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸುವ ಸಚಿವರು ಪ್ರತಿ ಬುಧವಾರ ಜನರನ್ನು ಭೇಟಿಯಾಗಲಿದ್ದಾರೆ. ಆದಾಗ್ಯೂ, ಈ ಉಪಕ್ರಮವು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿಯಿಂದ ತೀವ್ರ ಟೀಕೆಗೆ ಒಳಗಾಗಿದ್ದು, ರಾಜ್ಯದ ಬೊಕ್ಕಸ ವಾಸ್ತವಿಕವಾಗಿ ಖಾಲಿಯಾಗಿರುವಾಗ ಬೆಂಜ್ ಐಷಾರಾಮಿ ಕೋಚ್‌ನಲ್ಲಿ ಸಾಗುವ ಪ್ರವಾಸವು “ದುಂದುವೆಚ್ಚ” ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ | ಆಡಳಿತರೂಢ ಬಿಆರ್‌ಎಸ್ ಶಾಸಕನ ನಿವಾಸದ ಮೇಲೆ ಐಟಿ ದಾಳಿ

‘ನವ ಕೇರಳ ಸದಸ್ಸ್’ (ಜನರನ್ನು ನೇರವಾಗಿ ಭೇಟಿಯಾಗಿ ಕೇರಳವನ್ನು ಹೊಸ ಕ್ಷೇತ್ರಗಳಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ) ಯಾತ್ರೆ ಎಂಬ ಹೆಸರಿರುವ ಪ್ರವಾಸವನ್ನು ಟೀಕಿಸಿರುವ ಯುಡಿಎಫ್ ಸಂಚಾಲಕ ಎಂ.ಎಂ. ಹಸ್ಸನ್, “ಇದು ಧುರಿದ ಕೇರಳದ ಸದಸ್ (ಜನರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದ್ದಾಗ ಸಂತೋಷದಾಯಕ ಪ್ರವಾಸ)” ಎಂದು ಕರೆದಿದ್ದಾರೆ.

”ಈ ತಿಂಗಳ ಆರಂಭದಲ್ಲಿ 27 ಕೋಟಿ ರೂ.ಗಳ ಸಾಂಸ್ಕೃತಿಕ ಜಂಬೂರಿಗೆ ನಾವು ಸಾಕ್ಷಿಯಾಗಿದ್ದೆವು. ಈಗ ಈ ಯಾತ್ರೆಗೆ 100 ಕೋಟಿ ರೂ. ವೆಚ್ಚವಾಗಲಿದೆ. ಇದರ ಅವಶ್ಯಕತೆ ಏನಿದೆ? ಕಳೆದ ನಾಲ್ಕು ತಿಂಗಳಿಂದ ದುರ್ಬಲರಿಗೆ ಪಿಂಚಣಿ ನೀಡಿಲ್ಲ, ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದಿರುವಾಗ ಇದರ ಅವಶ್ಯಕತೆ ಏನಿದೆ. ಇದು ಮುಂಬರುವ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜಕೀಯ ಗಿಮಿಕ್ ಹೊರತು ಬೇರೇನೂ ಅಲ್ಲ” ಎಂದು ಹಸ್ಸನ್ ಹೇಳಿದ್ದಾರೆ.

ಪ್ರವಾಸದ ಆಯೋಜಕರ ಪ್ರಕಾರ, ಸಚಿವರು ದಿನಕ್ಕೆ ಕನಿಷ್ಠ ನಾಲ್ಕು ಕ್ಷೇತ್ರಗಳ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಏಳು ಕೌಂಟರ್‌ಗಳನ್ನು ಸ್ಥಾಪಿಸಲಾಗಿದ್ದು, ಜನರು ತಮ್ಮ ದೂರುಗಳನ್ನು ದಾಖಲಿಸಿಕೊಳ್ಳಬಹುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆಹ್ವಾನಿತ ಜನರ ಗುಂಪಿನೊಂದಿಗೆ ಉಪಹಾರ ಸಭೆಯೊಂದಿಗೆ ದಿನವು ಪ್ರಾರಂಭವಾಗುತ್ತದೆ. ಅದಕ್ಕೆ ಅನುಗುಣವಾಗಿ 2 ವಾರಗಳಿಂದ-45 ದಿನಗಳ ಒಳಗೆ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಬದ್ಧರಾಗಿರುತ್ತಾರೆ.

ಇದನ್ನೂ ಓದಿ: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಮಗನಿಂದ ಪ್ರೀತಿ ಹೆಸರಲ್ಲಿ ವಂಚನೆ ಆರೋಪ | ದೂರು ದಾಖಲಿಸಿದ ಯುವತಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷ ಐಯುಎಂಎಲ್‌ನ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, “ಇದು ಜನರಿಗೆ ಮೋಸ ಮಾಡುವುದಲ್ಲದೆ ಬೇರೇನೂ ಅಲ್ಲ. ಶಾಸಕನಾಗಿ ನಾನು ನನ್ನ ಕ್ಷೇತ್ರದಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದೇನೆ. ಅದಕ್ಕಾಗಿ ಕಂಬದಿಂದ ಕಂಬಕ್ಕೆ ಓಡುತ್ತಿದ್ದೇನೆ. ಇತರ ಶಾಸಕರ ವಿಷಯವೂ ಹೀಗಿಯೆ ಇದೆ. ಆದರೆ ಏನೂ ಕೆಲಸ ಆಗಿಲ್ಲ. ಈಗ ಈ ರೀತಿಯ ಪ್ರವಾಸ ಕೈಗೊಳ್ಳಲಾಗಿದೆ. ಇದು ಜನರನ್ನು ಮೂರ್ಖರನ್ನಾಗಿ ಮತ್ತು ಮೋಸ ಮಾಡಲು ಮಾಡಲಾಗಿದೆ” ಎಂದು ಹೇಳಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಪ್ರತಿಪಕ್ಷಗಳ ನಿಲುವುಗಳನ್ನು ತರಾಟೆಗೆ ತೆಗೆದುಕೊಂಡರು. ಇಡೀ ಕ್ಯಾಬಿನೆಟ್‌ ಈ ರೀತಿಯಾಗಿ ಜನರನ್ನು ತಲುಪುವ ಕೆಲಸ ಎಂದಿಗೂ ನಡೆದಿಲ್ಲ. ಪ್ರತಿಪಕ್ಷಗಳು ಇದನ್ನು ಬಹಿಷ್ಕರಿಸಿದರೆ ಐತಿಹಾಸಿಕ ಪ್ರಮಾದ ಎಸಗಿದಂತೆ ಆಗುತ್ತದೆ. ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಚರ್ಚಿಸಲಾಗುತ್ತಿದೆ, ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಡಿಯೊ ನೋಡಿ: ಮಾನವೀಯತೆ ಜಾಗಕ್ಕೆ ಮತೀಯತೆ ಬಂದಿದೆ – ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *