7 ದಿನಗಳಲ್ಲಿ ಭಾರತದಾದ್ಯಂತ ಸಿಎಎ ಜಾರಿ : ಶಂತನೂ ಠಾಕೂರ್

ಕೋಲ್ಕತ್ತಾ: ಮುಂದಿನ ಏಳು ದಿನಗಳಲ್ಲಿ ದೇಶದಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಶಂತನೂ ಠಾಕೂರ್ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ ಏಳು ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಸಿಎಎ ಜಾರಿಗೆ ಬರಲಿದೆ ಎಂದು ನಾನು ಖಾತರಿ ನೀಡಬಲ್ಲೇ ಎಂದಿದ್ದಾರೆ. 7 ದಿನಗಳಲ್ಲಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಿಎಎ ಹೇಳಿಕೆಯಲ್ಲಿ ಹೇಳಿದ್ದನ್ನು ಬಂಗಾಳದ ಬಂಗಾವ್‍ನ ಬಿಜೆಪಿಯ ಲೋಕಸಭಾ ಸಂಸದ ಶಂತನೂ ಠಾಕೂರ್ ಪುನರುಚ್ಚರಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‍ನಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಿಎಎಯನ್ನು ಜಾರಿಗೆ ತರಲಿದೆ ಮತ್ತು ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅಮಿತ್ ಶಾ ಪ್ರತಿಪಾದಿಸಿದ್ದನ್ನು ನೆನಪಿಸಿಕೊಳ್ಳಬಹುದು. 7 ದಿನಗಳಲ್ಲಿ

ಇದನ್ನೂ ಓದಿಸಿಎಎಯನ್ನು ಜಾರಿಗೆ ತರುವುದಿಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟನೆ

ಈ ತಿಂಗಳ ಆರಂಭದಲ್ಲಿ ಸಿಎಎ ನಿಯಮಗಳು ಕೇಂದ್ರದೊಂದಿಗೆ ಸಿದ್ಧವಾಗಿವೆ ಮತ್ತು ಲೋಕಸಭೆ ಚುನಾವಣೆಯ ಘೋಷಣೆಗೆ ಬಹಳ ಮುಂಚೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಅರ್ಜಿದಾರರು ಪ್ರಯಾಣ ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ ವರ್ಷವನ್ನು ಘೋಷಿಸಬೇಕಾಗುತ್ತದೆ. ಅರ್ಜಿದಾರರಿಂದ ಯಾವುದೇ ದಾಖಲೆಯನ್ನು ಕೇಳಲಾಗುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 2019 ರಲ್ಲಿ ಸಿಎಎ ಅನ್ನು ಸಂಸತ್ತು ಅಂಗೀಕರಿಸಿದ ನಂತರ ಮತ್ತು ರಾಷ್ಟ್ರಪತಿಗಳು ಸಹಿ ಹಾಕಿದ ನಂತರ, ದೇಶದ ಅನೇಕ ಭಾಗಗಳಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದವು. ನಂತರ ಈ ವಿಚಾರವಾಗಿ ಮಾತನಾಡದಿದ್ದ ಬಿಜೆಪಿ ಈಗ ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದೆ.  7 ದಿನಗಳಲ್ಲಿ

 

ಈ ವಿಡಿಯೋ ನೋಡಿNRC – NPR – CAA ಕುರಿತು ಕೆ.ಪ್ರಕಾಶ್ ರವರ ಮಾತುಗಳು.

Donate Janashakthi Media

Leave a Reply

Your email address will not be published. Required fields are marked *