ಉಪಚುನಾವಣೆ ಫಲಿತಾಂಶ : ಐದರಲ್ಲಿ ಎರಡು ಎಎಪಿ, ತಲಾ ಒಂದು ಸ್ಥಾನಗೆದ್ದ ಕಾಂಗ್ರೆಸ್‌, ಟಿಎಂಸಿ, ಬಿಜೆಪಿ

ಹೊಸದಿಲ್ಲಿ : ಪಂಜಾಬ್, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಕೇರಳ ರಾಜ್ಯದ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಎರಡು ಕ್ಷೇತ್ರಗಳಲ್ಲಿ ಎಎಪಿ ತಲಾ ಒಂದು ಸ್ಥಾನದಲ್ಲಿ ಕಾಂಗ್ರೆಸ್‌, ಬಿಜೆಪಿ, ಟಿಎಂಸಿ ಮುನ್ನಡೆ ಕಾಯ್ದುಕೊಂಡಿವೆ.

ಗುಜರಾತ್‌ನ ವಿಸಾವದರ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಇಟಾಲಿಯಾ ಗೋಪಾಲ್ ಗೆಲುವನ್ನು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕಿರಿತ್ ಪಟೇಲ್ ವಿರುದ್ಧ 17,000ಕ್ಕೂ ಅಧಿಕ ಮತಗಳ ಅಂತರದಿಂದ ಇಟಾಲಿಯಾ ಗೋಪಾಲ್ ಗೆಲುವನ್ನು ಸಾಧಿಸಿದ್ದಾರೆ. ಗುಜರಾತ್‌ನ ಕಾಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಂದ್ರ ಚಾವ್ಡಾ, ಕಾಂಗ್ರೆಸ್‌ ಅಭ್ಯರ್ಥಿ ರಮೇಶ್ ಚಾವ್ಡಾ ವಿರುದ್ಧ 39,000ಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಶ್ಚಿಮ ಬಂಗಾಳದ ಕಾಲಿಗಂಜ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಅಲಿಫಾ ಅಹ್ಮದ್ ಮುನ್ನಡೆ ಸಾಧಿಸಿದ್ದಾರೆ. ಅಲಿಫಾ ಅಹ್ಮದ್ ಬಿಜೆಪಿ ಅಭ್ಯರ್ಥಿ ಆಶಿಶ್ ಘೋಷ್ ವಿರುದ್ಧ 16,000ಕ್ಕೂ ಅಧಿಕ ಮತಗಳ ಅಂತರದ ಮುನ್ನಡೆಯನ್ನು ಸಾಧಿಸಿದ್ದಾರೆ.

ಇದನ್ನೂ ಓದಿ : ಹಟ್ಟಿ ಚಿನ್ನದಗಣಿ | ಕಾರ್ಮಿಕ ಸಂಘದ ಚುನಾವಣೆ ; ಸಿಐಟಿಯುನ ಕೆ.ಮಹಾಂತೇಶ್ ಗೆಲುವು

ಪಂಜಾಬ್‌ನ ಲುಧಿಯಾನ ಪಶ್ಚಿಮ ಉಪಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಸಂಜೀವ್ ಅರೋರಾ 10,637 ಮತಗಳ ಭರ್ಜರಿ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್‌ನ ಭರತ್ ಭೂಷಣ್ ಆಶು ಎರಡನೇ ಸ್ಥಾನ ಪಡೆದರೆ, ಬಿಜೆಪಿಯ ಜೀವನ್ ಗುಪ್ತಾ ಮೂರನೇ ಸ್ಥಾನ ಪಡೆದರು. ಹಾಗಾಗಿ, ಈ ಫಲಿತಾಂಶ ಎಎಪಿಗೆ 2027 ಚುನಾವಣೆಗೂ ಮುನ್ನ ದೊಡ್ಡ ಆತ್ಮವಿಶ್ವಾಸ ನೀಡಿದೆ.

ಕೇರಳದ ನೀಲಂಬೂರ್ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಅಭ್ಯರ್ಥಿ ಆರ್ಯಾದನ್ ಶೌಕತ್ ಅವರು 11,000 ಕ್ಕೂ ಹೆಚ್ಚು ಮತಗಳ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ನೋಡಿಕೌಶಲ್ಯದ ಹೆಸರಲ್ಲಿ ಕಾರ್ಮಿಕ ಮಂಡಳಿಯ ಹಣ ವ್ಯಯ – ಕಾರ್ಮಿಕ ಸಂಘಟನೆಗಳ ಆಕ್ಷೇಪ

 

Donate Janashakthi Media

Leave a Reply

Your email address will not be published. Required fields are marked *