ಉಪಚುನಾವಣೆ ಫಲಿತಾಂಶ : ಹಾನಗಲ್ ನಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ

ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿರುವ ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಅಂತಿಮ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಕಟಗೊಳ್ಳಲಿದೆ. ಹಾನಗಲ್ ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಹಾನಗಲ್ ಕಾಂಗ್ರೆಸ್ ಮುನ್ನಡೆ : ಹಾನಗಲ್‌: ಆರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ
ಹಾನಗಲ್​ ಕ್ಷೇತ್ರದಲ್ಲಿ ಆರನೇ ಸುತ್ತಿನ ಬಳಿಕ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ 27244, ಬಿಜೆಪಿ 25746, ಜೆಡಿಎಸ್ 244 ಮತ ಪಡೆದಿದೆ.

ಸಿಂದಗಿಯಲ್ಲಿ ಬಿಜೆಪಿ ಮುನ್ನಡೆ :
ಹತ್ತನೇ ಸುತ್ತಿನ ಬಳಿಕ ಬಿಜೆಪಿ 17460 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ 45640, ಕಾಂಗ್ರೆಸ್​ 28190, ಜೆಡಿಎಸ್​ 1607 ಮತ ಪಡೆದಿವೆ.

Donate Janashakthi Media

Leave a Reply

Your email address will not be published. Required fields are marked *