ಸಾರಿಗೆ ಮುಷ್ಕರ : ನಿಧಾನಕ್ಕೆ ಸಂಚಾರ ಆರಂಭಿಸಿದ ಸಾರ್ವಜನಿಕ ಬಸ್

38 KSRTC, 28 BMTC ಬಸ್ ಸಂಚಾರ ಆರಂಭ

ಬೆಂಗಳೂರು: 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರೋ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಸರ್ಕಾರಿ ಬಸ್​ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಆದ್ರೆ ಇಂದು ಕೆಲವು ಜಿಲ್ಲೆಗಳಲ್ಲಿ ಕೆಎಸ್​​ಆರ್​ಟಿಸಿ ಬಸ್​ಗಳ ಸಂಚಾರ ಆರಂಭವಾಗಿದೆ.

ಬೆಳಿಗ್ಗೆಯಿಂದ 38 ಕೆ.ಎಸ್.ಆರ್.ಟಿ.ಸಿ, 28 ಬಿಎಂಟಿಸಿ, 54 NEKRTC ಹಾಗೂ 14 NWKRTC ಬಸ್ಸುಗಳ ಕಾರ್ಯಾಚರಣೆ ಆರಂಭವಾಗಿದೆ ಎಂದು KSRTC ಕೇಂದ್ರ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.

ಹಲವು ಜಿಲ್ಲೆಗಳಲ್ಲಿ ಪೊಲೀಸ್​ ಭದ್ರತೆಯೊಂದಿಗೆ ಕೆಎಸ್​​ಆರ್​ಟಿಸಿ ಬಸ್​ಗಳನ್ನ ರಸ್ತೆಗಿಳಿಸಲಾಗಿದೆ. ವಿಜಯಪುರದಿಂದ ಶ್ರೀಶೈಲಕ್ಕೆ ಬಸ್ ಸಂಚಾರ ಶುರುವಾಗಿದೆ. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಮುಂದೆ ನಿಂತು ಬಸ್ ಬಿಡಿಸಿದ್ದಾರೆ. ನಿನ್ನೆಯಿಂದಲು ಬಸ್ ಓಡಿಸಲು ಡಿಸಿ ನೌಕರರ ಮನವೊಲಿಕೆ ಮಾಡುತ್ತಿದ್ದಾರೆ.

ಇಂದು ಡಿಪೋದಿಂದ 28 ಬಸ್​​​ಗಳು ರಸ್ತೆಗಿಳಿದಿದ್ದು, ಮುದ್ದೇಬಿಹಾಳ, ಸಾತಾರ, ಶ್ರೀಶೈಲ, ಇಂಡಿ, ಸಿಂದಗಿ, ಗಜೇಂದ್ರಘಡ ಕಡೆಗೆ ಹೋಗಿವೆ.

ಚಾಮರಾಜನಗರದಲ್ಲಿ ಒಬ್ಬ ಡ್ರೈವರ್ ಹಾಗೂ ಒಬ್ಬರು ಕಂಡಕ್ಟರ್ ಕೆಲಸಕ್ಕೆ ಹಾಜರಾಗಿದ್ದು, ಜಿಲ್ಲೆಯಿಂದ ಮೈಸೂರಿಗೆ ಒಂದು ಕೆಎಸ್‌ಆರ್​ಟಿಸಿ ಬಸ್ ಹೊರಟಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಆಗಮಿಸುತ್ತಿವೆ. ಕೆ.ಆರ್.ನಗರದ ಮಾರ್ಗದ ಬಸ್ ತೆರಳಿದ ಬೆನ್ನಲ್ಲೇ, ಮಂಡ್ಯ ಕಡೆ ಎರಡು ಬಸ್‌ಗಳು ತೆರಳಿವೆ. ಉಡುಪಿಯಿಂದ ಐರಾವತ ಬಸ್​​ ಸಂಚಾರ ಆರಂಭಿಸಿದೆ.

Donate Janashakthi Media

Leave a Reply

Your email address will not be published. Required fields are marked *