ಬೆಂಗಳೂರು: ಈ ಖಾಸಗಿ ಬಸ್‌ಗಳು ಹಬ್ಬ ಹರಿದಿನ ಬಂದೃ,ಏನಾದರೂ ವಿಶೇಷ ದಿನಗಳು ಬಂದರೆ ಸಾಲುಸಾಲು ರಜೆಗಳು ಇರುವುದನ್ನು ನೋಡಿಕೊಂಡು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಪ್ರಯಾಣಿಕರು ತಮ್ಮತಮ್ಮ ಸ್ವಂತ ಊರುಗಳಿಗೆ ತೆರಳುವುದು ಸಹಜವೆನ್ನುವುದನ್ನು ಖಾತ್ರ ಮಾಡಿಕೊಂಡಿರುತ್ತವೆ. ಇದರ ಲಾಭ ಪಡೆಯಲು ಖಾಸಗಿ ಬಸ್‌ಗಳು ಮುಂದಾಗಿ ಬಸ್ ದರ ಹೆಚ್ಚಿಸುವುದು ಸಾಮಾನ್ಯವಾಗಿ ಬಿಟ್ಟಿದೆ.
ಈಗ ಹೇಗೂ ಚುನಾವಣಾ ಸಮಯ ಹೀಗಾಗಿ ಇದರ ಲಾಭವನ್ನು ಸಹ ಪಡೆಯಲು ಮುಂದಾಗಿರುವ ಈ ಖಾಸಗಿ ಬಸ್ ಮಾಲೀಕರು ಮತದಾನಕ್ಕೆ ಮತದಾರರು ಮತದಾನಕ್ಕೆ ತೆರಳುವುದನ್ನು ನೋಡಿಕೊಂಡೇ ಇದೀಗ ಬಸ್ ದರ ಹೆಚ್ಚಿಸಿವೆ.
ಲೋಕಸಭಾ ಚುನಾವಣೆಗೆ ಏಪ್ರಿಲ್ 26ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮತ ಚಲಾಯಿಸಲು ಮತದಾರರು ತಮ್ಮ ಊರುಗಳತ್ತ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಮತದಾರರಿಗೆ ಇದೀಗ ಬಸ್ ಟಿಕೆಟ್ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಇದನ್ನೂ ಓದಿ: ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಮತಯಾಚಿಸಿದ ಪ್ರೊ.ರಾಜೀವ್ ಗೌಡ
ರಾಜ್ಯದ 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 25ರಂದು ತಮ್ಮ ಊರಿಗೆ ಪ್ರಯಾಣಿಸಲು ಮತದಾರರು ಸಜ್ಜಾಗಿದ್ದಾರೆ. ಬೆಂಗಳೂರಿನಿಂದ ಉಡುಪಿ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ಮಂಡ್ಯ ಮೈಸೂರಿಗೆ ಹೋಗುವ ಬಸ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿ, ಬಸ್ ಟಿಕೆಟ್ ದರ ಎರಡು ಪಟ್ಟು ಏರಿಕೆಯಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರು-ಮಂಗಳೂರು ಬಸ್ ಟಿಕೆಟ್ ದರ 500-1000 ಇರುತ್ತದೆ. ಚುನಾವಣಾ ಕಾರಣದಿಂದಾಗಿ 1600-1950 ರೂ.ಗೆ ಏರಿಕೆ ಕಂಡಿದೆ. ಉಡುಪಿಗೆ 1650-1950 ರೂ., ಚಿಕ್ಕಮಗಳೂರಿಗೆ 1100-1600 ರೂ., ಹಾಸನಕ್ಕೆ 1200-1600 ರೂ, ಚಿತ್ರದುರ್ಗಕ್ಕೆ 800-1200 ರೂ.ಗೆ ಏರಿಕೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಚುನಾವಣೆಗೆ ಬಳಸಿಕೊಂಡಿರುವ ಕಾರಣ, ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ನೋಡಿ: ಜಾಗೃತ ನಾಗರಿಕರ ಜವಾಬ್ದಾರಿ |ಸುಳ್ಳುಗಳಿಂದ ಜನರನ್ನು ವಂಚಿಸಿದವರನ್ನು ದೂರವಿಡುವ ಕಾಲ ಬಂದಿದೆ – ಅಜಂ ಶಾಹಿದ್