ಬುದ್ದಿಮಾಂದ್ಯ ಮಕ್ಕಳನ್ನು ಕೀಳಾಗಿ ನೋಡುವುದು ಬಿಟ್ಟುಬಿಡಿ

ಕೋಲಾರ: ಸಮಾಜದಲ್ಲಿ ಆರ್ಥಿಕವಾಗಿ ಉಳ್ಳವರು ಬುದ್ಧಿಮಾಂದ್ಯ ಮತ್ತು ಅಂಗವಿಕಲರಿಗೆ ಸಹಾಯ ಮಾಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಅಭಿಪ್ರಾಯ ಪಟ್ಟರು.

ನಗರದ ಹೊರವಲಯದ ಅಂತರಗಂಗಾ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಇಂದು ವಿಟ್ಟಪ್ಪನಹಳ್ಳಿ ಲಕ್ಷ್ಮಮ್ಮ ಹಾಗೂ ಸೀಪೂರು ರವಿಕುಮಾರ್ ಅವರ ಜ್ಞಾಪಕಾರ್ಥವಾಗಿ ಮಕ್ಕಳಿಗೆ ಬೆಡ್ ಶೀಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬುದ್ಧಿಮಾಂದ್ಯ ಮಕ್ಕಳನ್ನು ಕೀಳು ಭಾವನೆಯಿಂದ ನೋಡುವುದು ಬಿಟ್ಟು ಅವರಿಗೆ ಸೌಲಭ್ಯಗಳನ್ನು ನೀಡುವ ಮೂಲಕ ಉಳಿದ  ಸಮುದಾಯಗಳಂತೆ ಅವರು ಕೂಡ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಅ ನಿಟ್ಟಿನಲ್ಲಿ ಆರ್ಥಿಕವಾಗಿ ಉಳ್ಳವರು ಯೋಚಿಸಬೇಕಾಗಿದೆ ಎಂದರು.

ಇದನ್ನು ಓದಿ: ಲಂಚ ಕೇಳಿದರೆ ಅವರ ವಿರುದ್ಧ ಧೈರ್ಯದಿಂದ ಎಸಿಬಿಗೆ ದೂರು ಕೊಡಿ

ಬುದ್ಧಿಮಾಂದ್ಯ ಮತ್ತು ಅಂಗವಿಕಲ ಮಕ್ಕಳ ಅಭಿವೃದ್ಧಿಗೆ ಜಿಲ್ಲಾಡಳಿತ ಬದ್ದವಾಗಿದ್ದು ಅವರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ ಅದೇ ರೀತಿಯಲ್ಲಿ ಅಂತರಗಂಗಾ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಅವಶ್ಯಕತೆ ಇರುವ ಸೌಲಭ್ಯಗಳ ಬಗ್ಗೆ ಪಟ್ಟಿ ಕೊಟ್ಟರೆ  ಸರಕಾರದ,  ದಾನಿಗಳ ಮತ್ತು ಕಂಪನಿಗಳ  ನೆರವಿನಿಂದ ಸೌಲಭ್ಯಗಳನ್ನು ನಿಮ್ಮ ಸಂಸ್ಥೆಗೆ ಕೊಡಿಸಲಾಗುತ್ತದೆ  ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರ ಸಂಘದ ಅಧ್ಯಕ್ಷ ವಿಟ್ಟಪ್ಪನಹಳ್ಳಿ ನಾರಾಯಣಸ್ವಾಮಿ ಮಾತನಾಡಿ ಪ್ರತಿಯೊಬ್ಬ ಮನುಷ್ಯನು ತನ್ನ ಕೈಲಾದ ಸಹಾಯವನ್ನು ಬಡವರಿಗೆ ಬುದ್ಧಿಮಾಂದ್ಯರಿಗೆ ಮಾಡುವುದನ್ನು ಮೈಗೂಡಿಸಿಕೊಳ್ಳ ಬೇಕಾಗಿದೆ ಸಮಾಜದಲ್ಲಿ ಅಂಗವಿಕಲರು ಬುದ್ಧಿಮಾಂದ್ಯರು ಎಂಬ ಬೇಧಬಾವ ಮಾಡುವುದು ಬಿಟ್ಟು ಎಲ್ಲರೂ ಸಮಾನರು ಎಂಬುದನ್ನು ಅರ್ಥಮಾಡಿಸುವ ಜೊತೆಗೆ ಅವರನ್ನು ಮನುಷ್ಯರಂತೆ ಕಾಣಬೇಕಾಗಿದೆ ಎಂದರು.

ಅಂತರಗಂಗಾ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ಶಂಕರ್ ಮಾತನಾಡಿ ನಮ್ಮ ಸಂಸ್ಥೆ 1995ರಿಂದ ಪ್ರಾರಂಭವಾಗಿದ್ದು ಪ್ರಸ್ತುತ 64 ಮಕ್ಕಳು ಇದ್ದು  ದಾನಿಗಳ ಸಹಾಯದಿಂದ ಈ ಸಂಸ್ಥೆ ಇಷ್ಟು ದಿನದಿಂದಲ್ಲೂ ನಡೆಸಿಕೊಂಡು ಬರುತ್ತಿದೆ ನಮ್ಮಲ್ಲಿನ ಮಕ್ಕಳಿಗೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್, ಹಿರಿಯರಿಗೆ ಪಿಂಚಣಿ ಸೌಲಭ್ಯಗಳನ್ನು ಮಾಡಿಸಿಕೊಡಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ರೈತ ಮುಖಂಡ ಮುನಿವೆಂಕಟಪ್ಪ, ರೇಷ್ಮೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಗೋಪಾಲಪ್ಪ ದಾನಿಗಳಾದ ರಶ್ಮಿ, ಅಂತರಗಂಗಾ ಬುದ್ಧಿಮಾಂದ್ಯ ಶಾಲೆಯ ಪ್ರಜ್ಞಾ, ಮಂಜುನಾಥ್ ಮುಂತಾದವರು ಇದ್ದರು.

ವರದಿ: ಅಮರೇಶ್ಸಿ.

Donate Janashakthi Media

Leave a Reply

Your email address will not be published. Required fields are marked *