ಕೊಲ್ಕತ್ತಾ: ಭಾರತ ಸರ್ಕಾರ ಘೋಷಿಸಿರುವ ಪದ್ಮಭೂಷಣ ಪ್ರಶಸ್ತಿಯಯನ್ನು ಹಿರಿಯ ಸಿಪಿಎಂ ಮುಖಂಡ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ತಿರಸ್ಕರಿಸಿದ್ದಾರೆ.
ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ತಿರಸ್ಕರಿಸಿದ ಅವರು “ನಮ್ಮ ಕೆಲಸ ಜನತೆಗಾಗಿಯೇ ವಿನಃ ಪ್ರಶಸ್ತಿಗಾಗಿ ಅಲ್ಲ. ಸರ್ಕಾರದ ಪ್ರಶಸ್ತಿಗಳನ್ನು ನಾನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಸಿಪಿಐಎಂ ಟ್ವೀಟ್ ಮಾಡಿದ್ದು ಟ್ವೀಟ್ ಸಾರಾಂಶ ಈ ರೀತಿ ಇದೆ.
Com. Buddhadeb Bhattacharya who was nominated for the Padma Bhushan award has declined to accept it. The CPI(M) policy has been consistent in declining such awards from the State. Our work is for the people not for awards. Com EMS who was earlier offered an award had declined it. pic.twitter.com/fTmkkzeABl
— CPI (M) (@cpimspeak) January 25, 2022
“ಈ ಪ್ರಶಸ್ತಿ ಬಗ್ಗೆ ನನಗೇನೂ ತಿಳಿದಿಲ್ಲ.ಯಾರೂ ಈ ಬಗ್ಗೆ ನನಗೆ ಏನೂ ಹೇಳಿಲ್ಲ. ಅವರು ನನಗೆ ಪದ್ಮಭೂಷಣ ಪ್ರಶಸ್ತಿ ನೀಡಲು ನಿರ್ಧರಿಸಿದರೆ, ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ”
ಸರ್ಕಾರ ನೀಡುವ ಅಂಥ ಪ್ರಶಸ್ತಿಗಳನ್ನು ನಿರಾಕರಿಸುವ ಸಿಪಿಎಂ ನೀತಿಯಲ್ಲಿ ಯಾವ ಬದಲಾವಣೆಯೂ ಇಲ್ಲ” ಎಂದು ಟ್ವೀಟ್ ನಲ್ಲಿ ವಿವರಿಸಲಾಗಿದೆ.
ಈ ಹಿಂದೆ ಇಎಂಎಸ್ ನಂಬೂದಿರಿಪಾಡ್ ಅವರೂ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು”