ನವ ಭಾರತದ – ನವ ಗೌತಮ ಬುದ್ಧ

ಎನ್ ಚಿನ್ನಸ್ವಾಮಿ ಸೋಸಲೆ

 

ಭಾರತ ಹಾಗೂ ಭಾರತಿಯತ್ವದ ಹಿನ್ನೆಲೆಯಲ್ಲಿ ಒಬ್ಬ ಪ್ರಭುದ್ಧ ಭಾರತೀಯನಾಗಿ, ಜಗತ್ತೇ ಒಪ್ಪುವಂತಹ ಈ ನೆಲದ ಸೊಗಡಿನ ಬೌದ್ಧ ಧರ್ಮವನ್ನು ಸ್ಥಾಪಿಸಿದ ಭಗವಾನ್ ಗೌತಮ ಬುದ್ಧರ 2567 ನೇ ಜಯಂತಿಯ ಹಾರ್ದಿಕ ಶುಭಾಶಯಗಳು

 

ಪ್ರಪಂಚದಾದ್ಯಂತ ಪ್ರತಿಯೊಬ್ಬ ಮನುಷ್ಯನು ಸಾಮರಸ್ಯ – ಸಹೋದರತ್ವದಿಂದ- ಮೇಲು ಕೀಳು, ಶ್ರೇಷ್ಠ ಕನಿಷ್ಠ ಎಂಬ ಮಾನವ –  ಮಾನವರಲ್ಲಿನ ಭೇದ ಭಾವವನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಾವೆಲ್ಲರೂ ಮೊದಲು  ” ಮನುಷ್ಯರು” ಎಂಬುದನ್ನು ಪ್ರತಿಪಾದನೆ ಮಾಡಿ, ಪ್ರತಿಯೊಬ್ಬ ಮನುಷ್ಯನೊಳಗೆ ಅಡಗಿರುವ  ಮನುಷ್ಯತ್ವವನ್ನು ( ಜ್ಞಾನ) ಶಾಂತಿಯುತ ಬದುಕಿಗಾಗಿ ಅನಾವರಣಗೊಳಿಸಿದ – ಹೀಗೆ ಮನಸ್ಸತ್ವದ ಮಾದರಿಯಲ್ಲಿ ಬದುಕಲು ಪ್ರಮುಖ ತೊಡಕಾಗಿದ್ದ    “ಆಸೆ” ಎಂಬುದನ್ನು ನಿರಾಕರಿಸಬೇಕು – ಅದೇ ‘ದುಃಖ” ಕ್ಕೆ ಮೂಲ ಎಂಬ ಬದುಕಿನ ಮೂಲ   ಸಿದ್ಧಾಂತವನ್ನು ಪ್ರತಿಪಾದನೆ ಮಾಡಿ,  ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಮೂಲಾಧಾರವಾದ ಧರ್ಮ ಪ್ರತಿಪಾದನೆ ಮಾಡಿದವರು ಭಗವಾನ್ ಗೌತಮ ಬುದ್ಧರು. ಆ ಮೂಲಕ ಭಾರತ ಹಾಗೂ ಭಾರತೀಯತ್ವವನ್ನು ಪ್ರಪಂಚದ ಭೂಪಟದಲ್ಲಿ ವಿಸ್ತೃತವಾಗಿ ಅನಾವರಣಗೊಳಿಸಿದವರು ಗೌತಮ ಬುದ್ಧರೆ. ಇವರು ನಮ್ಮ ನೆಲದ ಹೆಮ್ಮೆ.

ಶ್ರಮ ಸಿದ್ಧಾಂತದ ಮೂಲಕ ಕಾಯಕ ಕಾರ್ಯವನ್ನು ಶ್ರದ್ಧೆಯಿಂದ ಪಾಲಿಸಿ  – ತಮ್ಮ ಸದೃಢ ಬದುಕಿಗಾಗಿ ಇಂದಿಗೂ ದ್ವೇಷ ಮತ್ತು ಮನುಷ್ಯ ಮನುಷ್ಯರ ನಡುವಿನ ಒಡೆದಾಳುವ ನೀತಿಯನ್ನು ಸಂಪೂರ್ಣವಾಗಿ ನಿರಾಕರಿಸಿ  –    ಪ್ರೀತಿ ಹಾಗೂ ಶಾಂತಿಯ ಮೂಲಕ ಸದೃಢವಾದ ಸಾಮರಸ್ಯದ  ಬಯಸಿ ಬಯಸಿ ಜೀವಿಸಿದರೆ ನೀವು ವಾಸಿಸುವ ಸ್ಥಳ – ಆ ಮೂಲಕ ನಿಮ್ಮ ನಾಡು ನುಡಿ ಸಂಸ್ಕೃತಿ ಸಮೃದ್ಧಿಯಾಗುತ್ತದೆ ಎಂದು ಸಾರಿ,   ಯಾವುದೇ ಕ್ರೂರಿಯನ್ನು ಸಹ ದ್ವೇಷದಿಂದ ದೂಷಿಸದೆ  – ಪ್ರೀತಿಯಿಂದ ಗೆಲ್ಲಬೇಕು ಎಂಬ ಸಹೋದ ಹಾಗೂ  ಭಾತೃತ್ವದ ಹಿನ್ನೆಲೆಯಲ್ಲಿ  ಮನುಷ್ಯನಿಗೆ ಆದರ್ಶವಾದ ನೀತಿ ಪಾಠವನ್ನು ಬೋಧಿಸಿದ ಧರ್ಮ “ಬೌದ್ಧ ಧರ್ಮ”  ಇದರ ಸಂಸ್ಥಾಪಕರೆ ಭಗವಾನ್  ಗೌತಮ ಬುದ್ಧರು. ಇದು ಪ್ರಪಂಚಕ್ಕೆ ಭಾರತ ತನ್ನೊಡಲಿನ ಭಾರತೀಯನಿಂದ  ತನ್ನ ನೆಲದ ಮೂಲಕ ಪ್ರಪಂಚಕ್ಕೆ  ನೀಡಿಸಿದ ಅಮೂಲ್ಯವಾದ  ಕಾಣಿಕೆ. ಈ ಕಾಣಿಕೆ ನಮ್ಮದು ಎಂಬುದನ್ನು ನಾವ್ಯಾರೂ ಮರೆಯಬಾರದು.

ಪ್ರಪಂಚಕ್ಕೆ ಮಾದರಿಯದ ಸಮ ಜನ ಸಂಸ್ಕೃತಿಯನ್ನು ಅನಾವರಣಗೊಳಿ – ಇಂದು ಪ್ರಪಂಚಕ್ಕೆ ಮಾದರಿಯಾಗಿರುವ ಪ್ರಜಾಪ್ರಭುತ್ವವನ್ನು ಅಂದೇ ಸ್ಥಾಪಿಸಿ, ಇದನ್ನು ಅನುಷ್ಠಾನ ಗೊಳಿಸಲು ಪ್ರೇರಣೆಯಾದ ಭಾರತ ನೆಲದ ಪ್ರಪ್ರಥಮ ಪ್ರಜಾಪ್ರಭುತ್ವ ಮಾದರಿಯ ಪ್ರಭುತ್ವವನ್ನು ಜಾರಿಗೊಳಿಸಿದ  ಸಾಮ್ರಾಟ ಅಶೋಕನಿಂದ ಮೊದಲ್ಗೊಂಡು   –  ಶತಶತಮಾನಗಳಿಂದ  ಅನೇಕ ಏಳು – ಬೀಳು, ಇಕ್ಕಟ್ಟು ಬಿಕ್ಕಟ್ಟುಗಳನ್ನು ಎದುರಿಸಿದ  ಗೌತಮ ಬುದ್ಧರು ಪ್ರತಿಪಾದನೆ ಮಾಡಿದ ಈ ಸಮಸಂಸ್ಕೃತಿಯ ಪ್ರಜಾಸತ್ತಾತ್ಮಕ  ಪ್ರಜಾಪ್ರಭುತ್ವವನ್ನು ಈ ನೆಲದಲ್ಲಿ ಸ್ಥಾಪಿಸಲು ಮತ್ತೆ ತನ್ನ  ಧರ್ಮದ ವಾರಸುದಾರರಾಗಿ ಉದಯಿಸಿದ ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರ ಮೂಲಕ ಸಾಧ್ಯವಾದುದ್ದು ಅವಿಸ್ಮರಣೀಯ ವಾದದ್ದು ಆಗಿದೆ. ತನ್ನ ಮಾತೃ ನೆಲದಲ್ಲಿ  ಉಜ್ವಲವಾಗಿ

“ಸಂಭವಾಮಿ ಯುಗೇ ಯುಗೇ” ಎನ್ನುವ ಮಾದರಿಯಲ್ಲಿಯೇ ಮತ್ತೆ ಬಾಬಾಸಾಹೇಬರ ಆದರ್ಶ ಹಾಗೂ ಸಿದ್ಧಾಂತದ ಮೂಲಕ ಉಜ್ವಲವಾಗಿ ಉದಯಿಸುತ್ತಿರುವ  ಧರ್ಮವೇ ಬೌದ್ಧ ಧರ್ಮ.

ಅಂದು ಗೌತಮ ಬುದ್ಧರು ಬೌದ್ಧ ಧರ್ಮವನ್ನು “ಸ್ಥಾಪಿಸಿದರು”  – ಇಂದು ಅಂಬೇಡ್ಕರ್ ಅವರು ಈ ನೆಲದಲ್ಲಿ ಬೌದ್ಧ ಧರ್ಮವನ್ನು “ಪ್ರತಿಷ್ಠಾಪಿಸಿದರು” ಸ್ಥಾಪಿಸುವುದು ಸುಲಭ –  ಆದರೆ ಶತಶತಮಾನಗಳ  ಅನೇಕ  ಏಳು ಬೀಳುಗಳ  ನಂತರವೂ  ಸಹ ಮತ್ತೆ ಅದೇ ಧರ್ಮನು ಪ್ರತಿಷ್ಠಾಪಿಸುವುದು ಬಹು ಕಠಿಣ . ಈ ಕಠಿಣ ಕಾರ್ಯವನ್ನು ಲೀಲಾಜಾಲವಾಗಿ  ಶ್ರದ್ದೆ ಮತ್ತು ತನ್ನ ನೆಲದ ಜನರ ಜ್ಞಾನವನ್ನು ಅಂತರಾಳದಿಂದ ಗೆದ್ದು –   ಅಪಾರ ಪ್ರೀತಿ ಹಾಗೂ ವಿಶ್ವಾಸದ ಸದೃಢವಾದ ಭಾರತವನ್ನು ಕಟ್ಟಲು ಪ್ರೇರಣೆಯಾದವರು ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು.

ನಿಜಾರ್ಥದಲ್ಲಿ  ಇವರು ನವ ಭಾರತದ – ನವ ಗೌತಮ ಬುದ್ಧರೇ ಹಾಗಿದ್ದರೆ ಎಂಬುದನ್ನು ಮರೆಯಬಾರದು. ಬುದ್ದರೂ ಸಹ ‘ಪುರಾಣ’ ದ ರೀತಿಯಲ್ಲಿ ಉದ್ಭವವಾದ  ದೇವರಲ್ಲ-   ‘ವಾಸ್ತವ’ ವಾಗಿ ಮನುಷ್ಯನಿಂದ ಜನಿಸಿ ಈ ನೆಲದಲ್ಲಿ ಓಡಾಡಿದ  ಮನುಷ್ಯ – ಅಂಬೇಡ್ಕರ್ ಅವರು ಸಹ ಬುದ್ಧನ ‘ವಾಸ್ತವ’ ರೂಪದ ಅವತಾರವೇ ಹೊರತು – ‘ಪುರಾಣ’ ರೂಪದ ದೇವರಲ್ಲ. ಇಬ್ಬರು ಮಹಾನ್ ಮನುಷ್ಯರನ್ನು ಕೇವಲ ಮನುಷ್ಯ ಹಾಗೂ ಮನುಷ್ಯತ್ವದ ಜ್ಞಾನದ ಮೂಲಕ ನೋಡಬೇಕೆ ಹೊರತು –  ದೇವರನ್ನಾಗಿಸಿ ದೇವರ ನೋಡುವ ಅಜ್ಞಾನದಲ್ಲಿ ನೋಡಬಾರದು ಎಂಬುದೇ ಕಳಕಳಿಯ ಮನವಿ. ಮನುಷ್ಯ ನಮ್ಮನ್ನು ಮಾತನಾಡಿಸುತ್ತಾನೆ. ದೇವರು ನಮ್ಮನ್ನು ಮೌನವಾಗಿಸುತ್ತದೆ. ಬುದ್ಧ ಮತ್ತು ಅಂಬೇಡ್ಕರ್ ಅವರು ಮನುಷ್ಯರಾಗಿ ಭಾರತ ಮತ್ತು ಭಾರತೀಯರಿಗಾಗಿ ಜ್ಞಾನದ ಮಾರ್ಗದಲ್ಲಿ ಮಾತನಾಡಿದಷ್ಟು – ಈ ದೇಶದಲ್ಲಿ ಉದಯಿಸಿರುವ ಲಕ್ಷಾಂತರ ದೇವನು ದೇವತೆಗಳು ಮನುಷ್ಯ ಹಾಗೂ ಮನುಷ್ಯತ್ವದ ರೂಪದಲ್ಲಿ ಕಿಂಚಿತ್ತೂ  ಸಹ ಮಾತನಾಡದೆ ಕೇವಲ ಸಂಪ್ರದಾಯವನ್ನೇ ಒಪ್ಪಿಕೊಂಡು ಭವ್ಯ ದೇವರ ಗುಡಿಗಳಲ್ಲಿ ಕಲ್ಲಾಗಿಯೇ ಕುಳಿತದ್ದು – ಇಂದಿಗೂ ಯಾವುದೇ ಬದಲಾವಣೆ ಇಲ್ಲದೆ ಹಾಗೆ ಕುಳಿತಿರುವುದು  ಇದಕ್ಕೆ ಸಾಕ್ಷಿ. ಇದು ಅಜ್ಞಾನದ ಪೂಜೆ ಪುರಸ್ಕಾರವನ್ನು ಬಯಸಿದರೆ – ಮನುಷ್ಯ ಜ್ಞಾನದ ಶಿಕ್ಷಣವನ್ನು ಬಯಸುತ್ತಾನೆ. ಇದೆ ಬುದ್ಧ ಭೀಮರು ತಿಳಿಯಿಳಿದ ಧರ್ಮದ ನೀತಿ ಪಾಠ.

ಇವರಿಬ್ಬರೂ ಮನುಷ್ಯರಾಗಿ ತನ್ನಂತೆ ಇರುವ ಮನುಷ್ಯರಿಗೆ ಈ ಭೂಮಿಯಲ್ಲಿ ಜನಿಸಿದ ಮೇಲೆ ಹೇಗೆ ಸಾಮರಸದಿಂದ ಬದುಕಬೇಕು ಎಂಬ ನೀತಿಯ  “ಮನುಷ್ಯತ್ವ” ನೀತಿ ಪಾಠದ ಮೂಲಕ ಪ್ರತಿಪಾದನೆ ಮಾಡಿದ ಅಂಶಗಳನ್ನು  “ದೇವರಾಗಿ” ಹೇಳಿದರು ಎಂದು ಪರಿಗಣಿಸಿದರೆ ಅದು “ಅಜ್ಞಾನಕ್ಕೆ”  ದಾರಿ ಮಾಡಿಕೊಡುತ್ತದೆ  – ಬದಲಿಗೆ ಮನುಷ್ಯರಾಗಿ ಮನುಷ್ಯತ್ವದ ಹಿನ್ನೆಲೆಯಲ್ಲಿ  ಜ್ಞಾನದ ರೂಪದಲ್ಲಿ ಪರಿಗಣಿಸಿದರೆ ಅದು ಬದುಕಿನ “ಸುಜ್ಞಾನದ” ಹಾದಿಗೆ ದಾರಿ ಮಾಡಿಕೊಡುತ್ತದೆ.

ನಾವೆಲ್ಲರೂ ಮನುಷ್ಯರನ್ನು ದೇವರಾಗಿಸಿಕೊಂಡು ಶತಶತಮಾನಗಳಷ್ಟು ಹಿನ್ನಡೆಯುವ ಬದಲು –   ಮನುಷ್ಯರನ್ನು ಮನುಷ್ಯತ್ವದ ಹಿನ್ನೆಲೆಯಲ್ಲಿ ಪರಿಗಣಿಸಿ ವರ್ತಮಾನ ಹಾಗೂ ಭವಿಷ್ಯದಲ್ಲಿ  ಜ್ಞಾನದ ಕಡೆಗೆ ಮುನ್ನಡೆಯೋಣ.

ಇದೆ 2567 ನೇ ಬುದ್ಧ ಜಯಂತಿ ಹಾಗೂ132 ನೇ ಭೀಮರ ಜಯಂತಿಗೆ  ನಾವೆಲ್ಲರೂ ಸಲ್ಲಿಸುವ “ಬೌದ್ಧಿಕ”  ನಮನಗಳು . ಸಮಸ್ತ ಬಂಧುಗಳಿಗೆ ಭಗವಾನ್ ಗೌತಮ ಬುದ್ಧರ ಹುಟ್ಟಿದ ದಿನದ (ಪೂರ್ಣಿಮೆಯ) ಪ್ರೀತಿ – ಶಾಂತಿ – ಸೌಹಾರ್ದತೆಯ ಹಾಗೂ ಶಿಕ್ಷಣ – ಸಂಘಟನೆ-  ಹೋರಾಟದ ಮೂಲಕ ಜಯದ ಹಾರ್ದಿಕ ಶುಭಾಶಯಗಳು.

Donate Janashakthi Media

Leave a Reply

Your email address will not be published. Required fields are marked *