ಬಿಹಾರದಲ್ಲಿ ಸರಣಿ ಸೇತುವೆ ಕುಸಿತ : 15 ದಿನಗಳಲ್ಲಿ 10 ಕುಸಿತ ಪ್ರಕರಣ

ಬಿಹಾರ: ರಾಜ್ಯದಲ್ಲಿ ಸೇತುವೆ ಕುಸಿದು ಬೀಳುವ ಘಟನೆಗಳು ಮುಂದುವರೆದಿವೆ. ಜುಲೈ 04ರಂದು ಸರನ್‌ ಜಿಲ್ಲೆಯಲ್ಲಿನ ಸೇತುವೆಯೊಂದು ಕುಸಿದು ಬಿದ್ದಿದ್ದು, ಕಳೆದ 24 ಗಂಟೆಗಳಲ್ಲಿ ಸರನ್‌ ಜಿಲ್ಲೆಯಲ್ಲಿ ಮೂರು ಸೇತುವೆ ಕುಸಿದು ಬಿದ್ದ ಘಟನೆ ನಡೆದಿದೆ. ಬಿಹಾರದಲ್ಲಿ

ಬಿಹಾರದಲ್ಲಿ 15 ದಿನಗಳ ಅಂತರದಲ್ಲಿ ಹತ್ತು ಸೇತುವೆಗಳು ಕುಸಿದು ಬಿದ್ದಿದ್ದು, ಸರ್ಕಾರದ ಕಳಪೆ ಕಾಮಗಾರಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಬಿಹಾರದ ಸಿವನ್, ಮಧುಬನಿ, ಅರಾರಿಯ, ಪೂರ್ವ ಚಂಪಾರಣ್ ಮತ್ತು ಕಿಶನ್ಗಂಜ್ ಜಿಲ್ಲೆಗಳಲ್ಲಿ ಸೇತುವೆಗಳು ಕುಸಿದಿವೆ. ಸೇತುವೆಗಳಷ್ಟೆ ಅಲ್ಲ ಸರ್ಕಾರದ ಮೇಲಿನ ನಂಬಿಕೆಯೂ ಕುಸಿಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ’ಲೋಕಸಭೆಯಲ್ಲಿ ಮೋದಿ ಹೇಳಿದ 6 ಸುಳ್ಳುಗಳು : ಸ್ಪೀಕರ್‌ಗೆ ಕಾಂಗ್ರೆಸ್ ದೂರು

ಬಿಹಾರದಲ್ಲಿ ನಿರಂತರವಾಗಿ ಸೇತುವೆಗಳು ಕುಸಿಯುತ್ತಿರುವ ವಿಷಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೌನಕ್ಕೆ ಶರಣಾಗಿರುವುದನ್ನು RJD ನಾಯಕ ತೇಜಸ್ವಿ ಯಾದವ್ ಗುರುವಾರ ಟೀಕಿಸಿದ್ದಾರೆ.

ಬಿಹಾರ ರಾಜ್ಯದಲ್ಲಿ ಸೇತುವೆಗಳು ಕುಸಿದ ಘಟನೆಗಳ ಬಗ್ಗೆ ನ್ಯಾಯಾಲಯದ ಗಮನ ಸೆಳೆಯಲು ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.

ಕಳಪೆ ಕಾಮಗಾರಿಯ ಕಾರಣದಿಂದಲೇ ಇವೆಲ್ಲವೂ ಕುಸಿದು ಬಿದ್ದಿರುವುದು ಸುಸ್ಪಷ್ಟ. ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರು, ಇದರ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೆ ಈ ಸೇತುವೆಗಳೂ ಶತಮಾನಗಳ ಕಾಲ ಭದ್ರವಾಗಿರುತ್ತಿತ್ತು. ಆದರೆ ದುಡ್ಡು ಹೊಡೆಯುವ ಕಾರಣದಿಂದಲೇ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಇದನ್ನೂ ನೋಡಿ: ಬಿಹಾರದಲ್ಲಿ ಸರಣಿ ಸೇತುವೆ ಕುಸಿತ : 15 ದಿನಗಳಲ್ಲಿ 10 ಕುಸಿತ ಪ್ರಕರಣ

Donate Janashakthi Media

Leave a Reply

Your email address will not be published. Required fields are marked *