ಮಿಜೋರಾಂನ ಸೇತುವೆ ದುರಂತ: ಮೃತ ಕಾರ್ಮಿಕ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೆ CWFI ಆಗ್ರಹ

ಬೆಂಗಳೂರು: ಮಿಜೋರಾಂ ರಾಜಧಾನಿ ಐಜ್ವಾಲ್ ಬಳಿಯ ಸೈರಾಂಗ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ರೈಲ್ವೆ ಸೇತುವೆಯ ಆಗಸ್ಟ್‌-23 ರಂದು ಕುಸಿತದ ನಂತರ 23 ಕಟ್ಟಡ ಕಾರ್ಮಿಕರು ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಈ ದುರಂತದ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ Construction Workers Federation if India(CWFI CITU) ಈ ಘೋರ ದುರ್ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ಮೃತ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಲು ಆಗ್ರಹಿಸಿದೆ.

ಇದನ್ನೂ ಓದಿ:ಮಿಜೋರಾಂದಲ್ಲಿ ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರ ಸಾವು

ಈಶಾನ್ಯ ಫ್ರಾಂಟಿಯರ್ ರೈಲ್ವೆ (NFR) ಪ್ರಕಾರ, ಬುಧವಾರ ಬೆಳಿಗ್ಗೆ 10.00 ರ ಸುಮಾರಿಗೆ ಕುಸಿದ ರೈಲ್ವೆ ಸೇತುವೆಯು ಭೈರಬಿ ಸೈರಂಗ್ ಹೊಸ ಮಾರ್ಗದ ಮಿಜೋರಾಂ ರೈಲ್ವೆ ಯೋಜನೆಯ ಭಾಗವಾಗಿತ್ತು. ಇದನ್ನು ಕುರುಂಗ್ ನದಿಯ ಮೇಲೆ ನಿರ್ಮಿಸಲಾಗಿದೆ ಮತ್ತು ಬೈರಾಬಿ ಮತ್ತು ಸೈರಾಂಗ್ ರೈಲು ನಿಲ್ದಾಣಗಳ ನಡುವೆ ಇದೆ. ಸೇತುವೆಯ ಪಿಯರ್ 104 ಮೀಟರ್ ಎತ್ತರದಲ್ಲಿ ನಿಂತಿದೆ. ಈ ಮಾರಣಾಂತಿಕ ಘಟನೆಯ ಸಮಯದಲ್ಲಿ ಸುಮಾರು 40 ಕಾರ್ಮಿಕರು, ಹೆಚ್ಚಾಗಿ ಬಂಗಾಳದಿಂದ ವಲಸೆ ಬಂದ ಕಾರ್ಮಿಕರು ಅಲ್ಲಿ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ಈ ಭೀಕರ ಘಟನೆಯಲ್ಲಿ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಕನಿಷ್ಠ 23 ಕಟ್ಟಡ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಸುದ್ದಿ ಬಂದ ಕೂಡಲೇ ಮಾಲ್ದಾ ಜಿಲ್ಲೆಯ ಸಿಡಬ್ಲ್ಯುಎಫ್‌ಐ ನಾಯಕರ ನಿಯೋಗವು ಮೃತರ ಗ್ರಾಮಗಳಿಗೆ ತೆರಳಿ ಅವರನ್ನು ಭೇಟಿಯಾಯಿತು. ನಂತರ ಮೃತ ಕಾರ್ಮಿಕರ ದೇಹಗಳನ್ನು ತರಲು ಹಾಗೂ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಲು CWFI ಸಂಘಟನೆ ಶ್ರಮಿಸಲಿದೆ ಎನ್ನುವ ಭರವಸೆ ನೊಂದ ಕುಟುಂಬಗಳಿಗೆ ನೀಡಲಾಗಿದೆ ಎಂದು CWFI ರಾಷ್ಟ್ರೀಯ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *