ಬೆಂಗಳೂರು| ಧಾರಾಕಾರ ಸುರಿದ ಮಳೆಗೆ ಸೇತುವೆ ಕುಸಿತ

ನೆಲಮಂಗಲ: ನೆನ್ನೆ ಮಂಗಳವಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು. ಧಾರಾಕಾರ ಸುರಿದ ಮಳೆಗೆ ಸೇತುವೆ ಕುಸಿದು ಬಿದ್ದ ಘಟನೆ ನೆಲಮಂಗಲ ರಸ್ತೆಯ ಚಿಕ್ಕಿಬಿದರಕಲ್ಲು ಗ್ರಾಮದ ಬಳಿ ನಡೆದಿದೆ.

ಗ್ರಾಮದ ರಾಮನ ದೇವಾಲಯಕ್ಕೆ ನಿರ್ಮಾಣ ಮಾಡಿದ್ದ ಸೇತುವೆ ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಸೇತುವೆಯಾಗಿತ್ತು. ಕುಸಿದು ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ನೆಲಮಂಗಲ ಸಂಚಾರಿ ಪೊಲೀಸರಿಂದ ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: 10 ರೂಪಾಯಿ ನಾಣ್ಯಗಳನ್ನು ದೈನಂದಿನ ವಹಿವಾಟಿಗೆ ಬಳಸಬಹುದು: ಆರ್‌ಬಿಐ ಜನರಲ್ ಮ್ಯಾನೇಜರ್

ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅವಘಡ ಸಂಭವಿಸಿದೆ. ಮಳೆ ಬರುವಾಗ ವಾಹನ ಸವಾರರು ದೇವಾಲಯದ ಬಳಿ ಆಸರೆ ಪಡೆದಿದ್ರು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಮಾದನಾಯಕಹಳ್ಳಿ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ದುರಸ್ತಿ ಕಾರ್ಯಕ್ಕೆ ಮುಂದಾದರು.

ಇದನ್ನೂ ನೋಡಿ: ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ : ಬಹುದೊಡ್ಡ ಅಪಾಯಕಾರಿ ನಡೆ – ಕವಿತಾ ಲಂಕೇಶ್ Janashakthi Media

Donate Janashakthi Media

Leave a Reply

Your email address will not be published. Required fields are marked *