ಭ್ರಷ್ಟಾಚಾರ, ಹಗರಣಗಳು ಮತ್ತು ಅವುಗಳಿಂದ ಮುಕ್ತಿ!

ಕರ್ನಾಟಕದ  40ಪರ್ಸೆಂಟ್,  ಮೇಘಾಲಯದ  ಜೈ ಹೋ ಮತ್ತು ನಂತರ…

ವೇದರಾಜ ಎನ್ ಕೆ

ಕಳೆದ ಕೆಲವು ವಾರಗಳಿಂದ ರಾಜಕೀಯ ಭ್ರಷ್ಟಾಚಾರ ದೊಡ್ಡ ಸುದ್ದಿ ಮಾಡುತ್ತಿದೆಇದು ಸಂಭವಿಸುತ್ತಿರುವುದು ಮೂರು ಈಶಾನ್ಯ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು ಸದ್ಯದಲ್ಲೇ ನಡೆಯಬೇಕಾಗಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ. ಇದಕ್ಕೆ ದೇಶದ ವ್ಯಂಗ್ಯಚಿತ್ರಕಾರರ ಪ್ರತಿಕ್ರಿಯೆಗಳ ಒಂದು  ನೋಟ.

ಈಶಾನ್ಯ ಭಾರತದ ಮೂರು ರಾಜ್ಯಗಳಿಗೆ ಪ್ರಧಾನಿ ಮತ್ತು ಗೃಹಮಂತ್ರಿಗಳ ಪದೇ-ಪದೇ ಭೇಟಿ ನಿಂತಿದೆ. ಏಕೆಂದರೆ ಅಲ್ಲಿ ಚುನಾವಣೆಗಳು ಮುಗಿದಿವೆ.

ಮತದಾನ ಮುಗಿಯಿತೇ?”        “ಯಸ್‍, ಸಾರ್”
“ಪ್ರತಿಯೊಂದು ಕಡೆ?”            “ಯಸ್‍ ಸಾರ್”

ಖಂಡಿತಾ?”  “ಯಸ್‍, ಸಾರ್”            “ಗ್ಯಾಸ್‍ ಸಿಲಿಂಡರ್ ಬೆಲೆ ಏರಿಸಿ”

( ಅಲೋಕ್‍ ನಿರಂತರ್, ಫೇಸ್‍ಬುಕ್)

ಹೌದು, ಅಡುಗೆ ಅನಿಲದ ಸಿಲಿಂಡರ್ ಬೆಲೆಗಳಲ್ಲಿ ಮತ್ತೊಂದು ಸುತ್ತಿನ ಹೆಚ್ಚಳದೊಂದಿಗೆ ಅಲ್ಲಿ ಚುನಾವಣಾ ಪರ್ವ ಸಮಾರೋಪಗೊಂಡಿದೆ.

***

ಈಗ ಕರ್ನಾಟಕದ ಸರದಿ.  ಆದ್ದರಿಂದ ಸದ್ಯಕ್ಕೆ ಇಂತಹ ಏರಿಕೆಗಳು ಇರುವುದಿಲ್ಲ…..?

ಈ ಮೊದಲೇ ಗಮನಿಸಿದಂತೆ ಪ್ರಧಾನಿ-ಗೃಹಮಂತ್ರಿಗಳ ಭೇಟಿಗಳ ಪ್ರಮಾಣ ಹೆಚ್ಚುತ್ತಿದೆ. ಉದ್ಘಾಟನೆಗಳ, ‘ರೆವ್ಡಿ’ ಪ್ರಕಟಣೆಗಳ ಪರ್ವ ಭರದಿಂದ ಸಾಗಿದೆ.

ಇದಕ್ಕೆ ಬಹಳ ಮೊದಲೇ ರಾಜ್ಯದ ಆಳುವ ಪಕ್ಷದ ಅಧ್ಯಕ್ಷರು ಈ ಚುನಾವಣೆಯಲ್ಲಿ ಜನರ ಮುಂದಿರುವ ಪ್ರಶ್ನೆ ಎಲ್‍ಪಿಜಿ-ಪೆಟ್ರೋಲ್-ಡೀಸೆಲ್‍ ಬೆಲೆಗಳಲ್ಲಿ ಅಭೂತಪೂರ್ವ ಏರಿಕೆಯಂತೂ ಅಲ್ಲವೇ ಅಲ್ಲ, ರಸ್ತೆಗುಂಡಿಗಳು, ಚರಂಡಿಗಳೂ ಅಲ್ಲ, ಬದಲಿಗೆ ‘ಸಾವರ್ಕರ್ ಎದುರು ಟಿಪ್ಪು’ ಎಂದು ಸಾರಿದ್ದರು.

ಮುಖ್ಯಮಂತ್ರಿಗಳೂ ಅಷ್ಟು ಕಡಕ್‍ ಆಗಿಯಲ್ಲವಾದರೂ, ಅದನ್ನೇ ಬೇರೆ ರೀತಿಯಲ್ಲಿ ಹೇಳಿದ್ದರು.

ಮಾರಾಯ ವಿಕಾಸ, ನಾವು ರಸ್ತೆಗುಂಡಿಗಳನ್ನು ಮುಚ್ಚುವ ವರೆಗೆ,
ರಸ್ತೆಯಲ್ಲಿ ಪ್ರಯಾಣದ ಬದಲು ಸಮಯದಲ್ಲಿ ಪ್ರಯಾಣವನ್ನು ಯಾಕೆ ಪ್ರಯತ್ನಿಸಬಾರದು?
(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

***

ಆದರೆ, ಕೇಂದ್ರ ಗೃಹಮಂತ್ರಿಗಳು ಕರ್ನಾಟಕದಲ್ಲಿ ತನ್ನ ಪ್ರಚಾರವನ್ನು ಭ್ರಷ್ಟಾಚಾರದ ವಿಷಯದಿಂದ ಆರಂಭಿಸಿದ್ದಾರೆ.

“ಪ್ರಧಾನಿ ಮೋದಿಯವರನ್ನು ಒಮ್ಮೆ ನಂಬಿ ಮತ್ತು ಯೆಡ್ಯೂರಪ್ಪನವರನ್ನು ಒಮ್ಮೆ ನಂಬಿ.. ನಾವು ಕರ್ನಾಟಕವನ್ನು ಭ್ರಷ್ಟಾಚಾರ -ಮುಕ್ತ ಮಾಡುವ ಮತ್ತು ದಕ್ಷಿಣ ಭಾರತದಲ್ಲಿ ನಂಬರ್ ಒನ್‍ ರಾಜ್ಯವಾಗಿ ಮಾಡುವ ಸರಕಾರವನ್ನು ಕೊಡುತ್ತೇವೆ” ಎಂದು ಹೇಳಿ ಅವರು ದಿಲ್ಲಿಗೆ ಮರಳಿದರು.

ಅವರು ದಿಲ್ಲಿ ತಲುಪುತ್ತಿದ್ದಂತೆಯೇ ಅವರ ಪಕ್ಷದ ಚೆನ್ನಗಿರಿ ಕ್ಷೇತ್ರದ ಶಾಸಕರ ಪುತ್ರ ಶಾಸಕರ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿರುವ ಮತ್ತು ಆತನ ಮನೆಯ ಮೇಲೆ ಲೋಕಾಯುಕ್ತ ದಾಳಿಯ ಸುದ್ದಿ ಪ್ರಕಟವಾಗಿದೆ.

ಭ್ರಷ್ಟಾಚಾರ
ಮುಕ್ತವಾಗಿದೆ!
(ಸತೀಶ ಆಚಾರ್ಯ, ಸೌತ್‍ಫಸ್ಟ್)

ರಾಜ್ಯದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ಭ್ರಷ್ಟಾಚಾರ 40% ‘ಕಮಿಷನ್‍’ ವರೆಗೆ ಏರಿದೆ ಎಂಬ ಈಗಾಗಲೇ ಬಿರುಸಾದ ಚರ್ಚೆ ನಡೆದಿರುವ  ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದೆ.

(ಪಿ.ಮಹಮ್ಮದ್, ಫೇಸ್‍ಬುಕ್)

***

ಪ್ರಸಿದ್ಧ ಮೈಸೂರ್ ಸ್ಯಾಂಡಲ್‍ ಸೋಪ್‍ ತಯಾರಿಸುವ ಕೆಎಸ್‍ಡಿಎಲ್‍ ನ ಅಧ್ಯಕ್ಷರಾಗಿ ಈ ಶಾಸಕರು ಕಾರ್ಖಾನೆಗೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಟೆಂಡರಿನಲ್ಲಿ ಕಮಿಷನ್‍ ವಸೂಲಿ ಮಾಡುತ್ತಿದ್ದಾರೆ, ಅದು ಸರಕಾರೀ ಅಧಿಕಾರಿಯೂ ಆಗಿರುವ ಅವರ ಪುತ್ರನ ಮೂಲಕ ನಡೆಯುತ್ತಿದೆ ಎಂಬುದು ಈಗ ಇರುವ ಆರೋಪ..

ಹ್ಯಾಂಡ್‍ವಾಷ್‍ ಬೇಕು. ಒಂದು ಟ್ರಕ್‍ಲೋಡಿನಷ್ಟು
ರಾಜ್ಯ ಘಟಕಕ್ಕೆ, ಇನ್ನೊಂದು ಲೋಡ್‍ ದಿಲ್ಲಿಗೆ.
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

***

ಮಗ ಸಿಕ್ಕಿಕೊಂಡಾಗ ಈ ಶಾಸಕರು ತಲೆ ಮರೆಸಿಕೊಂಡ, ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ ಸುದ್ದಿಯೂ ಬಂತು. ಜತೆಗೇ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಇಬ್ಬರು ಅಧಿಕಾರಿಗಳ ವರ್ಗಾವಣೆಯ ಸುದ್ದಿ ಕೂಡ.

(ಪಿ.ಮಹಮ್ಮದ್, ಫೇಸ್‍ಬುಕ್‍)

***

ಮತ್ತೊಂದು ಎಲ್ಲರ ಗಮನ ಸೆಳೆದ ಸಂಗತಿಯೆಂದರೆ, ಅವರಿಗೆ ಹೈಕೋರ್ಟಿನಿಂದ ಜಾಮೀನು ಒಂದೇ ದಿನದಲ್ಲಿ ಸಿಕ್ಕಿತು,

ಇಂತಹ ನ್ಯಾಯಾಂಗ ಪ್ರಕ್ರಿಯೆ ದೊಡ್ಡವರ ಪ್ರಕರಣಗಳನ್ನು ಮಾತ್ರ ದಿನ ಬೆಳಗಾಗುವುದರೊಳಗೆ ಪುರಸ್ಕರಿಸಲಾಗುತ್ತದೆ ಎಂಬ ಭಾವನೆಯನ್ನು ಉಂಟುಮಾಡುತ್ತದೆ ಎಂದು ಬೆಂಗಳೂರು ವಕೀಲರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿತು.

ಫಾಸ್ಟ್ ಫುಡ್ಕ್ಯಾಷ್‍ ಅಂಡ್‍ ಕ್ಯಾರಿ”

(ದಿನೇಶ್‍ ಕುಕ್ಕುಜಡ್ಕ, ಫೇಸ್‍ಬುಕ್)

ಇದೂ ಸಾಲದೆಂಬಂತೆ , ಜಾಮೀನು ಪಡೆದು ಶಾಸಕರು ಸ್ವಯಂ-ಭೂಗತವಾಸದಿಂದ ಹೊರಬಂದಾಗ ಅವರಿಗೆ ಭಾರೀ ಸ್ವಾಗತ ನೀಡಿ, ಮೆರವಣಿಗೆಯಲ್ಲಿ ಒಯ್ಯಲಾಯಿತಂತೆ!

(ಸತೀಶ ಆಚಾರ್ಯ, ಫೇಸ್‍ಬುಕ್)

***

ಲೋಕಪಾಲ ದಾಳಿಯಲ್ಲಿ  ವಶಪಡಿಸಿಕೊಂಡ 6.10 ಕೋಟಿ ರೂ. ನಗದು ಅಡಿಕೆ ಮಾರಾಟದಿಂದ ಬಂದದ್ದು ಎಂದು ಶಾಸಕರು, ಹೇಳಿರುವುದಾಗಿಯೂ ವರದಿಯಾಗಿದೆ. ಈ ಪ್ರದೇಶದಲ್ಲಿ ಅಡಿಕೆ ಬೆಳೆಗಾರರ ಮನೆಗಳಲ್ಲಿ ಇಷ್ಟು ನಗದು ಸಾಮಾನ್ಯ ಸಂಗತಿ ಎಂದು ಅವರ ಸಮರ್ಥಕರು ಹೇಳುತ್ತಿರುವುದಾಗಿಯೂ ವರದಿಯಾಗಿದೆ.

(ದತ್ತಾ3. ವರ್ಡ್‍ಪ್ರೆಸ್.ಕಾಂ)

ಮಗ 40 ಲಕ್ಷ ರೂ. ಲಂಚ ಪಡೆದ ಆರೋಪದ ಬಗ್ಗೆ ಸಮಜಾಯಿಷಿ ಕೊಡುತ್ತ, ಯಾರೋ ಬಂದು ಅಷ್ಟು ಹಣ ಇಟ್ಟು ಓಡಿ ಹೋಗಿದ್ದಾರೆ ಎಂದಿದ್ದಾರಂತೆ! ಈ ವಿಷಯಗಳಲ್ಲಿ  ಅವರು ಲೋಕಪಾಲ ವಿಚಾರಣೆಯಲ್ಲಿ ಸಹಕರಿಸುತ್ತಿಲ್ಲ  ಎಂದೂ ಈಗ ಹೇಳಲಾಗುತ್ತಿದೆ.

(ಪಿ.ಮಹಮ್ಮದ್, ಫೇಸ್‍ಬುಕ್)

ಈ ಶಾಸಕರ ಮೂವರು ಪುತ್ರರು ಇತ್ತೀಚಿನ ವರ್ಷಗಳಲ್ಲಿ ನೂರಾರು ಕೋಟಿ ರೂ. ವಹಿವಾಟು ನಡೆಸಿದ್ದಾರೆ, ಶಾಸಕರ ಸ್ಥಾನ  ಮತ್ತು ಕೆಎಸ್‍ಡಿಎಲ್‍ ಅಧ್ಯಕ್ಷ ಹುದ್ದೆ ಹಾಗೂ ಒಬ್ಬ ಮಗನ ಅಧಿಕಾರ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಗಳಿಸಿರುವ ಹಣವನ್ನು ಅಡಿಕೆ ಮಂಡಿ ಮೂಲಕ ಪರಿರ್ತಿಸಿರುವುದು ಕಂಡು ಬಂದಿದೆ, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಪೋಲೀಸರು ಇ.ಡಿ.ಗೆ  ವರದಿ ಸಲ್ಲಿಸಿದ್ದಾರಂತೆ. (ಪ್ರಜಾವಾಣಿ, ಫೇಸ್‍ಬುಕ್‍, ಮಾರ್ಚ್ 11.)

ಕ್ಯಾಚ್!

(ಅಲೋಕ್‍ ನಿರಂತರ್, ಫೇಸ್‍ಬುಕ್)

ಪ್ರತಿಪಕ್ಷಗಳ ಆಳ್ವಿಕೆಯ ರಾಜ್ಯಗಳಲ್ಲಿ ತನ್ನ ಇತರ ಸಹ-ಏಜೆನ್ಸಿಗಳೊಂದಿಗೆ ಬಹಳಷ್ಟು ಕೆಲಸ ಹಚ್ಚಿಕೊಂಡಿರುವ ಇ.ಡಿ. ಕರ್ನಾಟಕಕ್ಕೂ ಬರುತ್ತದೆಯೋ ಕಾದು ನೋಡಬೇಕು……

***

ಭ್ರಷ್ಟಾಚಾರದ ಇಂತಹ ಪ್ರದರ್ಶನದ ನಂತರ, ಅತ್ತ ಮೇಘಾಲಯದಲ್ಲಿ ಭ್ರಷ್ಟಾಚಾರ-ಹಗರಣಗಳ ಚರ್ಚೆಯ ಇನ್ನೊಂದು ಆಯಾಮವನ್ನು ತೆರೆದಿಟ್ಟಿರುವ, ಅಲ್ಲಿ ಚುನಾವಣೆಗಳ ಮೊದಲು ಮತ್ತು  ನಂತರ ನಡೆದಿರುವ ಸಂಗತಿ  ಏನು ಹೇಳುತ್ತದೆ?

ಭಾರತದಲ್ಲೇ ಅತ್ಯಂತ ಭ್ರಷ್ಟ ಸರಕಾರ”         “ತನಿಖೆಗೆ ಆದೇಶ ನೀಡುತ್ತೇವೆ”

ಜೈ ಹೋ!

(ಸತೀಶ ಆಚಾರ್ಯ, ಫೇಸ್‍ ಬುಕ್)

ಚುನಾವಣೆ ಪ್ರಚಾರದ ವೇಳೆಯಲ್ಲಿ ಪ್ರಧಾನಿಗಳು ಮೇಘಾಲಯದ ಎನ್‍ಪಿಪಿ ಪಕ್ಷದ ಸರಕಾರ ಭಾರತದಲ್ಲೇ ಅತ್ಯಂತ ಭ್ರಷ್ಟ ಸರಕಾರ ಎಂದು ವರ್ಣಿಸಿದ್ದರು. ಗೃಹ ಮಂತ್ರಿಗಳು ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗುವುದು ಎಂದಿದ್ದರು, ಆದ್ದರಿಂದ ತಮ್ಮ ಪಕ್ಷವನ್ನು ಗೆಲ್ಲಿಸಬೇಕು ಎಂದು ಅಲ್ಲಿನ ಮತದಾರರಿಗೆ ಇಬ್ಬರೂ ಮನವಿ ಮಾಡಿದ್ದರು. ಮತದಾರರು ಎನ್‍ಪಿಪಿ ಸ್ಪರ್ಧಿಸಿದ್ದ 57 ಸೀಟುಗಳಲ್ಲಿ 26ರಲ್ಲಿ ಅದನ್ನು ಗೆಲ್ಲಿಸಿದರು, 60 ಸೀಟುಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಗೆ  2 ಸೀಟುಗಳನ್ನು ಕೊಟ್ಟರು. ಎನ್‍ಪಿಪಿಗೆ ಸರಕಾರ ರಚಿಸಲು ಬಿಜೆಪಿ ಬೆಂಬಲ ನೀಡಿತು ಮಾತ್ರವಲ್ಲ, ಪ್ರಧಾನಿ ಮತ್ತು ಗೃಹಮಂತ್ರಿ ಇಬ್ಬರೂ ಕೆಲವೇ ದಿನಗಳ ಹಿಂದೆ ತಾವೇ ಕಟುವಾಗಿ ಟೀಕಿಸಿದ್ದವರ ಹೊಸ ಸರಕಾರದ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವ ಕೃಪೆ ತೋರಿದರು!

***

ಹೌದು, ಸಿಬಿಐ, ಇಡಿ ಇತ್ಯಾದಿ ಮೇಘಾಲಯಕ್ಕೆ ಹೋಗಲಿಲ್ಲ, ಬದಲಿಗೆ ಅದೇ ದಿನ  ಬಿಹಾರದತ್ತ ಮುಖ ಮಾಡಿತು. 2004-09 ಅವಧಿಯಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳಾಗಿದ್ದಾಗ  ಲಾಲೂ ಯಾದವ್‍ ರ ಮೇಲೆ, ರೈಲ್ವೆಯಲ್ಲಿ ಗ್ರೂಪ್‍ ಡಿ ಉದ್ಯೋಗಕ್ಕಾಗಿ ಭೂಮಿ ತಗೊಂಡರು ಎಂದು 2008ರಲ್ಲಿ ಹಾಕಿದ್ದ, 2017ರಲ್ಲಿ ಮತ್ತೆ ತೆರೆದಿದ್ದ ಕೇಸಿನ ವಿಚಾರಣೆ ಮತ್ತೊಮ್ಮೆ ಅದೇ ದಿನ ಆರಂಭವಾಗಿದೆ. 2008ರಲ್ಲಿ ಈ ಬಗ್ಗೆ ಸಿಬಿಐ ತನಿಖೆ ನಡೆಸಿ “ಸಾಕ್ಷ್ಯ ಇಲ್ಲ” ಎಂದು ಮುಚ್ಚಿತ್ತು. 2011ರಲ್ಲಿ ಮಮತಾ ಬ್ಯಾನರ್ಜಿ ರೈಲ್ವೆ ಮಂತ್ರಿಯಾಗಿದ್ದಾಗ ಮತ್ತೆ ತನಿಖೆ ನಡೆದು ಮತ್ತೆ “ಸಾಕ್ಷ್ಯ ಇಲ್ಲ” ಎಂದು ಮುಚ್ಚಲಾಯಿತು. ಆದರೂ ಅದೇ ಸಿಬಿಐ, 2015ರಲ್ಲಿ ರಲ್ಲಿ ಜೆಡಿ(ಯು) ‘ಮಹಾಗಠಬಂಧನ್’ ಭಾಗವಾಗಿ ಬಿಜೆಪಿಯೇತರ ಸರಕಾರ ರಚಿಸಿದ ನಂತರ 2017ರಲ್ಲಿ ಈ ಪ್ರಕರಣವನ್ನು ಮತ್ತೆ ತೆರೆಯಿತುಮಹಾಗಠಬಂಧನ್‍ ತ್ಯಜಿಸಿ ಮತ್ತೆ ಬಿಜೆಪಿ ಜತೆ ಕೈಜೋಡಿಸಿತು. (ನಳಿನ್‍ ವರ್ಮ, ನ್ಯೂಸ್‍ ಕ್ಲಿಕ್, ಮಾರ್ಚ್ 10). ಆಗ ಜೆಡಿ(ಯು)

ಈಗ ಮತ್ತೆ ಜೆಡಿ(ಯು) ನೇತೃತ್ವದಲ್ಲೇ ಬಿಜೆಪಿಯಿಲ್ಲದ ಸರಕಾರ ಬಿಹಾರದಲ್ಲಿದೆ ತಾನೇ?

ಉದ್ಯೋಗಕ್ಕಾಗಿ ಭೂಮಿ’  ಹಗರಣದ ವಿಚಾರಣೆ ಓ.ಕೆ…..
ಉದ್ಯೋಗಕ್ಕಾಗಿ ಮತ ನೀಡಿ’ ಹಗರಣದ ಬಗ್ಗೆ ಕೇಳಿದ್ದೀರಾ?

ಉದ್ಯೋಗ ನೀಡುವ ಚುನಾವಣಾ ಭರವಸೆಗಳು”

(ಕೀರ್ತೀಶ್‍, ಬಿಬಿಸಿ ನ್ಯೂಸ್‍ ಹಿಂದಿ)

***

ಥೈವಾನಿನ ಹೊನ್ ಹೈ ಗುಂಪು( ಆಪಲ್‍ನ ಐಪೋನ್‍ಗಳನ್ನು ತಯಾರಿಸಿ ಕೊಡುವ ಫೋಕ್ಸ್ ಕಾನ್ನ್ ಇದಕ್ಕೆ ಸೇರಿದ ಕಂಪನಿ) ಕರ್ನಾಟಕದಲ್ಲಿ ಒಂದು ಪ್ರಮುಖ ಹೂಡಿಕೆ ಮಾಡಲಿದ್ದು ಇದರಿಂದ 1 ಲಕ್ಷ ಉದ್ಯೋಗಗಳು ನಿರ್ಮಾಣಗೊಳ್ಳುತ್ತವೆ ಎಂದು ಮುಖ್ಯಮಂತ್ರಿಗಳು ಮಾರ್ಚ್ 3 ರಂದು ಟ್ವೀಟ್‍ ಮಾಡಿದರು.

ಆದರೆ ತಮ್ಮ ಅಧ್ಯಕ್ಷರ ಬೆಂಗಳೂರು ಭೇಟಿಯ ಕಾಲದಲ್ಲಿ ಇಂತಹ ಯಾವುದೇ ಖಚಿತ ಒಪ್ಪಂದ ಆಗಿಲ್ಲ ಎಂದು ಫಾಕ್ಸ್ ಕಾನ್ನ್ ಕಂಪನಿಯ ವಕ್ತಾರರು ಹೇಳಿರುವದಾಗಿ ವರದಿಯಾಗಿದೆ.

ಒಂದು ಲಕ್ಷ ಉದ್ಯೋಗಗಳೋ, ನಂಬಿಸುವ ಉದ್ಯೋಗವೋ
(ಸತೀಶ ಆಚಾರ್ಯ, ಫೇಸ್‍ ಬುಕ್)

ಚುನಾವಣೆ ಸಮೀಪಿಸುತ್ತಿರುವಂತೆ ಇಂತಹ ‘ನಂಬಿಸುವ’ ಪ್ರಕ್ರಿಯೆ ಇದರೊಂದಿಗೆ ಮತ್ತೊಮ್ಮೆ ಆರಂಭವಾಗಿದೆಯೇ?

ಗಮನಾರ್ಹ ಸಂಗತಿಯೆಂದರೆ, ಕರ್ನಾಟಕ ಸರಕಾರ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಸಿರುವುದು ಕೂಡ ಆಪಲ್‍ ಮತ್ತು ಫಾಕ್ಸ್ ಕಾನ್ನ್ ಗಾಗಿಯೇ ಎಂದೂ ವರದಿಯಾಗಿದೆ.

***

ಈ ನಡುವೆ  ಮಾರ್ಚ್ 12 ರ ಒಂದೇ ದಿನದಲ್ಲಿ ಪ್ರಧಾನಿಗಳು 10236 ಕೋಟಿ ರೂ.ಗಳ ಆರು ಉದ್ಘಾಟನೆಗಳನ್ನು ಮತ್ತು ರೂ. 5737 ಕೋಟಿ ರೂ.ಗಳ ಐದು ಶಂಕುಸ್ಥಾಪನೆಗಳನ್ನು ಮಾಡಿದ್ದಾರೆ.. ಅವರು ಅಭಿವೃದ್ಧಿಯ ಜಪ ಮಾಡಿದರು ಎಂದು ಪತ್ರಿಕೆಗಳು ವರದಿ ಮಾಡಿವೆ, ಗೃಹಮಂತ್ರಿಗಳಂತೆ ಭ್ರಷ್ಟಾಚಾರದ  ಬಗ್ಗೆ ಮಾತಾಡಲಿಲ್ಲ, ತಮ್ಮ ಪಕ್ಷದ ಶಾಸಕರ ಇತ್ತೀಚಿನ ‘ಸಾಹಸ’ದ ಬಗೆಯಂತೂ….. ಅದನ್ನು ನಿಭಾಯಿಸಲು ಬಹುಶಃ ಗೃಹಮಂತ್ರಿಗಳಿಗೇ ಬಿಟ್ಟಿದ್ದಾರೆ………

(ಪಿ.ಮಹಮ್ಮದ್, ವಾರ್ತಾಭಾರತಿ)

ಅಥವ ಮುಂದಿನ ಕರ್ನಾಟಕ ಭೇಟಿಗಳಿಗೆ, ಈ ವ್ಯಂಗ್ಯಚಿತ್ರ ಹೇಳುವಂತೆ, ಜನ ಎಲ್ಲ ಮರೆತು ಆನಂದತುಂದಿಲರಾಗುವಂತೆ ಮಾಡಲು ಉಳಿಸಿಕೊಂಡಿರಬಹುದು…

ಕೊನೆಯದಾಗಿ, ಈ ವಾರ ರಾಜ್ಯವನ್ನು ತಬ್ಬಿಬ್ಬು ಮಾಡಿದ ಸುದ್ದಿ – ಆಳುವ ಪಕ್ಷದ ಕೋಲಾರ ಸಂಸದ ಅಂತರ‍್ರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯೊಬ್ಬರನ್ನು ಹಣೆಗೆ ಬೊಟ್ಟು ಇಟ್ಟಿಲ್ಲ ಎಂದು ತರಾಟೆಗೆ ತಗೊಂಡು ‘ಸಂಸ್ಕೃತಿ’ ರಕ್ಷಕನಾದದ್ದು:

 

(ಪಿ.ಮಹಮ್ಮದ್, ವಾರ್ತಾಭಾರತಿ)

ಅಂತಿಮವಾಗಿ,  ಮುಂಬರುವ ಚುನಾವಣಾ ಪ್ರಚಾರದ ನಿಜ ಅಜೆಂಡಾ ಏನಿರುತ್ತದೆ ಎಂಬ ಬಗ್ಗೆ ಇದೇ ಸೂಚನೆ ಕೊಡುತ್ತಿದೆಯೇ ಎಂದು ರಾಜಕೀಯ ವಿಶ್ಲೇಷಕರು ಅನುಮಾನ ಪಡುತ್ತಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *