ಚಿಕ್ಕಮಗಳೂರು: ಅಂಗನವಾಡಿ ಕಾರ್ಯಕರ್ತೆಯನ್ನು ಗ್ರಾಮದಿಂದ ಬಹಿಷ್ಕಾರಿಸಿದ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಯರಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಕಳೆದ ಒಂದುವರೆ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡತ್ತಿರುವ ತೇಜಸ್ವಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು.
ಇಂತಹ ಸಂದರ್ಭದಲ್ಲಿ ಯರಹಳ್ಳಿ ಗ್ರಾಮದಲ್ಲಿ ಮೇಘನಾ ಎಂಬ ಬಾಲಕಿಗೆ ಬಾಲ್ಯ ವಿವಾಹ ನಡೆದು, ಈಗೆ ಬಾಲಘರ್ಬಿಣಿಯಾದ ಸುದ್ದಿಯನ್ನು ಮಕ್ಕಳ ಸಹಾಯವಾಣಿಗೆ ಅಪರಿಚಿತರೊಬ್ಬರು ನೀಡಿದರು. ಚಿಕ್ಕಮಗಳೂರು
ಈ ಪ್ರಕರಣದ ಕುರಿತು ತನಿಖೆ ನಡೆಸಲು ಸಾಂತ್ವಾನ ಕೇಂದ್ರದಿಂದ ಬಂದ ಅಧಿಕಾರಿಗಳು ಸ್ಥಳೀಯವಾಗಿರುವ ಅಂಗನವಾಡಿ ಕಾರ್ಯಕರ್ತೆಯಾದ ತೇಜಸ್ವಿನಿಯನ್ನು ಜೊತೆಗೆ ಕರೆದುಕೊಂಡು ಹೋದರು. ಚಿಕ್ಕಮಗಳೂರು
ಇದನ್ನೂ ಓದಿ: ಚರಿತ್ರೆ-ವರ್ತಮಾನದ ತಾಕಲಾಟಗಳ ನಡುವೆ – ಭಾಗ 1
ಈ ವಿಷಯ ಗ್ರಾಮಸ್ಥರಿಗೆ ತಿಳಿದು ಅಂಗನವಾಡಿ ಕಾರ್ಯಕರ್ತೆ ತೇಜಸ್ವಿನಿಯೇ ಇದಕ್ಕೆಲ್ಲಾ ಕಾರಣ ಎಂದು ಭಾವಿಸಿ ಆಕೆಯನ್ನು ಮತ್ತು ಆಕೆಯ ಕುಂಟುಂಬವನ್ನು ಗ್ರಾಮದಿಂದ ಬಹಿಷ್ಕರಿಸಿ, ಈ ಕುಟುಂಬದವರೊಂದಿಗೆ ಯಾರಾದರೂ ಮಾತನಾಡಿದರೆ ಅವರಿಗೆ 50 ಸಾವಿರ ರೂಗಳನ್ನು ದಂಡ ವಿದಿಸುವುದಾಗಿ ಘೋಷಿಸಿದರು.
ತೆಲುಗು ಗೌಡ ಸಮುದಾಯಕ್ಕೆ ಸೇರಿದ ಬುಹುಸಂಖ್ಯಾತರಿರುವ ಈ ಗ್ರಾಮದಲ್ಲಿ ಪ್ರತಿಯೊಂದನ್ನು ನಿರ್ಧರಿಸುವುದು ಊರಿನ ಮುಖಂಡರು. ಇಲ್ಲಿ ಯಾವ ಕಾನೂನಿಗೂ ಬೆಲೆಯಿಲ್ಲ, ಇಂದರ್ಥದಲ್ಲಿ ಹೇಳಬೇಕೆಂದರೆ ಪ್ರಜಾಪ್ರಭುತ್ವದಲ್ಲೂ ಪಾಳೇಗಾರಿ ವ್ಯವಸ್ಥೆ ಜೀವಂತವಾಗಿದೆ. ಚಿಕ್ಕಮಗಳೂರು
ಇಷ್ಟಾದ ಮೇಲೆ ಒಂದು ಕುಟುಂಬದವರು ಇವರನ್ನ ಮಾತನಾಡಿಸಿದಕ್ಕೆ ತೆಜಶ್ವಿನಿ ಅವರ ಕುಟುಂಬದಿಂದಲೇ ಗ್ರಾಮಸ್ಥರು ಐವತ್ತು ಸಾವಿರ ರೂ ದಂಡ ಕಟ್ಟಿಸಿದ್ದಾರೆ. ಇಷ್ಟು ಸಾಲದೆಂಬಂತೆ ಕುಡಿಯುವ ನೀರಿನ ವಿಚಾರವಾಗಿ ನಡೆದ ಚಿಕ್ಕ ಜಗಳಕ್ಕೆ ಒಂದು ಲಕ್ಷ ರೂ ದಂಡ ಕಟ್ಟಿಸಿದ್ದಾರೆ. ಆಕೆ ಹೊಸದಾಗಿ ಅಂಗನವಾಡಿ ಹುದ್ದೆಗೆ ಸೇರ್ಪಡೆಯಾಗುವಾಗ ಗ್ರಾಮಕ್ಕೆ ಮೂರುವರೆ ಲಕ್ಷ ರೂಗಳನ್ನು ಕುಟುಂಬದಿಂದ ದೇಣಿಗೆ ರೂಪದಲ್ಲಿ ತೆಗೆದುಕೊಂಡಿದ್ದಾರೆ.
ಇದರಿಂದ ಬೇಸತ್ತ ಕುಟುಂಬ ಕಡೂರು ತಾಲೂಕಿನ ಪೋಲೀಸ್ ಠಾಣೆಗೆ ಮತ್ತು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ದೂರು ಸಲ್ಲಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಲು ಮುಂದಾಗದಿದ್ದಾಗ, ಬೆಸತ್ತ ಕುಟುಂಬ ಮಾಧ್ಯಮಗಳ ಮೂಲಕ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ಸುದ್ದಿ ತಿಳಿದ ತಕ್ಷಣವೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಪೊಲೀಸರ ನೆತೃತ್ವದಲ್ಲಿ ಯರಹಳ್ಳಿ ಗ್ರಾಮಸ್ಥರನ್ನ ಸೇರಿಸಿ ಒಂದು ಶಾಂತಿ ಸಭೆ ನೆಡೆಸುತ್ತಾರೆ. ಆ ಸಭೆ ಮುಗಿದ ಕೂಡಲೇ ಗ್ರಾಮಸ್ಥರು ಮತ್ತೊಂದು ತಿರ್ಮಾನಕ್ಕೆ ಬಂದು, ತೆಜಶ್ವಿನಿಯವರನ್ನಷ್ಟೇ ಅಂಗನವಾಡಿ ಕರ್ತವ್ಯದ ಸಮದಲ್ಲಿ ಮಾತನಾಡಿಸಬಹುದು ಆಕೆಯ ಕುಟುಂಬಸ್ಥರನ್ನ ಯಾವುದೆ ಕಾರಣಕ್ಕೂ ಮಾತನಾಡಿಸುವಹಾಗಿಲ್ಲಾ. ಕೆಲಸದ ಸಮಯಮುಗಿದ ಮೇಲೆ ಈಕೆಯನ್ನು ಯಾರು ಮಾತನಾಡಿಸುವಹಾಗಿಲ್ಲಾ ಎಂದು ಘೋಷಿಸುತ್ತಾರೆ.
ಈ ಬಹಿಷ್ಕಾರ ತೆಜಶ್ವಿನಿ ಕುಟುಂಬವನ್ನ ತುಂಬಾ ಸಂಕಷ್ಟಕ್ಕೆ ಸಿಲುಕಿಸಿದೆ ಮಾತ್ರವಲ್ಲದೆ ಪ್ರಾಣಬೆದರಿಕೆಯನ್ನು ಎದುರಿಸಿದ್ದಾರೆ. “ಕಡೂರು ತಾಲೂಕಿನಲ್ಲಿ ಎಐಟಿಯುಸಿ ಮತ್ತು ಬಿಎಂಎಸ್ ನೇತೃತ್ವದಲ್ಲಿ ಎರಡು ಅಂಗನವಾಡಿ ನೌಕರರ ಸಂಘಟನೆಗಳು ಕೆಲಸ ನಿರ್ವಹಿಸುತ್ತಿದ್ದರೂ ನನಗೆ ಇಂತಹ ಸಮಸ್ಯೆಗಳಾದಾಗ ಯಾರೊಬ್ಬರೂ ನೆರವಿಗೆ ಬರಲಿಲ್ಲ ಹಾಗು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕೂಡ ನ್ಯಾಯಕೊಡಿಸಲಿಲ್ಲ. ಇವರೆಲ್ಲಾ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಂಡು ಅಸಹಾಯಕರನ್ನು ಶೋಷಿಸುತ್ತಿದ್ದಾರೆ” ಎಂದು ಅಂಗನವಾಡಿ ಕಾರ್ಯರ್ತೆ ತೇಜಸ್ವಿನಿ ತಮ್ಮ ಅಳಲನ್ನು ತೋಡಿಕೊಂಡರು.
ಈ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ನೊಂದ ಅಂಗನವಾಡಿ ಕಾರ್ಯಕರ್ತೆಗೆ ಧೈರ್ಯ ನೀಡುವ ಸಲುವಾಗಿ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಸನ ಜಿಲ್ಲಾ ಮುಖಂಡರುಗಳ ನಿಯೋಗ ಯರಹಳ್ಳಿಗೆ ಭೇಟಿ ನೀಡಿ, ಈ ಘಟನೆಯನ್ನು ಖಂಡಿಸಿ, ಅನ್ಯಾಯಕ್ಕೊಳಗಾದ ಅಂಗನವಾಡಿ ಕಾರ್ಯಕರ್ತೆಗೆ ಸೂಕ್ತ ನ್ಯಾಯ ಸಿಗಬೇಕು ಇದಕ್ಕಾಗಿ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು ಮತ್ತು ತೇಜಸ್ವಿನಿ ಮತ್ತು ಆಕೆಯ ಕುಟುಂಬವನ್ನು ಬಹಿಷ್ಕರಿಸಿದ ಗ್ರಾಮಸ್ಥರ ಮೇಲೆ ದೂರ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಿಯೋಗದ ನೇತೃತ್ವವನ್ನು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಹಾಸನ ಜಿಲ್ಲಾ ಖಜಾಂಚಿಯಾದ್ದ ಜಿ.ಪಿ.ಶೈಲಜಾ ವಹಿಸಿದ್ದರು ನಿಯೋಗದಲ್ಲಿ ಮುಖಂಡರುಗಳಾದ ಸಂಗೀತ, ಜರೀನ, ಗೀತಾ, ಮೋಹನ್ ಕುಮಾರಿ ಮತ್ತಿತರರು ಇದ್ದರು.
ಇದನ್ನೂ ನೋಡಿ: ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ! ಹೂತಿಟ್ಟ ಸತ್ಯ ಹೊರ ಬರಲಿ!! Janashakthi Media
