ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಕೇರಳದಲ್ಲಿ ಮಗುವೊಂದು ಮನವಿ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಬಾಲಕನ ಈ ಮಾತನ್ನು ಕೇರಳ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಊಟದ ಮೆನ್ಯೂಗೆ ತಯಾರಿ ನಡೆಸಿದೆ. ಬಿರಿಯಾನಿ
ಸಿಪಿಐ(ಎಂ) ನೇತೃತ್ವದ ಎಡರಂಗ ಸರ್ಕಾರದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ವೀಣಾ ಜಾರ್ಜ್ ಅವರು ಪ್ರತಿಕ್ರಿಯಿಸಿದ್ದು, “ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಗುವಿನ ವಿಡಿಯೋ ಪೋಸ್ಟ್ ಮಾಡಿರುವ ಸಚಿವೆ ವೀಣಾ ಜಾರ್ಜ್, ವಿಡಿಯೋ ಮೂಲಕವೇ ತನ್ನ ಪ್ರತಿಕ್ರಿಯೆ ನೀಡಿದ್ದು, ಅಂಗನವಾಡಿ ಕೇಂದ್ರಗಳ ಆಹಾರದ ಮೆನು ಪರಿಷ್ಕರಿಸುವ ಬಗ್ಗೆ ಯೋಚಿಸುತ್ತೇವೆ ಎಂದಿದ್ದಾರೆ.
ಇಡುಕ್ಕಿ ಜಿಲ್ಲೆಯ ದೇವಿಕುಳಂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ -1ರ ರಿಜುಲ್ ಎಸ್ ಸುಂದರ್ ಎಂಬ ಬಾಲಕ ವಿಡಿಯೋ ಮೂಲಕ ಮನವಿ ಮಾಡಿದ್ದ. ‘ಶಂಕು’ ಎಂದು ಅಕ್ಕರೆಯಿಂದ ಕರೆಯಲ್ಪಡುವ ಮಗು ಎಸ್ ಸುಂದರ್ ನಿಶ್ಕಲ್ಮಶವಾಗಿ ತನ್ನ ಆಸೆಯನ್ನು ವ್ಯಕ್ತಪಡಿಸಿದೆ. ಮಗುವಿನ ತಾಯಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಬಿರಿಯಾನಿ
ಇದನ್ನೂ ನೋಡಿ : ಕಟ್ಟಡ ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಾವತಿಸಿ: ಹೈಕೋರ್ಟ್ ಮಹತ್ವದ ತೀರ್ಪು
ಶಂಕುವಿನ ಮನವಿಯನ್ನು ನಾವು ಪರಿಗಣಿಸಿದ್ದೇವೆ. ಅಂಗನವಾಡಿಗಳಲ್ಲಿ ನೀಡಲಾಗುವ ಆಹಾರದ ಮೆನು ಪರಿಷ್ಕರಿಸುವ ಬಗ್ಗೆ ನಾವು ಯೋಚಿಸುತ್ತೇವೆ. ಈಗಾಗಲೇ ಮೊಟ್ಟೆ, ಹಾಲು ನೀಡಲಾಗುತ್ತಿದೆ. ಅದರ ಜೊತೆಗೆ ಹೊಸತನ್ನು ಹೇಗೆ ಸೇರಿಸಬಹುದು ಎಂದು ನಾವು ಯೋಚನೆ ಮಾಡುತ್ತೇವೆ ಸಚಿವೆ ತಿಳಿಸಿದ್ದಾರೆ.
ಇಷ್ಟಕ್ಕೂ ವಿಡಿಯೋದಲ್ಲೇನಿದೆ?
ವೈರಲ್ ವಿಡಿಯೋದಲ್ಲಿ, ಕ್ಯಾಪ್ ಧರಿಸಿರುವ ಶಂಕು, “ನನಗೆ ಅಂಗನವಾಡಿಯಲ್ಲಿ ಉಪ್ಮಾ ಬದಲಿಗೆ ಬಿರಿಯಾನಿ ಮತ್ತು ‘ಪೊರಿಚಾ ಕೋಜಿ’ (ಚಿಕನ್ ಫ್ರೈ) ಬೇಕು” ಎಂದು ಹೇಳುತ್ತಿದ್ದಾನೆ. ಈ ಬಾಲಕನ ವಿನಂತಿ ಸರ್ಕಾರ ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ.
ವಿಡಿಯೋ ನೋಡಿ : ‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’ ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ