ಬೆಳಗಾವಿ | ಇಬ್ಬರೂ ಪರಿಶಿಷ್ಟ ಯುವಕರನ್ನೂ ಮರಕ್ಕೆ ಕಟ್ಟಿ ಥಳಿತ

 ಬೆಳಗಾವಿ : ರಾಮದುರ್ಗ ತಾಲ್ಲೂಕಿನ  ಗೊಡಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ   ಈರಣ್ಣ ವಿಠ್ಠಲ ನಾಯ್ಕರ ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ ಇಬ್ಬರು ಯುವಕರನ್ನೂ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆ ನಡೆದಿದೆ. ಒಬ್ಬನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಹಲ್ಲೆಗೊಳಗಾದ ಎಸ್‌ಟಿ ಸಮಾಜದವರು ಪರಸ್ಪರ ದೂರು ದಾಖಲಿಸಿದ್ದಾರೆ. ಬೆಳಗಾವಿ

ಆಗಸ್ಟ್‌ 5ರಂದು ಹಲ್ಲೆ ನಡೆದಿದ್ದು, ಆ.11ರಂದು ದೂರು ದಾಖಲಿಸಲಾಗಿದೆ. ಲಿಂಗಾಯತ ಸಮಾಜದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ, ಪ್ರದೀಪ ಈರಣ್ಣ ಪಾಕನಟ್ಟಿ, ಮಹಾಂತೇಶ ಲಕ್ಷ್ಮಣ ಪಾಕನಟ್ಟಿ, ಸಚಿನ್‌ ದಾನಪ್ಪ ಪಾಕನಟ್ಟಿ, ನಿಂಗರಾಜ ಈರಪ್ಪ ಪಾಕನಟ್ಟಿ, ಸಂಗಪ್ಪ ನಿಂಗಪ್ಪ ಪಾಕನಟ್ಟಿ ಅವರ ವಿರುದ್ಧ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ದೂರು ದಾಖಲಿಸಲಾಗಿದೆ. ಬೆಳಗಾವಿ

ಇದನ್ನೂ ಓದಿ : ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ 

‘ಆರೋಪಿಗಳು ಹಾಗೂ ನಮ್ಮ ಜಮೀನು ಅಕ್ಕಪಕ್ಕದಲ್ಲಿವೆ. ಜಮೀನಿಗೆ ಹೋಗಲು ದಾರಿ ಏಕೆ ಬಿಡುವುದಿಲ್ಲ ಎಂದು ಜಗಳ ತೆಗೆದ ಆರೋಪಿಗಳು ಯುವಕರನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಕುಡಗೋಲು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಕೀಳು ಪದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ’ ಎಂದು ವಿಠ್ಠಲ ಲಕ್ಷ್ಮಣ ನಾಯ್ಕರ ಎನ್ನುವವರು ದೂರು ನೀಡಿದ್ದಾರೆ.

ಇದಕ್ಕೆ ಪ್ರತಿದೂರು ದಾಖಲಿಸಿರುವ ಲಿಂಗಾಯತ ಸಮಾಜದ ವ್ಯಕ್ತಿಯೊಬ್ಬರು, ‘ಈ ಘಟನೆ ಹೊಲಕ್ಕೆ ಸಂಬಂಧಿಸಿಲ್ಲ. ಇಬ್ಬರೂ ಯುವಕರು ನನ್ನ 14 ವರ್ಷದ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಬಾಲಕಿ ಶಾಲೆಗೆ ಹೋಗುವಾಗ- ಬರುವಾಗ ಬೈಕ್‌ ಮೂಲಕ ಬೆನ್ನಟ್ಟಿ ಬರುತ್ತಿದ್ದರು. ಪ್ರೀತಿಸುವಂತೆ ಕಾಡಿಸುತ್ತಿದ್ದರು. ಮೊಬೈಲ್‌ ನಂಬರ್‌ ಕೊಡು, ಇಲ್ಲದಿದ್ದರೆ ಸುಮ್ಮನೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರು ನೀಡಿದ್ದಾರೆ.

‘ಈ ಸಮಾಜದವರು ನಮ್ಮೊಂದಿಗೆ ಚೆನ್ನಾಗಿದ್ದಾರೆ. ಅಕ್ಕ, ತಾಯಿ ಎಂದು ಮಾತನಾಡಿಸುತ್ತಾರೆ. ದಶಕಗಳಿಂದಲೂ ಅವರ ಹೊಲದಲ್ಲಿ ಕೆಲಸ ಮಾಡುತ್ತಿದ್ದೇವೆ. ಯಾವತ್ತೂ ಕೀಳಾಗಿ ಕಂಡಿಲ್ಲ. ಅಂಥವರ ಮನೆಗೆ ನೀನೇಕೆ ಇಂಥ ಕೆಟ್ಟ ಕೆಲಸ ಮಾಡಿದೆ. ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ. ಅರ್ಥ ಮಾಡಿಕೊ’ ಎಂಬ ಮಾತುಗಳೂ ಕೇಳಿಸುತ್ತವೆ. ಕಟಕೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ನೋಡಿ :  ಮೋಸ ಮಾಡಿದ ಸರ್ಕಾರ | ಆಗಸ್ಟ್ 5ರಿಂದ ಸಾರಿಗೆ ನೌಕರರ ಮುಷ್ಕರ Janashakthi Media

 ಬೆಳಗಾವಿ
Donate Janashakthi Media

Leave a Reply

Your email address will not be published. Required fields are marked *