ಬೊಮ್ಮಾಯಿ ಸರಕಾರದ ಅವಧಿ ಅತ್ಯಲ್ಪ ಮಾತ್ರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರುಈಗಿನ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಸರ್ಕಾರ ಅವಧಿ ಪೂರ್ಣಗೊಳಿಸುವುದು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿವೆ. ಯಾವ ಸಮಯದಲ್ಲಾದರೂ ಬೇಕಾದರೂ ಬೀಳಬಹುದು. ಒಂದೆಡೆ ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಯತ್ನಾಳ್, ಯೋಗಿಶ್ವರ್, ಬೆಲ್ಲದ್, ರಾಮದಾಸ್ ದೆಹಲಿ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ರಾಜ್ಯದ ಬಿಜೆಪಿಯಲ್ಲಿ ಗೊಂದಲಗಳು ಬಹಳಷ್ಟು ಇವೆ. ಈ ಸರ್ಕಾರ ಬಹಳ ದಿನ ಬಾಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ನಾಳೆ 75ನೇ ಸ್ವಾತಂತ್ರ್ಸೋತ್ವದದ ಆಚರಣೆ ಮಾಡುತ್ತಿದ್ದೇವೆ.  ಈ ಬಾರಿ ಅಮೃತ ಮಹೋತ್ಸವದ ವರ್ಷವಾಗಿದೆ. ಇಂದು ನಾವೆಲ್ಲರು ಸ್ವತಂತ್ರದ ಫಲಾನುಭಾವಿಗಳು ಆಗಿದ್ದೀವಿ. ಬ್ರಿಟಿಷ್‌ ರಿಂದ ಸ್ವತಂತ್ರ ಕೊಡಿಸಲು ಅನೇಕರು ಹೋರಾಟ ಮಾಡಿದ್ದಾರೆ. ಗಾಂಧಿ, ಬೋಸ್ , ಮೌಲಾನ ಆಜಾದ್, ಚಂದ್ರಶೇಖರ ಸೇರಿದಂತೆ ಲಕ್ಷಾಂತರ ಜನರು ಹೋರಾಟ ಮಾಡಿ ಸ್ವಾತಂತ್ರ್ಯ ಕೊಡಿಸಿದ್ದಾರೆ. ಎಲ್ಲಾ ಜನಾಂಗದವರು, ಎಲ್ಲಾ ಧರ್ಮದವರು ಸೇರಿ ಸ್ವಾತಂತ್ರ್ಯ ತಂದುಕೊಟ್ಟವರು. ಹೋರಾಟ ನಡೆಸಿದ ಎಲ್ಲರಿಗೂ ನನ್ನ ನಮನಗಳು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಯಾರೂ ಕೂಡ ಯಾವುದೇ ಆಸೆ ಇಟ್ಕೊಂಡಿರಲಿಲ್ಲ. ಯಾವುದೇ ಅಧಿಕಾರ ಆಸೆಗಳನ್ನು ಇಟ್ಟುಕೊಂಡು ಹೋರಾಟ ಮಾಡಿದವರಲ್ಲ. ಎಲ್ಲಾ ನಿಸ್ವಾರ್ಥ ಮನೋಭಾವದಿಂದ ಹೋರಾಟ ಮಾಡಿ ಸ್ವತಂತ್ರ ಕೊಡಿಸಿದ್ದಾರೆ ಎಂದರು.

ಇದನ್ನು ಓದಿ: ಮೇಕೆದಾಟು ಯೋಜನೆ ಬಗ್ಗೆ ಬಿಜೆಪಿಯಲ್ಲಿ ದ್ವಂದ್ವನೀತಿ: ಸಿದ್ದರಾಮಯ್ಯ ಆಕ್ರೋಶ

ಕೊರೋನಾ ಮೂರನೇ ಅಲೆ ಪರಿಸ್ಥಿತಿಯ ಬಗ್ಗೆಯೂ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕೊಡುಗು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಕೇರಳದಲ್ಲಿಯೂ ಕೋವಿಡ್‌ ಪ್ರಕರಣಗಳ ಸಂಖ್ಯೆಯ ಪ್ರಮಾಣ ಹೆಚ್ಚಾಗುತ್ತಿದೆ. ಮೂರನೇ ಅಲೆ ಬಾರದ ರೀತಿಯಲ್ಲಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ವಾರಾಂತ್ಯದ ಲಾಕ್‌ಡೌನ್‌ ಜಾರಿ ಮಾಡದರೆ ಸಾಲದು, ಬಿಗಿಯಾದ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಬೇಕು. ಜನರಲ್ಲಿ ನಿರಂತರವಾಗಿ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ. ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ರಾಜ್ಯದಲ್ಲಿ ಲಸಿಕೆಗಳ ಕೊರತೆ ಹೆಚ್ಚಾಗುತ್ತಿದೆ. ಲಸಿಕೆಯನ್ನು ನೀಡುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ, ಮುಖ್ಯಮಂತ್ರಿ ಬೊಮ್ಮಾಯಿ ಬರಿ ಸಭೆಗಳನ್ನು ಸೇರಿದರೆ ಸಾಲದು, ಜನರಿಗೆ ಲಸಿಕೆ ಕೊಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಇದನ್ನು ಓದಿ: ಗಣೇಶ ಚತುರ್ಥಿ, ಮೊಹರಂ ಸರಳ ಆಚರಣೆಗೆ ಮಾರ್ಗಸೂಚಿ ಪ್ರಕಟ

ಶಾಲಾ, ಕಾಲೇಜುಗಳು ಆರಂಭಿಸುವಿಕೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಶಾಲೆಗಳನ್ನು ಒಪನ್ ಮಾಡಬಾರದು ಅಂತ ಅಲ್ಲ. ಈಗ ಕೊರೋನಾ ನಿಯಂತ್ರಣ ಬರದಿದ್ರೆ ಶಾಲೆ ತೆರೆಯುವುದು ಬೇಡ. ಕೊರೋನಾ ಕಡಿಮೆ ಆದ್ರೆ ಶಾಲೆ ಓಪನ್ ಮಾಡಿ. ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡಬೇಡಿ. ಹಬ್ಬ- ಜಾತ್ರೆಗಳನ್ನ ಒಂದು ವರ್ಷ ಮಾಡದಿದ್ರೆ ಏನು ಸಮಸ್ಯೆ ಆಗಲ್ಲ. ಈ ಬಾರಿ ಮನೆಯಲ್ಲಿ ಗಣಪತಿ ಕೂರಿಸಿ. ಮನೆ ಗಣಪತಿ ಹಬ್ಬ ಆಚರಿಸಿ ಎಂದು ಸಲಹೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *