ಮಾನಹಾನಿ ಪ್ರಕರಣ ರದ್ದುಪಡಿಸಲು ಕೋರಿ ಬಾಂಬೆ ಹೈಕೋರ್ಟ್‌ಗೆ ರಾಹಲ್‌ ಗಾಂಧಿ ಮೊರೆ

ನವದೆಹಲಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿದೆ ಎಂದು ಆರೋಪಿಸಿ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ  ದಾಖಲಾಗಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ ಎಂದು ವರದಿಯಾಗಿದೆ. ಬಾಂಬೆ

ಫೆಬ್ರವರಿ 2019ರಲ್ಲಿ ಮಹಾರಾಷ್ಟ್ರ ಮೂಲದ ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ವಕೀಲ ಧೃತಿಮಾನ್ ಜೋಶಿ ಅವರು ರಾಹುಲ್ ಗಾಂಧಿ ಮತ್ತು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಸಂಸತ್‌ ಹೊರಗೆ 2017ರ ಸೆಪ್ಟೆಂಬರ್‌ನಲ್ಲಿ ರಾಹುಲ್‌ ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡುವಾಗ ರಾಹುಲ್‌ ಗಾಂಧಿ ಈ ಹೇಳಿಕೆ ನೀಡಿದ್ದಾರೆ ಎಂದು ದೂರುದಾರ ವಕೀಲ ಹೇಳಿದ್ದಾರೆ.ಹಾಗೂ ಸೀತಾರಾಂ ಯೆಚುರಿ ಅವರು ಇಂಥದ್ದೇ ಹೇಳಿಕೆಯನ್ನು ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ಸಂಬಂಧ ಹಿನ್ನಲೆ ದಿಲ್ಲಿಯ ಅಧಿಕೃತ ನಿವಾಸ ಖಾಲಿ ಮಾಡಿದ ರಾಹುಲ್‌ ಗಾಂಧಿ

ನ್ಯಾಯಾಲಯ ರಾಹುಲ್ ಗಾಂಧಿ ಮತ್ತು ಸೀತಾರಾಂ ಯೆಚೂರಿ, ಇಬ್ಬರ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ಮಾಡಲು ಮುಂದಾಗಿದೆ. ಇದರ ವಿರುದ್ದವೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ರಾಹುಲ್ ಗಾಂಧಿ, ಇಬ್ಬರ ಹೇಳಿಕೆ, ಪಕ್ಷ, ಸಿದ್ದಾಂತ ಎಲ್ಲವೂ ವಿಭಿನ್ನವಾಗಿದೆ. ಹಾಗಾಗಿ, ಎರಡೂ ಪ್ರಕರಣಗಳನ್ನು ಒಟ್ಟಿಗೆ ಸೇರಿಸಬೇಡಿ ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಸೋನಿಯಾ ಗಾಂಧಿ ವಿರುದ್ದವೂ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಆದರೆ, 2019ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ  ಅದನ್ನು ವಜಾ ಮಾಡಿತ್ತು. ರಾಹುಲ್ ಗಾಂಧಿ ಮತ್ತು ಸೀತಾರಾಂ ಯೆಚೂರಿಗೆ ನೋಟಿಸ್ ಜಾರಿಗೊಳಿಸಿತ್ತು. ಈ ಸಂಬಂಧ ಜಂಟಿ ವಿಚಾರಣೆ ಎಂಬುವುದನ್ನು ಮುಂದಿಟ್ಟುಕೊಂಡು ಪ್ರಕರಣ ರದ್ದುಪಡಿಸುವಂತೆ ರಾಹುಲ್ ಗಾಂಧಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಮುಂಬೈನ ಬೊರಿವಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ರಾಹುಲ್ ಗಾಂಧಿಯ ಅರ್ಜಿಯನ್ನು ತಳ್ಳಿಹಾಕಿತ್ತು.

ವಿಡಿಯೋ ನೋಡಿ: ವೃತ್ತಿ ರಂಗಭೂಮಿ ಉಳಿಯಬೇಕು, ಕಲಾವಿದರ ಗೋಳನ್ನು ಸರ್ಕಾರ ಕೇಳಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *