ಬೊಲಿವಿಯ: ಲಿಥೀಯಂ ಗಾಗಿ ಮತ್ತೊಂದು ಮಿಲಿಟರಿ ದಂಗೆ ವಿಫಲ

-ವಸಂತರಾಜ ಎನ್.ಕೆ

ಬೊಲಿವಿಯಾದ ಜನರು ಮಿಲಿಟರಿ ದಂಗೆಯನ್ನು ಯಶಸ್ವಿಯಾಗಿ  ಸೋಲಿಸಿದ್ದಾರೆ!  ಅಧ್ಯಕ್ಷ  ಲೂಯಿಸ್  ಆರ್ಸ್  ಅವರ  ಪ್ರಜಾಪ್ರಭುತ್ವ  ಸರ್ಕಾರವನ್ನು ರಕ್ಷಿಸಲು ಜನರ ಚಳುವಳಿಗಳು ಸಜ್ಜುಗೊಂಡವು.  ಇವೊ ಮೊರೇಲ್ಸ್  ಅವರನ್ನು ಅಧ್ಯಕ್ಷ ಪದವಿಯಿಂದ ಹೊರಹಾಕಿದ್ದ  ದಂಗೆಯ  ಕೇವಲ ಐದು ವರ್ಷಗಳ ನಂತರ ಇದು ನಡೆದಿದೆ. ದಂಗೆ-ವಿರೋಧಿ ಪ್ರತಿಭಟನೆಗಳಿಗೆ  ಒಂದು  ವರ್ಷದ  ಪ್ರತಿರೋಧ  ಮತ್ತು  ಹಿಂಸಾತ್ಮಕ  ದಮನದ  ನಂತರ,  ಬೊಲಿವಿಯನ್  ಜನರು  ಪ್ರಜಾ ಪ್ರಭುತ್ವವನ್ನು ಪುನಃಸ್ಥಾಪಿಸಿದ್ದರು ಮತ್ತು ಲೂಯಿಸ್ ಆರ್ಸ್ ಅವರನ್ನು ಆಯ್ಕೆ ಮಾಡಿದ್ದರು ಎಂದು ನೆನಪಿಸಿಕೊಳ್ಳಬಹುದು. ಲಿಥಿಯಂ ಉತ್ಪಾದಿಸಲು ಚೀನಾ ಮತ್ತು ರಷ್ಯಾ ಗಳ ಜತೆ ಬೊಲಿವಿಯಾ ಮಾಡಿಕೊಂಡಿರುವ ಒಪ್ಪಂದಗಳು ದಂಗೆಯ  ಪ್ರಯತ್ನಗಳಿಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಲಿಥೀಯಂ

ಬೊಲಿವಿಯನ್ ಅಧ್ಯಕ್ಷ ಲೂಯಿಸ್ ಆರ್ಸ್ ಬುಧವಾರ ಜೂನ್ 26 ರ ಮಧ್ಯಾಹ್ನ ಬೊಲಿವಿಯಾದ ಜನರನ್ನು ಉದ್ದೇಶಿಸಿ ಮಿಲಿಟರಿ ದಂಗೆಯ ಪ್ರಯತ್ನವನ್ನು ಸಲಿಸಲಾಗಿದೆ ಎಂದು ಘೋಷಿಸಿದರು. ಲಿಥೀಯಂ

ಜೂನ್ 26 ರ ಮಧ್ಯಾಹ್ನ, ರಾಜಧಾನಿ ಲಾ ಪಾಜ್ ನ ಮಧ್ಯಭಾಗದಲ್ಲಿ ಜನರಲ್ ಜುವಾನ್ ಜುನಿಗಾ ಅವರ ಆದೇಶದ ಮೇರೆಗೆ ನೂರಾರು ಮಿಲಿಟರಿ ಸಿಬ್ಬಂದಿ ಸಜ್ಜುಗೊಂಡರು ಮತ್ತು ಮಂತ್ರಿ ಸಭೆಯ ಮೊದಲು ಕ್ವೆಮಾಡೊ ಅರಮನೆಯನ್ನು (ಸರಕಾರಿ ಅಧ್ಯಕ್ಷೀಯ ಬಂಗಲೆ) ಸುತ್ತುವರೆದರು. ಅವರು ಟ್ಯಾಂಕ್ ಗಳಿಂದ ಅರಮನೆಯ ಮುಖ್ಯ ಬಾಗಿಲನ್ನು ಒಡೆದು ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದರು. ಲಿಥೀಯಂ

ಇದನ್ನೂ ಓದಿ: ಮುಸ್ಲಿಮರ ಮೇಲಿನ ಕ್ರೂರ ಕೋಮು ದಾಳಿಗಳು ಹಿನ್ನಡೆಗೆ ಪ್ರತೀಕಾರದ ಬಿಜೆಪಿಯ ಪ್ರಯತ್ನ

2019 ರ ಇವೊ ಮೊರೇಲ್ಸ್ ವಿರುದ್ಧದ ದಂಗೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಜೈಲಿನಲ್ಲಿರುವ ಜೈನೈನ್ ಅನೆಜ್ ಮತ್ತು ಲೂಯಿಸ್ ಫರ್ನಾಂಡೋ ಕ್ಯಾಮಾಚೊ ಸೇರಿದಂತೆ ಬೊಲಿವಿಯಾದ “ರಾಜಕೀಯ ಕೈದಿಗಳನ್ನು” ಬಿಡುಗಡೆ ಮಾಡುತ್ತಾರೆ ಎಂದು ಜನರಲ್ ಜುನಿಗಾ ನಂತರ ಘೋಷಿಸಿದರು. ಲಿಥೀಯಂ

ಬೊಲಿವಿಯಾದ ಮಾಜಿ ಅಧ್ಯಕ್ಷ ಇವೊ ಮೊರೇಲ್ಸ್ ತಕ್ಷಣವೇಈ ಬೆಳವಣಿಗೆಗಳ ಬಗ್ಗೆ ಎಚ್ಚರಿಸಿದರು ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸಜ್ಜುಗೊಳಿಸಲು ಬೊಲಿವಿಯನ್ ಜನರಿಗೆ ಕರೆ ನೀಡಿದರು.  ಸಾಂವಿಧಾನಿಕ ಆದೇಶವನ್ನು ನಾಶಮಾಡುವ ಮಿಲಿಟರಿಯ ಪ್ರಯತ್ನವನ್ನು ತಾನು ತಿರಸ್ಕರಿಸಿದ್ದೇನೆ ಮತ್ತು ಆರ್ಸ್ ಮತ್ತು ಇವೊ ಎಂದು ಹೇಳಿದರು. ಲಿಥೀಯಂ

ಬೊಲಿವಿಯಾದ ವಿದೇಶಾಂಗ ಸಚಿವೆ ಸೆಲಿಂಡಾ ಸೋಸಾ ಅವರು ವೀಡಿಯೊ ಸಂದೇಶದಲ್ಲಿ ಹೀಗೆಂದರು:, “ಬೊಲಿವಿಯಾ ದೇಶದ ಪ್ರಜಾಪ್ರಭುತ್ವ, ಶಾಂತಿ ಮತ್ತು ಭದ್ರತೆಯ ಮೇಲೆ ದಾಳಿ ಮಾಡುವ ಬೊಲಿವಿಯನ್ ಸೈನ್ಯದ ಕೆಲವು ಘಟಕಗಳ ಅನಿಯಮಿತ ಸಜ್ಜುಗೊಳಿಸುವಿಕೆಯನ್ನು ಸರಕಾರ ಖಂಡಿಸುತ್ತದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವುದನ್ನು ಖಚಿತಪಡಿಸಿಕೊಳ್ಳಲು ಬೊಲಿವಿಯನ್ ಜನ ಮತ್ತು  ಅಂತರರಾಷ್ಟ್ರೀಯ ಸಮುದಾಯಕ್ಕೆ ನಾವು ಕರೆ ನೀಡುತ್ತೇವೆ.”

ಸೈನ್ಯವು ಅರಮನೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸಿದಾಗ, ನೂರಾರು ಬೊಲಿವಿಯನ್ ಜನರು ಪ್ರಜಾಪ್ರಭುತ್ವವನ್ನು ಗೌರವಿಸಬೇಕು ಮತ್ತು ಸೈನ್ಯದ ತುಕಡಿಗಳು ಹಿಂತೆಗೆಯಬೇಕು ಎಂದು ಅಣಿನೆರೆಯಲು ಪ್ರಾರಂಭಿಸಿದರು. ಸಾಮೂಹಿಕ ಸಂಘಟನೆಗಳು, ಟ್ರೇಡ್ ಯೂನಿಯನ್ ಗಳು ಮತ್ತು ಸಾಮಾನ್ಯ ಜನರೊಂದಿಗಿನ ಈ ಪ್ರತಿಭಟನೆಗಳು ಮಿಲಿಟರಿ ಪೋಲೀಸ್ ಅಧಿಕಾರಿಗಳಿಂದ ಭಾರೀ ದಬ್ಬಾಳಿಕೆಯನ್ನು ಎದುರಿಸಿದವು, ಅವರು ಅಶ್ರುವಾಯು ಹಾರಿಸಿದರು ಮತ್ತು ಪ್ಲಾಜಾ ಮುರಿಲ್ಲೊಗೆ ಪ್ರವೇಶವನ್ನು ನಿರ್ಬಂಧಿಸಿದರು. ಲಿಥೀಯಂ

ಸರಕಾರದ ಪ್ರಜಾಪ್ರಭುತ್ವಕ್ಕೆ ಅಣಿನೆರೆದ ಜನ ಸಂಘಟನೆಗಳು

20 ಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕರನ್ನು ಪ್ರತಿನಿಧಿಸುವ ಬೊಲಿವಿಯನ್ ವರ್ಕರ್ಸ್ ಸೆಂಟ್ರಲ್’ (COB) ಅನಿರ್ದಿಷ್ಟ ಸಾರ್ವತ್ರಿಕ ಮುಷ್ಕರವನ್ನು ಘೋಷಿಸಿತು ಮತ್ತು “ಸಾಂವಿಧಾನಿಕ ಕ್ರಮವನ್ನು ಹಾಗೂ ಬೊಲಿವಿಯಾದಲ್ಲಿ ನಮ್ಮ ಕಾನೂನುಬದ್ಧವಾಗಿ ಸ್ಥಾಪಿಸಲಾದ ಸರ್ಕಾರವನ್ನು ರಕ್ಷಿಸಲು ಮತ್ತು ಪುನಃಸ್ಥಾಪಿಸಲು ಲಾ ಪಾಜ್ ನಗರಕ್ಕೆ ಎಲ್ಲಾ ಯೂನಿಯನ್ ಮತ್ತು ಸಾಮಾಜಿಕ ಸಂಘಟನೆಗಳ ಸದಸ್ಯರು ಅಣಿ ನೆರೆಯಬೇಕು” ಎಂದು ಕರೆ ನೀಡಿತು. ಲಿಥೀಯಂ

ಅರಮನೆಯ ಮಿಲಿಟರಿ ಸುತ್ತುವರಿದ ಒಂದು ಗಂಟೆಯ ನಂತರ, ಬೊಲಿವಿಯನ್ ಅಧ್ಯಕ್ಷ ಲೂಯಿಸ್ ಆರ್ಸ್ ಅವರು ಜುನಿಗಾ ಬದಲಿಗೆ ಜೋಸ್ ಸ್ಯಾಂಚೆಜ್ ಅವರನ್ನು ಹೊಸ ಮಿಲಿಟರಿ ಕಮಾಂಡರ್ ಎಂದು ಹೆಸರಿಸಲು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಬೊಲಿವಿಯನ್ ಜನರ ಯಾವುದೇ ರಕ್ತಪಾತವನ್ನು ತಪ್ಪಿಸಲು ಕೇಂದ್ರಕ್ಕೆ ಸಜ್ಜುಗೊಂಡ ಮಿಲಿಟರಿ ಸಿಬ್ಬಂದಿಗೆ ತಮ್ಮ ನಿಲ್ದಾಣಗಳಿಗೆ ಮರಳಲು ಸ್ಯಾಂಚೆಜ್ ಆದೇಶಿಸಿದರು ಮತ್ತು ಅವರು ಲೂಯಿಸ್ ಆರ್ಸ್ ಅವರ ಕಾನೂನುಬದ್ಧ ಮತ್ತು ಸಾಂವಿಧಾನಿಕ ಸರ್ಕಾರವನ್ನು ಬೆಂಬಲಿಸುವುದಾಗಿ ದೃಢಪಡಿಸಿದರು. ಲಿಥೀಯಂ

ಅಧ್ಯಕ್ಷ ಆರ್ಸ್ ಅರಮನೆಯಲ್ಲಿ ದಂಗೆಯ ಕಮಾಂಡರ್ ಜುನಿಗಾ ನನ್ನು ಮುಖಾಮುಖಿಯಾಗಿ ಎದುರಿಸುತ್ತಿರುವ ಪ್ರಜಾಪ್ರಭುತ್ವವನ್ನು ಗೌರವಿಸುವಂತೆ ದೃಢವಾಗಿ ಹೇಳುವ ವೀಡಿಯೊ ಕೂಡ ಹೊರಹೊಮ್ಮಿತು.

ಅಧ್ಯಕ್ಷ ಆರ್ಸ್ ಮತ್ತು ಹೊಸ ಮಿಲಿಟರಿ ಮುಖ್ಯಸ್ಥ ಸ್ಯಾಂಚೆಝ್ ಅವರ ಘೋಷಣೆಯ ಸ್ವಲ್ಪ ಸಮಯದ ನಂತರ, ಆರಂಭದಲ್ಲಿ ಪ್ಲಾಜಾವನ್ನು ನಿರ್ಬಂಧಿಸಿದ ಮತ್ತು ಅರಮನೆಯನ್ನು ಸುತ್ತುವರೆದಿರುವ ಟ್ಯಾಂಕ್ ಗಳು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದವು.  ದಂಗೆಯ ಪ್ರಯತ್ನವನ್ನು ತಿರಸ್ಕರಿಸಿ ಅಧ್ಯಕ್ಷ ಆರ್ಸ್ ಗೆ ಬೆಂಬಲವನ್ನು ದೃಢೀಕರಿಸಲು ಸಾವಿರಾರು ಜನರು ಪ್ರದೇಶವನ್ನು ಸುತ್ತುವರೆದರು. “ಆರ್ಸ್ ನೀವು ಒಬ್ಬಂಟಿಯಲ್ಲ! ಪ್ರಜಾಪ್ರಭುತ್ವ ಜಿಂದಾಬಾದ್!” ಎಂದು ಅವರು ಘೋಷಿಸಿದರು.

ಬೊಲಿವಿಯಾದಲ್ಲಿ ದಂಗೆಯ ಪ್ರಯತ್ನವು ಅಂತರರಾಷ್ಟ್ರೀಯ ಪರಿಣಾಮಗಳನ್ನು ಬೀರಿತು. ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ಆದ್ಯಂತ ರಾಜಕೀಯ ನಾಯಕರು ಬೊಲಿವಿಯನ್ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಸೈನ್ಯದ ಒಂದು ಭಾಗದ ಪ್ರಯತ್ನವನ್ನು ತೀವ್ರವಾಗಿ ತಿರಸ್ಕರಿಸಿದರು ಮತ್ತು ಪ್ರಯತ್ನದ ತ್ವರಿತ ಸೋಲನ್ನು ಸಂಭ್ರಮಿಸಿದರು.

ಇವೊ ಮೊರೇಲ್ಸ್ ಅವರನ್ನು ಅಧ್ಯಕ್ಷ ಪದವಿಯಿಂದ ಹೊರಹಾಕಿದ್ದ ದಂಗೆಯ ಕೇವಲ ಐದು ವರ್ಷಗಳ ನಂತರ ಇದು ನಡೆದಿದೆ. ದಂಗೆ-ವಿರೋಧಿ ಪ್ರತಿಭಟನೆಗಳಿಗೆ ಒಂದು ವರ್ಷದ ಪ್ರತಿರೋಧ ಮತ್ತು ಹಿಂಸಾತ್ಮಕ ದಮನದ ನಂತರ, ಬೊಲಿವಿಯನ್ ಜನರು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಿದರು ಮತ್ತು ಲೂಯಿಸ್ ಆರ್ಸ್ ಅವರನ್ನು ಆಯ್ಕೆ ಮಾಡಿದರು ಎಂದು ಹಲವರು ನೆನಪಿಸಿಕೊಂಡರು.

ಹೊಂಡುರಾಸ್ ನ ಅಧ್ಯಕ್ಷರು ಮತ್ತು ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ರಾಜ್ಯಗಳ ಸಮುದಾಯದ (CELAC) ಅಧ್ಯಕ್ಷರಾದ ಕ್ಸಿಯಮಾರಾ ಕ್ಯಾಸ್ಟ್ರೋ “ಬೊಲಿವಿಯಾದಲ್ಲಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುವ ಫ್ಯಾಸಿಸಂ ಅನ್ನು ಖಂಡಿಸಲು ಮತ್ತು ನಾಗರಿಕ ಶಕ್ತಿ ಮತ್ತು ಸಂವಿಧಾನಗಳನ್ನು ಗೌರವಿಸುವಂತೆ ಒತ್ತಾಯಿಸಲು” CELAC ಸದಸ್ಯ ರಾಷ್ಟ್ರಗಳ ಎಲ್ಲಾ ಅಧ್ಯಕ್ಷರಿಗೆ ಕರೆ ನೀಡಿದರು.

ಇಂಟರ್ ನ್ಯಾಷನಲ್ ಪೀಪಲ್ಸ ಅಸೆಂಬ್ಲಿ (IPA) ಹೀಗೊಂದು ಹೇಳಿಕೆ ಹೊರಡಿಸಿತು : “ಬೊಲಿವಿಯಾದ ವೀರ ಜನರು ದಂಗೆಯನ್ನು ಯಶಸ್ವಿಯಾಗಿ ಸೋಲಿಸಿದ್ದಾರೆ! ಅಧ್ಯಕ್ಷ ಲೂಯಿಸ್ ಆರ್ಸ್ ಅವರ ಪ್ರಜಾಪ್ರಭುತ್ವ ಸರ್ಕಾರವನ್ನು ರಕ್ಷಿಸಲು ಜನರ ಚಳುವಳಿಗಳು ಸಜ್ಜುಗೊಂಡವು. ನಾವು ಯಾವಾಗಲೂ ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತ್ವದೊಂದಿಗೆ ನಿಲ್ಲುತ್ತೇವೆ. ಇಂದು ಬೊಲಿವಿಯನ್ ಜನರು, ಬೊಲಿವಿಯನ್ ಗಣ್ಯರ ಮತ್ತು ಅವರ ಯು.ಎಸ್ ಧಣಿಗಳ ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನಗಳ ವಿರುದ್ಧ ಎದ್ದೇಳುವುದನ್ನು ನಾವು ನೋಡಿದ್ದೇವೆ.”

ಬೊಲಿವಿಯಾದಲ್ಲಿನ COB ಮತ್ತು ಇತರ ಜನ ಸಂಘಟನೆಗಳು ಜನರ ವಿಜಯವನ್ನು ಆಚರಿಸಿವೆ. ಆದರೆ ಬೊಲಿವಿಯನ್ ಜನರು ಮತ್ತು ಅಂತರರಾಷ್ಟ್ರೀಯ ಸಮುದಾಯವು ಯಾವುದೇ ಮುಂದಿನ ದಂಗೆಯ ಪ್ರಯತ್ನಗಳ ವಿರುದ್ಧ ತಮ್ಮ ಜಾಗರಣೆ ಮತ್ತು ಎಚ್ಚರಿಕೆಯ ಸ್ಥಿತಿಯನ್ನು ಮುಂದುವರಿಸಲು ಕರೆ ನೀಡಿದೆ.

ಲಿಥಿಯಂ ಉತ್ಪಾದಿಸಲು ಚೀನಾ ರಷ್ಯಾ ಜತೆ ಒಪ್ಪಂದ ದಂಗೆಗೆ ಕಾರಣವೇ?

ಲಿಥಿಯಂ ಉತ್ಪಾದಿಸಲು ಚೀನಾ ಮತ್ತು ರಷ್ಯಾ ಗಳ ಜತೆ ಬೊಲಿವಿಯಾ ಮಾಡಿಕೊಂಡಿರುವ ಒಪ್ಪಂದಗಳು ದಂಗೆಯ ಪ್ರಯತ್ನಗಳಿಗೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಬೊಲಿವಿಯ ದೇಶವು  ಕೇವಲ 1. 2 ಕೋಟಿ ಜನಸಂಖ್ಯೆ ಮತ್ತು 46 ಶತಕೋಟಿ ಡಾಲರುಗಳ ಜಿಡಿಪಿಯೊಂದಿಗೆ, ಪ್ರಪಂಚದ ಸುಮಾರು 23% ಲಿಥಿಯಂ ನಿಕ್ಷೇಪಗಳಿಗೆ ನೆಲೆಯಾಗಿದೆ. ಲಿಥಿಯಂ ವಿದ್ಯುತ್ ವಾಹನಗಳು ಮತ್ತಿತರ ಇಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನೆಯ ಟೆಕ್ ಉದ್ಯಮಕ್ಕೆ ಪ್ರಮುಖ ಖನಿಜವಾಗಿದೆ.  ಲಿಥೀಯಂ ಖನಿಜದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ, ಬೊಲಿವಿಯದ ಮಿಲಿಟರಿ ದಂಗೆಗಳ ಹಿಂದೆ  ಯು.ಎಸ್ ಮತ್ತು ಯುರೋಪಿಯನ್ ಕಂಪನಿಗಳ ಸರಕಾರಗಳ ಕುಮ್ಮಕ್ಕು ಇರಬಹುದು ಎಂದು ಊಹಿಸಲಾಗಿದೆ.

ವಿದ್ಯುತ್ ವಾಹನಗಳ ಮತ್ತು ಇತರ ಹಲವು ಟೆಕ್ ಕ್ಷೇತ್ರಗಳ ದೈತ್ಯ ಉದ್ಯಮಿ ಎಲೋನ್ ಮಸ್ಕ್ ಅವರು 2020 ರಲ್ಲಿ ಟ್ವಿಟರ್ ಪೋಸ್ಟ್ ನಲ್ಲಿ “ನಮಗೆ ಬೇಕಾದಾಗ ನಾವು ದಂಗೆ ಮಾಡುತ್ತೇವೆ!” ಎಂದು ಬೊಲಿವಿಯಾದ ಬಗ್ಗೆ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈಗ ಬೊಲಿವಿಯದ ಬಳಿ ಲಿಥೀಯಂ ಸಂಸ್ಕರಿಸುವ ಸಾಮರ್ಥ್ಯ ಬಹಳ ಕಡಿಮೆಯಿದೆ. ಹಾಗಾಗಿ ಲೀಥೀಯಂ ಖನಿಜ ರಫ್ತಿನ ಮೇಲೆ ಅದು ಅವಲಂಬಿಸಬೇಕಾಗಿದೆ. ಆದರೆ 2023 ರಲ್ಲಿ ಚೀನಾದೊಂದಿಗೆ ಸಹಿ ಮಾಡಿದ ಪಾಲುದಾರಿಕೆಗಳು ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. ಇದು ಬೊಲಿವಿಯನ್ ಆರ್ಥಿಕತೆಗೆ ಹೊಸ ಹಾದಿಗಳನ್ನು ತೆರೆಯುತ್ತದೆ ಎಂದು ಪರಿಣತರು ಹೇಳಿದ್ದಾರೆ.

“ಜನವರಿಯಲ್ಲಿ, 50,000 ಟನ್ ಉತ್ಪಾದಿಸುವ ನಿರೀಕ್ಷೆಯಿರುವ ಎರಡು ಕಾರ್ಖಾನೆಗಳನ್ನು ನಿರ್ಮಿಸಲು ಬೊಲಿವಿಯಾದ ಸರ್ಕಾರಿ ಸ್ವಾಮ್ಯದ ಕಂಪನಿ ಯಾಸಿಮಿಯೆಂಟೋಸ್ ಡಿ ಲಿಟಿಯೊ ಬೊಲಿವಿಯಾನೊ (YLB) ಜಂಟಿ ಉದ್ಯಮದಲ್ಲಿ ಜಾಗತಿಕ ಲಿಥಿಯಂ ಬ್ಯಾಟರಿ ಅಗ್ರಗಾಮಿ ಚೀನಾದ CATL ನಿಂದ 1 ಶತಕೋಟಿ ಡಾಲರುಗಳ ಆರಂಭಿಕ ಹೂಡಿಕೆಯನ್ನು ಘೋಷಿಸಲಾಯಿತು. ಎರಡು ಕಾರ್ಖಾನೆಗಳು ವರ್ಷಕ್ಕೆ 50 ಸಾವಿರ ಲಿಥಿಯಂ ಕಾರ್ಬೋನೇಟ್ ಉತ್ಪಾದನೆ ಮಾಡಲಿವೆ. ಒಟ್ಟು ಹೂಡಿಕೆಯು US$9.9 ಶತಕೋಟಿಯನ್ನು ತಲುಪಬಹುದು ಎಂದು ಹೇಳಲಾಗಿದೆ.

“ಜೂನ್ ನಲ್ಲಿ, YLB 1.4 ಶತಕೋಟಿ ಡಾಲರುಗಳನ್ನು ತಲುಪುವ ಎರಡು ಇತರ ಒಪ್ಪಂದಗಳಿಗೆ ಸಹಿ ಹಾಕಿತು: ಒಂದು ಚೀನಾದ ಸಿಟಿಕ್ ಗುವಾನ್ ಗ್ರೂಪ್ಪ್ ನೊಂದಿಗೆ ಮತ್ತು ಇನ್ನೊಂದು ರಷ್ಯಾದ ಯುರೇನಿಯಂ ಒನ್ ಗ್ರೂಪ್ ನೊಂದಿಗೆ (ರಷ್ಯಾದ ಪರಮಾಣು ದೈತ್ಯ ರೊಸಾಟಮ್ನ ಅಂಗಸಂಸ್ಥೆ). ಇನ್ನೂ ಎರಡು ಲಿಥಿಯಂ ಕಾರ್ಬೋನೇಟ್ ಉತ್ಪಾದನಾ ಘಟಕಗಳು ವರ್ಷಕ್ಕೆ 45,000 ಟನ್ ಗಳನ್ನು ತಲುಪಬಹುದು ಎಂದೂ ಹೇಳಲಾಗಿದೆ.

ಜನವರಿ ಮತ್ತು ನವೆಂಬರ್ 2022 ರ ನಡುವೆ ಬೊಲಿವಿಯಾ ಕೇವಲ 635.5 ಟನ್ ಲಿಥಿಯಂ ಕಾರ್ಬೋನೇಟ್ ಅನ್ನು ಉತ್ಪಾದಿಸಿದೆ. ಈ ಹೊಸ ಒಪ್ಪಂದಗಳೊಂದಿಗೆ, [ಲಿಥಿಯಂ ಕಾರ್ಬೋನೇಟ್] ಉತ್ಪಾದನೆಯು 2025 ರ ವೇಳೆಗೆ ಸುಮಾರು 100,000 ಟನ್ ಗಳನ್ನು ತಲುಪಬಹುದು.

ಇದರ ಜೊತೆಗೆ, ಸಿಟಿಗ್ ಗುವಾನ್ ಬೊಲಿವಿಯಾದಲ್ಲಿ ಲಿಥಿಯಂ ಬ್ಯಾಟರಿಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಸುತ್ತಿದೆ.

ಈ ಒಪ್ಪಂದಗಳು ಚೀನಾ-ರಷ್ಯಾ ಗಳ ಟೆಕ್ ಪ್ರಾಬಲ್ಯದ ಬಗ್ಗೆ ಆತಂಕಿತರಾಗಿರುವ ಎಲೊನ್ ಮಸ್ಕ್ ನಂತಹ ಯು. ಎಸ್-ಯುರೋಪಿಯನ್ ವಿದ್ಯುತ್ ವಾಹನ ಮತ್ತಿತರ ಕ್ಷೇತ್ರಗಳ ದೈತ್ಯ ಟೆಕ್ ಉದ್ಯಮಗಳಿಗೆ ಆತಂಕಕಾರಿಯಾಗಿವೆ. ಇದು ಈ ಮಿಲಿಟರಿ ದಂಗೆಗೆ ಪ್ರೇರಣೆಯಾಗಿರಬಹುದು.

ಇದನ್ನೂ ನೋಡಿ: ಪ್ರಜ್ವಲ್‌ – ಸೂರಜ್‌ ವಿರುದ್ದ ಒಂದರ ಹಿಂದೆ ಮತ್ತೊಂದು ದೂರು ದಾಖಲು – ಒಬ್ಬರ ಜೊತೆ ಮತ್ತೊಬ್ಬರು ಜೈಲು ಪಾಲು

Donate Janashakthi Media

Leave a Reply

Your email address will not be published. Required fields are marked *