ಬೆಂಗಳೂರು : ಬಿಎಂಟಿಸಿ ಖಾಸಗೀಕರಣವನ್ನು ಸಮರ್ಥಿಸಿಕೊಂಡ ಬಿಜೆಪಿ ಪಕ್ಷದ ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ (ClTU) ತೀವ್ರ ಆಕ್ರೋಶ ವ್ಯಕ್ತಿಪಡಿಸಿದೆ.
ತೇಜಸ್ವಿ ಸೂರ್ಯರ ಹೇಳಿಕೆ : ಬಿಎಂಟಿಸಿಯನ್ನು ಖಾಸಗೀಕರಣ ಮಾಡಬೇಕು, ಮುಖ್ಕಮಂತ್ರಿಯವರನ್ನು ಬೇಟಿ ಮಾಡಿ ಖಾಸಗೀಯವರಿಗೆ ಬೆಂಗಳೂರು ನಗರದಲ್ಲಿ ಅವಕಾಶ ಕೊಡಿ ಎಂದು ಹೇಳುತ್ತೇನೆ. ಇದಕ್ಕೆ ಕಾರಣ BMTC ಬಸ್ಸುಗಳು ಪ್ಲೀಟ್ ವಿಸ್ತರಿಸುತ್ತಿಲ್ಲ, ಆಗಾಗ್ಗೆ ಬೆಲೆ ಏರಿಕೆ ಮಾಡುತ್ತಾರೆ, ಕೆಲಸಗಾರರಿಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ, ಪೆನ್ಷನ್ ಕೊಡುತ್ತಿಲ್ಲ, ಸರ್ಕಾರ ಪ್ರತಿ ವರ್ಷ ಹಣ ಕೊಡಬೇಕು, ಎಷ್ಟು ವರ್ಷ ಕೊಡಬೇಕು. ಖಾಸಗೀಯವರು ಬಂದರೆ ಕಾರ್ಮಿಕರ ಶೋಷಣೆ ಆಗುತ್ತದೆ ಎಂದು ಹೇಳುವುದು 25 ವರ್ಷಗಳ ಹಿಂದಿನ ಆರ್ಥಿಕವಾದ ಮಾಡುವವರು ಹೇಳುತ್ತಾರೆ, ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಖಾಸಗೀ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲೂ ಶೋಷಣೆ ಇಲ್ಲ. ಶೋಷಣೆ ಇದ್ದಿದ್ದರೆ ಇಷ್ಟೊಂದು ಶಾಂತಿಯಿಂದ ಇರಲು ಸಾಧ್ಯವಿತ್ತಾ. ಅದಕ್ಕಾಗಿ ( Reform) ಸುಧಾರಣೆ ಮಾಡಬೇಕು ಅಂದರೆ BMTC ಖಾಸಗೀಕರಣ ಮಾಡಿ ಖಾಸಗೀಯವರು ಬೆಂಗಳೂರಿನಲ್ಲಿ ಬಸ್ಸುಗಳನ್ನು ಓಡಿಸಲು ಅವಕಾಶ ಕೊಡಬೇಕು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ : ಖಾಸಗೀಕರಣಕ್ಕೆ ವಿರೋಧ: ಸಾರಿಗೆ ನೌಕರರಿಂದ ಪ್ರತಿಭಟನೆ
ತೇಜಸ್ವಿ ಸೂರ್ಯರವರು ಈ ಹೇಳಿಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸೂರ್ಯ ರವರಿಗೆ KSRTC/ NEKRTC/ NWKRTC ಮತ್ತು BMTC ಹುಟ್ಟು ಬೆಳವಣಿಗೆಯ ಬಗ್ಗೆ ಸಾಮಾನ್ಯ ಜ್ಞಾನವು ಇದ್ದಂತಿಲ್ಲ. 1956 ರಲ್ಲಿ ಈ ರಾಜ್ಯದ ಜನತೆಗೆ / ಗ್ರಾಮೀಣ ಜನತೆಗೆ ಬಸ್ಸು ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಕೇವಲ 5 ಕೋಟಿ ಬಂಡವಾಳದಿಂದ ಸರ್ಕಾರದ ಒಡೆತನದಲ್ಲಿ ಆರಂಭಗೊಂಡ ಸಂಸ್ಥೆ- ಖಾಸಗೀಯವರ ಶೋಷಣೆಯಿಂದ ರಾಜ್ಯದ ಜನರನ್ನು ಮುಕ್ತಗೊಳಿಸುವ ಸಲುವಾಗಿ 1977 ರಲ್ಲಿ ಕೆಲವು ಜಿಲ್ಲೆಗಳನ್ನು ಸಂಪೂರ್ಣ ರಾಷ್ಟ್ರೀಕರಣ ಮಾಡಿ ಈ ರಾಜ್ಯದ ಪ್ರತಿಯೊಂದು ಹಳ್ಳಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಈ ಸಂಸ್ಥೆಯ ಬೆಳವಣಿಗೆಗೆ ಲಕ್ಷಾಂತರ ಕಾರ್ಮಿಕರ ಹಾಗೂ ಅಧಿಕಾರಿಗಳ ಪರಿಶ್ರಮವಿದೆ. ಸಂಸ್ಥೆಯ ಆಂತರೀಕ ಸಂಪನ್ಮೂಲದಿಂದ ಲಕ್ಷಾಂತರ ಕೋಟಿ ಚರಾಸ್ತಿ/ಸ್ಥಿರಾಸ್ತಿ ಗಳನ್ನು ಮಾಡಲಾಗಿದೆ. ಕೆಲವೇ ಡಿಪೋಗಳಿಂದ ಆರಂಭಗೊಂಡ ಸಂಸ್ಥೆ 225 ಡಿಪೋಗಳನ್ನು ಹೊಂದಿದೆ. 26000 ಸಾವಿರ ವಾಹನಗಳ ಮೂಲಕ ಈ ರಾಜ್ಯದ ಗ್ರಾಮೀಣ ಪ್ರದೇಶಗಳು/ ನಗರ ಪ್ರದೇಶಗಳು/ ಅಂತರ್- ರಾಜ್ಯ ಸೇವೆಗಳನ್ನು ಒದಗಿಸುತ್ತಿದೆ. ಈ ಸಂಸ್ಥೆಗಳು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿ ಕರ್ನಾಟಕದ ಹೆಮ್ಮೆಯ ಬೃಹತ್ ಸಾರ್ವಜನಿಕ ಸಂಸ್ಥೆಗಳಾಗಿ ಬೆಳೆದಿವೆ. ಈ ಸಂಸ್ಥೆಗಳು ಈ ರಾಜ್ಯದ ಜನತೆ ಆಸ್ತಿ. ಈ ಸಂಸ್ಥೆಗಳು ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂಗಳನ್ನು ಪರೋಕ್ಷ ಮತ್ತು ಅಪರೋಕ್ಷವಾಗಿ ತೆರಿಗೆಗಳನ್ನು ನೀಡಿವೆ. ಈ ರಾಜ್ಯದ ಕೋಟ್ಯಾಂತರ ವಿದ್ಯಾರ್ಥಿಗಳಿಗೆ / ಇನ್ನಿತರೆ ಹತ್ತಾರು ವಿದಧ ರಿಯಾಯಿತಿ ಪಾಸುಗಳನು ನೀಡಿ ಸಾಮಾಜಿಕ ಹೊಣೆಗಾರಿಕೆಯನ್ನು ನೀಡುತ್ತಿವೆ. ಇಂತಹ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಕರಾರಸಾ ನಿಗಮಗಳ ನೌಕರರ ಫೆಡರೇಶನ್ (ClTU) ಉಪಾಧ್ಯಕ್ಷರಾದ ಡಾ. K. ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯ?
BMTC ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಮೂಲೆ- ಮೂಲೆಗೂ ಬಸ್ ಸೌಕರ್ಯ ಒದಗಿಸಿ ಪ್ರಯಾಣಿಕರ ಅಗತ್ಯಗಳನ್ನು ಪೂರೈಸುತ್ತಿದೆ. BMTC 50 ಡಿಪೋಗಳನ್ನು ಹೊಂದಿ, ಬೆಂಗಳೂರಿನ ಎಲ್ಲಾ ಭಾಗಗಳಲ್ಲಿನ ನಗರ/ ಸುತ್ತಮುತ್ತಲ ಹಳ್ಳಿಗಳ ಸಾರ್ವಜನಿಕರಿಗೆ / ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಾ ಇದೆ. ಸುಮಾರು 1250 ಎಕರೆ ಭೂಮಿಯನ್ನು/ ಹತ್ತಾರು ಬೃಹತ್/ ನೂರಾರು ಸಾಮಾನ್ಯ ಬಸ್ ನಿಲ್ದಾಣಗಳನ್ನು ಹೊಂದಿದೆ. 6500 ಸಾವಿರ ಬಸ್ಸುಗಳಿವೆ. ರಾಷ್ಟ್ರದಲ್ಲಿಯೆ ಅತ್ಯುತ್ತಮ ನಗರ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹತ್ತಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದೆ. 1996 ರಿಂದ ಸರ್ಕಾರ ಮತ್ತು ಆಡಳಿತ ವರ್ಗಗಳ ಕಾರ್ಮಿಕ ವಿರೋಧ ದೋರಣೆಯಿಂದಾಗಿ ಅತ್ಯಂತ ಕಡಿಮೆ ಸಂಬಳಕ್ಕೆ ಲಕ್ಷಾಂತರ ಕಾರ್ಮಿಕರು ದುಡಿದಿದ್ದಾರೆ. ಅವರ ಸಂಬಳದ ಮಿಗುತಾಯವೇ ಈ ಸಂಸ್ಥೆ ಬೃಹತ್ತಾಗಿ ಬೆಳೆಯಲು ಸಾಧ್ಯವಾಗಿದೆ. 2014 ರವರೆಗೆ ಸರ್ಕಾರಗಳು ಸಹ ಅಲ್ಪ ಪ್ರಮಾಣದ ಸಹಾಯ ಧನವನ್ನು ನೀಡಿ ಈ ಸಂಸ್ಥೆ ಬೆಳವಣಿಗೆಗೆ ಕಾರಣವಾಗಿದೆ. 2014 ನಂತರ BJP ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಂತ- ಹಂತವಾಗಿ ಅನುಧಾನ ನೀಡುವುದನ್ನು ಸಂಪೂರ್ಣ ನಿಲ್ಲಿಸಲಾಗಿದೆ ಎಂದು ಕರಾರಸಾ ನಿಗಮಗಳ ನೌಕರರ ಫೆಡರೇಶನ್ (ClTU) ಅಧ್ಯಕ್ಷರಾದ H D ರೇವಪ್ಪ ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಡೀಸಲ್/ ವಾಹನ ಬಿಡಿಭಾಗಗಳ ಮೇಲೆ ಎಕ್ಸೈಜ್ ಡ್ಯೂಟಿ ತೆರಿಗೆಯನ್ನು ವಿಪರೀತವಾಗಿ ಹೆಚ್ಚಿಸಿದ ನಂತರ ಈ ಸಂಸ್ಥೆಗೆ ಸಂಕಷ್ಟ ಆರಂಭವಾಗಿದೆ. ಆಗಾಗ್ಗೆ BMTC ಧರವನ್ನು ಹೆಚ್ಚಳ ಮಾಡುತ್ತಿದೆ ಎಂದು ಒಬ್ಬ ಸಂಸದನಾಗಿ ಅಪಪ್ರಚಾರ ಮಾಡುತ್ತೀರಿ. ನಿಮ್ಮ ಸರ್ಕಾರ ದಿನ ನಿತ್ಯ ಡೀಸಲ್- ಪೆಟ್ರೋಲ್ ಬೆಲೆ ಹೆಚ್ಚಳ ಮಾಡುತ್ತಿದೆ. ಈ ಬಗ್ಗೆ ತಾವು ಏಕೆ ಮಾತನಾಡಲ್ಲಾ ಹೇಳಿ ಎಂದು ಕರಾರಸಾ ನಿಗಮಗಳ ನೌಕರರ ಫೆಡರೇಶನ್ (ClTU) ಪ್ರಧಾನ ಕಾರ್ಯದರ್ಶಿ H S ಮಂಜುನಾಥ್, ತೇಜಸ್ವಿ ಸೂರ್ಯ ಅವರಿಗೆ ಪ್ರಶಿಸಿದ್ದಾರೆ.
ಈ ದೇಶದ ಸಾರ್ವಜನಿಕ ಉದ್ದಿಮೆಗಳನ್ನು ಒಳಗೊಂಡು ಈ ದೇಶದ ಎಲ್ಲಾ ಸಂಪತ್ತಿನ ಮೂಲಗಳ ಮೇಲೆ BJP ಕಣ್ಣುಗಳು ಬಿದ್ದಿವೆ. ಈ ಎಲ್ಲವನ್ನೂ ಖಾಸಗೀಯವರಿಗೆ ವಹಿಸಿ ದೇಶವನ್ನು/ ಜನರನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಲು ಹೊರಟ್ಟಿದ್ದಿರಿ. BMTC/KSRTC/ NEKRTC/ NWKRTC ಖಾಸಗೀಕರಣಕ್ಕೆ ಸರ್ಕಾರ ಮುಂದಾದರೆ ಅದರ ವಿರುದ್ಧ ನಮ್ಮ ಬದುಕುಗಳ ರಕ್ಷಣೆಗಾಗಿ/ ಈ ರಾಜ್ಯದ ಜನರ ಆಸ್ತಿಯನ್ನು ಉಳಿಸಲು ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ (ClTU) ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.