ಬೆಂಗಳೂರು : ಹೆಚ್ಚಿನ ಇನ್ಷೆಂಟಿವ್ ಆಸೆಗಾಗಿ ಬಿಎಂಟಿಸಿ ಕಂಡೆಕ್ಟರೊಬ್ಬರು, ಬೇಕಾ ಬಿಟ್ಟಿಯಾಗಿ ಶಕ್ತಿಯೋಜನೆಯ ಫ್ರೀ ಟಿಕೆಟ್ಗಳನ್ನು ಹರಿದು ಬಿಸಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೆಜೆಸ್ಟಿಕ್ನಿಂದ – ತಾವರಕೆರೆಗೆ ಹೋಗುವ (242-ಬಿ) ಬಿಬಿಎಂಟಿಸಿ ಬಸ್ನ ಕಂಡೆಕ್ಟರ್, ಅಕ್ಟೋಬರ್ 15 ರಂದು ಸುಖಾಸುಮ್ಮನೇ ಫ್ರೀ ಟಿಕೆಟ್ ಹರಿದು ಬಿಸಾಕುತ್ತಿದ್ದನು. ಇದನ್ನು ಕಂಡ ಮಹಿಳಾ ಪ್ರಯಾಣಿಕರೊಬ್ಬರು “ಯಾಕೆ ಟಿಕೆಟ್ ಹರಿದು ಬಿಸಾಕುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿಮ್ಮಂತವರಿಂದಲೇ ಶಕ್ತಿ ಯೋಜನೆಗೆ ಕೆಟ್ಟ ಹೆಸರೆಂದು” ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವೇಳೆ ಗಲಿಬಿಲಿಗೊಂಡ ಚಾಲಕ ಹೆಚ್ಚಿನ ಇನ್ಷೆಂಟಿವ್ ಆಸೆಗಾಗಿ ಈ ರೀತಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ : ಶಕ್ತಿ ಯೋಜನೆ | ಶತದಿನಗಳಲ್ಲಿ 62 ಕೋಟಿ ಮಹಿಳೆಯರು ಉಚಿತ ಪ್ರಯಾಣ!
ನಿರ್ವಾಹಕನ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಹಿಳಾ ಉದ್ಯೋಗಿಗಳಿಗೆ ಅನುಕೂಲವಾಗಿರುವ ಶಕ್ತಿ ಯೋಜನೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುವ ಮೂಲಕ ಯೋಜನೆಗೆ ಕೆಟ್ಟ ಹೆಸರು ತರುವ ಕೆಲಸ ಮಾಡಿದ್ದರು. ದೇವಸ್ಥಾನಗಳ ಸುತ್ತಾಟಕ್ಕೆ ಶಕ್ತಿ ಯೋಜನೆ ಬಳಕೆ ಮಾಡುತ್ತಿದ್ದಾರೆ. ಮಹಿಳೆಯರು ಈಗ ಮನೆಯಲ್ಲಿ ಇರೋದಿಲ್ಲ ಬಸ್ಸಲ್ಲಿ ಇರ್ತಾರೆ ಎಂದು ಅಪಹಾಸ್ಯ ಮಾಡುತ್ತಿದ್ದರು. ಈಗ ಈ ಮಾರ್ಗ್ ಕಂಡುಹಿಡಿದಿದ್ದಾರೆ. ಹಾಗಾಗಿ ಇಂತಹ ನಿರ್ವಾಹಕರ ಮೇಲೆ ಕ್ರಮಜರುಗಿಸಬೇಕು ಎಂದು ಮಹಿಳಾ ಪ್ರಯಾಣಿಕರು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿ ಮಾಡಿದ್ದು, ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಈ ಟಿಕೆಟ್ನ ಹಣವನ್ನು ಸರ್ಕಾರ ನಿಗಮಗಳಿಗೆ ನೀಡುತ್ತದೆ. ಕಳೆದ ಒಂದು ವಾರದಲ್ಲಿ ಅಂದರೆ ಅ.11 ರಿಂದ ಅ.14ರವರೆಗೆ ನಾಲ್ಕು ನಿಗಮದ ಬಸ್ಗಳಲ್ಲಿ 77,56,72,604 ಮಹಿಳೆಯರು ಸಂಚರಿಸಿದ್ದಾರೆ. ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1808,45,54, 754 ಆಗಿದೆ. ಇನ್ನು ಕಂಡಕ್ಟರ್ಗಳು ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ಸಂಖ್ಯೆಗಳನ್ನು ನಿಗಮಗಳಿಗೆ ತಪ್ಪಾಗಿ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಿಎಂಟಿಸಿ ಈ ಬಗ್ಗೆ ನಿರ್ವಾಕರಿಗೆ ಎಚ್ಚರಿಕೆ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಬೇಕು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಈ ವಿಡಿಯೋ ನೋಡಿ : ಫ್ರೀ ಬಸ್ ಪಾಸ್ : ಬಡವರಿಗೆ ಸಹಾಯ ಆಗುತ್ತೆ, ಬಸ್ ಚಾರ್ಜ್‌ನಲ್ಲಿ ಉಳಿತಾಯವಾದ ಹಣ ಮಕ್ಕಳ ಓದಿಗೆ ಬಳಸ್ತೇವೆ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
[email protected]
[email protected]
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ