ಬೆಂಗಳೂರು : ಕೊರೋನ ಸೋಂಕಿನಿಂದ ಈಗ ತಾನೆ ಚೇತರಿಕೊಳ್ಳುತ್ತಿರುವ ಬೆಂಗಳೂರು ಜನತೆಗೆ ಸರಕಾರ ಶಾಕ್ ಮೇಲೆ ಶಾಕು ನೀಡುತ್ತಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಹೆಚ್ಚಳದ ಹೊರೆಯ ನಡುವೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಈಗಾಗಲೇ ಸಾರಿಗೆ ನಿಗಮ ಮಂಡಳಿ ಬಿಎಂಟಿಸಿ ದರ ಹೆಚ್ಚಳದ ಚಿಂತನೆ ಮಾಡಿದ್ದು, ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ನಾಲ್ಕು ಮೂರು ಸಾರಿಗೆ ನಿಗಮಗಳ ಟಿಕೆಟ್ ದರವನ್ನು ಕಳೆದ ವರ್ಷ ಶೇ. 12 ರಷ್ಟು ಹೆಚ್ಚಳ ಮಾಡಲಾಗಿದೆ. ಬಿಎಂಟಿಸಿ ಟಿಕೆಟ್ ದರವನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾಪ ಇದ್ದು, ದರ ಹೆಚ್ಚಿಸುವ ಚಿಂತನೆ ಇದೆ ಎಂದು ಸ್ಪಷ್ಟಪಡಿಸಿದರು.
ಬಿಎಂಟಿಸಿ ದರವನ್ನು ಶೇ. 1 ರಷ್ಟು ಹೆಚ್ಚಿಸುವಂತೆ ಸಾರಿಗೆ ನಿಗಮ ಮಂಡಳಿ ಸರ್ಕಾರಕ್ಕೆ ಪ್ರಸ್ತಾಪ ಮಾಡಿದೆ. ಈ ಕುರಿತಾಗಿ ಸಾರ್ವಜನಿಕರಿಗೆ ಹೊರೆಯಾಗದಂತೆ ಟಿಕೆಟ್ ದರ ಹೆಚ್ಚಳದ ಕುರಿತು ಸಿಎಂ ಅವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈ ಗೊಳ್ಳುತ್ತೇನೆ ಎಂದು ಸಚಿವರು ತಿಳಿಸಿದರು