ಮುಂಬೈ: ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ನಡೆದ ಚುನಾವಣೆಯ ಫಲಿತಾಂಶ ಜನವರಿ 16ರಂದು ಹೊರಬಿದ್ದಿದ್ದೂ, ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಕಾಯ್ದುಕೊಂಡಿದೆ.
ಮತ ಎಣಿಕೆ ಪ್ರಗತಿಯಲ್ಲಿದ್ದು ಈವರೆಗೆ (ಮ.3.30) BMCಯ 227 ಸ್ಥಾನಗಳ ಪೈಕಿ ಬಿಜೆಪಿ 129, ಕಾಂಗ್ರೆಸ್ 15, ಶಿವಸೇನಾ ಉದ್ಧವ್ ಠಾಕ್ರೆ ಬಣ 72, ಎನ್‌ಸಿಪಿ (ಅಜಿತ್) 02 ಹಾಗೂ ಇತರರು 09 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ: “ನಮಗೆ ಭಿಕ್ಷಾಪಾತ್ರೆಗಳು ಬೇಡ, ನಮಗೆ ಹಕ್ಕುಗಳು ಬೇಕು”
ತಾಂತ್ರಿಕ ಕಾರಣಗಳಿಂದ ಬಿಎಂಸಿಯ ಮತ ಎಣಿಕೆ ತಡವಾಗಿ ಆರಂಭವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೇಶದ ಶ್ರೀಮಂತ ಮಹಾನಗರ ಪಾಲಿಕೆ ಹೊಂದಿರುವ ಮುಂಬೈ ಅನ್ನು ಗೆಲ್ಲಲು ಬಿಜೆಪಿ ನೇತೃತ್ವದ ಮಹಾಯುತಿ ಹಾಗೂ ಅನೇಕ ವರ್ಷಗಳ ಬಳಿಕ ಒಂದಾಗಿರುವ ಠಾಕ್ರೆ ಸಹೋದರರ ನಡುವೆ ತೀವ್ರ ಪೈಪೋಟಿ ಉಂಟಾಗಿದೆ.
₹74,400 ಕೋಟಿಗೂ ಅಧಿಕ ಮೊತ್ತದ ವಾರ್ಷಿಕ ಬಜೆಟ್ ಹೊಂದಿರುವ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC)ಗೆ, ಸದಸ್ಯರ ಅಧಿಕಾರ ಅವಧಿ ಮುಗಿದು 4 ವರ್ಷಗಳ ಬಳಿಕ ಚುನಾವಣೆ ನಡೆದಿದೆ.
ಇದನ್ನೂ ನೋಡಿ: ರಾಗಿ ಕಣದಲ್ಲಿ ಸಂಕ್ರಾಂತಿ ಸುಗ್ಗಿ ಸೊಬಗು Janashakthi Media
