ಬಿಜೆಪಿಯಿಂದ ಲಸಿಕೆ ನೀಡಿಕೆಯಲ್ಲಿಯೂ ದಂಧೆ: ಕಾಂಗ್ರೆಸ್

ಬೆಂಗಳೂರು: ಬಿಜೆಪಿಯವರಿಂದ ಕೋವಿಡ್‌ ಲಸಿಕೆ ನೀಡುವಲ್ಲಿಯೂ ದಂಧೆಯಲ್ಲಿನ ಹಗರಣದಲ್ಲಿ ಮುಳುಗಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷವು ಆರೋಪಿಸಿದೆ.

ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್ ಪಕ್ಷವು ‘ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿ ಸುಬ್ರಮಣ್ಯ ಅವರು ಉಚಿತವಾಗಿ ನೀಡಬೇಕಿದ್ದ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಬೆಂಬಲವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸೇರಿ ಇಡೀ ಸರ್ಕಾರವೇ ಈ ಹಗರಣದಲ್ಲಿದೆ’ ಎಂದು ತಿಳಿಸಿದೆ.

‘ಬೆಡ್ ಬ್ಲಾಕಿಂಗ್ ದಂಧೆ ನಡೆಸುತ್ತಿದ್ದ ಬಿಜೆಪಿ ಪಟಾಲಂ ಈಗ ವ್ಯಾಕ್ಸಿನ್ ಬ್ಲಾಕಿಂಗ್ ಹಗರಣ ನಡೆಸಿದೆ. ಬಿಬಿಎಂಪಿ ಲಸಿಕೆಗಳನ್ನು ₹900 ಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಮಾರಿ ಶಾಸಕ ರವಿ ಸುಬ್ರಮಣ್ಯ ಹಾಗೂ ತೇಜಸ್ವಿ ಸೂರ್ಯ ₹700 ಕಮಿಷನ್ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ’ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್‌ ಮಾಡಿದೆ.

ʻಲಸಿಕೆ ಕೊಡಿ ಎಂದರೆ ಲಸಿಕೆ ಸಿಗ್ತಿಲ್ಲ, ನಾವು ನೇಣು ಹಾಕಿಕೊಳ್ಬೇಕಾ ಎನ್ನುವ ಬಿಜೆಪಿಯವರೇ ಉತ್ತರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ನಿಮ್ಮ ಶಾಸಕ, ಸಂಸದರು 900 ರೂ. ಗಳಿಗೆ ಲಸಿಕೆ ಮಾರುತ್ತಿರುವುದು ಹೇಗೆ, ಆ ಲಸಿಕೆಗಳು ಎಲ್ಲಿಂದ ಸಿಕ್ಕವು. ಸರ್ಕಾರಕ್ಕೆ ಲಸಿಕೆ ಸಿಗದಂತೆ ಬ್ಲಾಕ್ ಮಾಡುತ್ತಿರುವುದು ಯಾರು, ಏಕೆʼ ಎಂದು ಪ್ರಶ್ನೆ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *