ಲಖನೌ: ಗ್ರಾಮೀಣ ಉದ್ಯೋಗ ಯೋಜನೆಯಾದ MGNREGA ಹೆಸರನ್ನು ಕೇವಲ ಮರು ನಾಮಕರಣ ಮಾಡುವುದಲ್ಲ, ಅದನ್ನು ರದ್ದುಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ ಎಂದು ಎಸ್ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.
MGNREGA ಯೋಜೆಯನ್ನು ವಿಬಿ ಜಿ ರಾಮ್ ಜಿ ಎಂದು ರಾಮ್ ರಾಮ್ ಎಂದು ಹೇಳುವುದು, ಅಂದ್ರೆ ಅಂತಿಮವಾಗಿ ಅದಕ್ಕೆ ವಿದಾಯ ಹೇಳುವುದಾಗಿದೆ. ಯಾರಾದರೂ ಬಡವರು ಜೀವನೋಪಾಯವನ್ನು ಸಂಪಾದಿಸುತ್ತಿದ್ದಾರೆ ಅಂದ್ರೆ ಬಿಜೆಪಿ ಅದನ್ನು ಸಹಿಸೋದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಿಕ್ಲು ಶಿವ ಪ್ರಕರಣ: ಬೈರತಿ ಬಸವರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ – ಸರ್ಕಾರ ಹೈಕೋರ್ಟ್‌ಗೆ ಮನವಿ
MGNREGA ಹೆಸರನ್ನು ಬದಲಾಯಿಸುವುದರಿಂದ ಏನು ಸಾಧಿಸಬಹುದು? ವಾಸ್ತವದಲ್ಲಿ, ಇದು MGNREGA ಅನ್ನು ನಿಧಾನವಾಗಿ ಮುಗಿಸಲು ಬಿಜೆಪಿಯ ರಹಸ್ಯ ಪಿತೂರಿಯಾಗಿದೆ. ಕೇಂದ್ರವು ಗ್ರಾಮೀಣ ಉದ್ಯೋಗ ಯೋಜನೆಗೆ ಹಂಚಿಕೆಗಳನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ. ಮತ್ತು ಅದೇ ಸಮಯದಲ್ಲಿ ರಾಜ್ಯಗಳ ಮೇಲೆ ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರವು MGNREGA ಬಜೆಟ್ ಅನ್ನು ಕನಿಷ್ಠ ಮಟ್ಟಕ್ಕೆ ಕಡಿತಗೊಳಿಸುತ್ತಿದೆ. ಮತ್ತೊಂದೆಡೆ, ರಾಜ್ಯಗಳು ತಮ್ಮದೇ ಆದ ಸಂಪನ್ಮೂಲಗಳನ್ನು ಖರ್ಚು ಮಾಡುವಂತೆ ಒತ್ತಡ ಹೇರಿದೆ. GST ವ್ಯವಸ್ಥೆಯಡಿಯಲ್ಲಿ ಕೇಂದ್ರದಿಂದ ಹಣ ಬರದ ಕಾರಣ, ಈಗಾಗಲೇ ಖಾಲಿ ಖಜಾನೆಗಳೊಂದಿಗೆ ಹೋರಾಡುತ್ತಿರುವ ರಾಜ್ಯಗಳು ಹೆಚ್ಚುವರಿ ಬಜೆಟ್‌ಗಳನ್ನು ವ್ಯವಸ್ಥೆ ಮಾಡಲು ಅಸಾಧ್ಯವಾಗುತ್ತವೆ ಎಂದು ಕಿಡಿಕಾರಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಬದಲಿಗೆ ಹೊಸದಾಗಿ ಜಾರಿಗೆ ತಂದಿರುವ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) (VB-G RAM G)- 2025 ಅನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಇದನ್ನೂ ನೋಡಿ: ವೆನೆಜುವೇಲಾದ ಮೇಲೆ ಯುದ್ದ ಹೂಡಿದರೆ ,ಯು.ಎಸ್ ಗೆ ಅದು ಇನ್ನೊಂದು ವಿಯೇಟ್ನಾಂ ಆಗುತ್ತದೆ! ಇರಾಕ್, ಲಿಬ್ಯ ಅಲ್ಲ !
