ಬಿಜೆಪಿ ಬಂಡಾಯ ಅಭ್ಯರ್ಥಿ ತವಣಪ್ಪ ಅಷ್ಟಗಿ ಕಾಂಗ್ರೆಸ್‌ ಗೆ ಸೇರ್ಪಡೆ

ಧಾರವಾಡ: ಬಿಜೆಪಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಂಡಾಯವೆದ್ದು ಧಾರವಾಡ ಗ್ರಾಮೀಣ-71 ರ ವಿಧಾನಸಭಾ ಮತಕ್ಷೇತ್ರಕ್ಕೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ತವಣಪ್ಪ ಅಷ್ಟಗಿ ಇದೀಗ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಮೂಲಕ ಕ್ಷೇತ್ರದಲ್ಲಿ ಹೊಸ ಸಂಚಲನ ‌ಸೃಷ್ಠಿಸಿದ್ದಾರೆ.

ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ತವನಪ್ಪ ಅಷ್ಟಗಿ ಬಿಜೆಪಿ ವರಿಷ್ಠರು ಮಣೆ ಹಾಕದೇ ಹಾಲಿ ಶಾಸಕ ಅಮೃತ ದೇಸಾಯಿ ಅವರಿಗೆ ಈ ಸಲವೂ ಟಿಕೆಟ್ ನೀಡಿದ್ದರಿಂದ ಅಷ್ಟಗಿ ಮುನಿಸಿಕೊಂಡಿದ್ದರು.

ಇದನ್ನೂ ಓದಿ : ಜನಮತ 2023 : ರಾತ್ರಿ ಬಿ-ಫಾರಂ ನೀಡಿ ಬೆಳಗ್ಗೆ ವಾಪಸ್‌ ಪಡೆದ ಕಾಂಗ್ರೆಸ್‌

ಇದಲ್ಲದೇ ನಿಗಮ ಮಂಡಳಿ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಇದರ ಜತೆಗೆ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಇದೀಗ ರವಿವಾರ ಹೊಸ ಬೆಳವಣಿಗೆಯಲ್ಲಿ ತವನಪ್ಪ ಅಷ್ಟಗಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಅವರು ಒಂದು ಬಾರಿ ತವನಪ್ಪ ಅಷ್ಟಗಿ ಮತ್ತು ಅವರ ಪತ್ನಿ ಕಸ್ತೂರಿ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಹೊಂದಿರುವ ಅಷ್ಟಗಿಯವರು ಇದೀಗ ಕಾಂಗ್ರೆಸ್ ಕೈ ಹಿಡಿದಿದದ್ದು ಗ್ರಾಮೀಣದಲ್ಲಿ ಇದರಿಂದ ಬಿಜೆಪಿಗೆ ತೀವ್ರ ಹಿನ್ನಡೆಯಾದಂತಾಗಿದೆ.

Donate Janashakthi Media

Leave a Reply

Your email address will not be published. Required fields are marked *