ಸಂವಿಧಾನ ನಿರ್ಲಕ್ಷಿಸಿ-ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ: ಜೈರಾಮ್‌ ರಮೇಶ್‌

ಜೈಪುರ: ಪ್ರಧಾನಿ ನರೇಂದ್ರ ಮೋದಿ ಆಡಳಿತದ ನೀತಿಗಳಿಂದಾಗಿ ಇಂದು ಭಾರತ ವಿಭಜನೆಯ ಸಾಧ್ಯತೆ ಹೆಚ್ಚಾಗಿದೆ. ರಾಜಕೀಯ ಸರ್ವಾಧಿಕರಣದಿಂದಾಗಿ ಒಂದು ರಾಷ್ಟ್ರ-ಒಬ್ಬ ವ್ಯಕ್ತಿಗೆ ಸೀಮಿತವಾಗಿದೆ. ಒಬ್ಬ ವ್ಯಕ್ತಿಗೆ ಎಲ್ಲಾ ರಾಜಕೀಯ ಹಕ್ಕುಗಳನ್ನು ನೀಡಲಾಗುತ್ತಿದೆ. ಸಂವಿಧಾನವನ್ನು ನಿರ್ಲಕ್ಷಿಸಲಾಗುತ್ತಿದ್ದು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿವೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

‘ದೇಶಕ್ಕೆ ಮೂರು ಸವಾಲು ಎದುರಾಗಿದ್ದು, ಅವುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿವೆ, ಹೋರಾಟ ಅನಿವಾರ್ಯವಾಗಿದೆ. ಪ್ರಧಾನ ಮಂತ್ರಿಯ ಉದ್ದೇಶ ಮತ್ತು ನೀತಿಗಳಿಂದಾಗಿ ಭಾರತದಲ್ಲಿ ವಿಭಜನೆಯ ಸಾಧ್ಯತೆ ಹೆಚ್ಚಾಗಿದ್ದು, ಆರ್ಥಿಕ ಅಸಮಾನತೆ. ವಿಭಜಕ ಸಿದ್ಧಾಂತವು ಇತರ ಎರಡು ಸವಾಲುಗಳು ಎಂದು ವಿವರಿಸಿದರು.

ದೇಶದಲ್ಲಿ ಸರ್ವಾಧಿಕಾರಕ್ಕೆ ಅಣಿಯಾಗುತ್ತಿದ್ದು, ಜನರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ತಿಳಿಯಲು ಭಾರತ ಐಕ್ಯತಾ ಯಾತ್ರೆ ಯೋಜಿಸಲಾಗಿದೆ. ಯಾತ್ರೆ ಡಿಸೆಂಬರ್‌ 11ರಂದು ರಾಜಸ್ಥಾನಕ್ಕೆ ಪ್ರವೇಶಿಸಲಿದೆ. ಇದು ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಗಿದ್ದು ಇದುವರೆಗೆ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣವನ್ನು ಸಂಚರಿಸಿದೆ. ನಂತರ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ಮೂಲಕ ಯಾತ್ರೆ ಮುಂದುವರೆದಿದೆ ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *