ಟಿಎಂಸಿ, ಬಿಜೆಪಿ ತೊರೆಯುತ್ತಿರುವ ಶಾಸಕರು

ಅಸ್ಸಾಂ/ ಕೋಲ್ಕತ್ತ :  ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶ ವಿಧಾನಸಭೆಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಗೆಲುವಿಗಾಗಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿವೆ.

ಗೆಲುವನ್ನೇ ಮಾನದಂಡವನ್ನಾಗಿರಿಸಿಕೊಂಡು ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದ್ದು, ಈ ರೀತಿ ತಮಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಇಬ್ಬರು ಹಾಲಿ ಶಾಸಕರು ಪಕ್ಷ ತೊರೆದಿದ್ದಾರೆ. ಅಸ್ಸಾಂ ಆಡಳಿತರೂಢ ಬಿಜೆಪಿಯ ಶಾಸಕರಾದ ದಿಲೀಪ್ ಕುಮಾರ್ ಹಾಗೂ ಶೀಲಾದಿತ್ಯ ದೇವ್ ಅವರುಗಳಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ಶಾಸಕರು ಪಕ್ಷ ತೊರೆದು ಪಕ್ಷೇತರರಾಗಿ ಅಥವಾ ಮತ್ತೊಂದು ಪಕ್ಷದಿಂದ ಚುನಾವಣೆಗೆ ನಿಲ್ಲುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

ಟಿಎಂಸಿ ತೊರೆದು ಬಿಜೆಪಿ ಸೇರಿದ ಶಾಸಕರು :  ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷ ತೊರೆಯುತ್ತಿರುವ ಮುಖಂಡರ ಸಂಖ್ಯೆಯೂ ಏರುತ್ತಿದೆ. ಬುಧವಾರ ಟಿಎಂಸಿ ಶಾಸಕ ಗೌರಿಶಂಕರ್‌ ದತ್ತ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ಸಚಿವ ಬಚ್ಚು ಹಾನ್ಸದಾ ಮತ್ತು ತೆಹಟ್ಟಾ ಕ್ಷೇತದ ಶಾಸಕ ಗೌರಿಶಂಕರ್‌ ದತ್ತ ಬಿಜೆಪಿಗೆ ಸೇರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಇಬ್ಬರೂ ಮುಖಂಡರಿಗೆ ಟಿಎಂಸಿ ಟಿಕೆಟ್‌ ನೀಡಿರಲಿಲ್ಲ.

ಬೆಂಗಾಲಿ ನಟಿ ರಾಜಶ್ರೀ ರಾಜಬನ್ಷಿ ಮತ್ತು ನಟ ಬೋನಿ ಸೇನ್‌ಗುಪ್ತ ಸಹ ಬಿಜೆಪಿಗೆ ಸೇರಿದ್ದಾರೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಿಂದ ಶುರುವಾಗಿ ಈವರೆಗೂ ಟಿಎಂಸಿಯ ಒಟ್ಟು 26 ಶಾಸಕರು ಹಾಗೂ ಇಬ್ಬರು ಸಂಸದರು ಪಕ್ಷ ತೊರೆದು ಬಿಜೆಪಿಗೆ ಸೇರಿದ್ದಾರೆ. ರಾಜಕೀಯ ನೈತಿಕತೆ ಮತ್ತು ಪಕ್ಷದ ಬದ್ಧತೆ ಇಲ್ಲದೆ ಇರುವವರು ಒಂದು ಪಕ್ಷದಿಂದ ಒಂದು ಪಕ್ಷಕ್ಕೆ ಅಧಿಕಾರಕ್ಕಾಗಿ ಹಾರುತ್ತಿರುತ್ತಾರೆ. ಇವರಿಗೆ ಅಧಿಕಾರ ಮುಖ್ಯವೇ ಹೊರತು ಜನರ ಹಿತಾಸಕ್ತಿಯಲ್ಲ. ಇವರು ಎಲ್ಲೇ ಹೋದರೂ ಅಧಿಕಾರ ಬೇಕು ಅಷ್ಟೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಯಾಯವಾಗಿದೆ.

Donate Janashakthi Media

Leave a Reply

Your email address will not be published. Required fields are marked *