ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷವು (ಬಿಜೆಪಿ) ಪಶ್ಚಿಮ ಬಂಗಾಳವನ್ನು ನಾಶಗೊಳಿಸುವ ಜಂಟಿ ಕಾರ್ಯಾಚರಣೆಯಲ್ಲಿದೆಯೆಂದು ಕಾಂಗ್ರೆಸ್ನ ಹಿರಿಯ ಮುಖಂಡ ಹಾಗೂ ವಕೀಲರಾದ ಜೈವೀರ್ ಶೆರ್ಗಿಲ್ ಆರೋಪ ಮಾಡಿದ್ದಾರೆ.
ಪಶ್ವಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯನ್ನು ಗೆಲ್ಲಲು ಜನರ ಬದುಕಿನ ನಿತ್ಯಜೀವನದಲ್ಲಿ ಎದುರಾಗುವ ನೈಜ ಸಮಸ್ಯೆಗಳನ್ನು ಬೇರೆಡೆ ಸೆಳೆಯಲು ಬಿಜೆಪಿ ಹಾಗೂ ಟಿಎಂಸಿ ಪಕ್ಷಗಳು ಧರ್ಮವನ್ನು ಬಳಸುತ್ತಿದ್ದಾರೆ. ಹಿಂಸಾಚಾರದಲ್ಲಿ ತೊಡಗಿವೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಇದನ್ನು ಓದಿ : ಪಶ್ಚಿಮ ಬಂಗಾಳದ ಚುನಾವಣೆ ಹೇಗಿದೆ ಆಡಳಿತ ವಿರೋಧಿ ಅಲೆ ಎಡಪಕ್ಷಕ್ಕೆ, ಬಿಜೆಪಿಗೆ ಲಾಭವಾಗುತ್ತಾ?
ರಾಜ್ಯದಲ್ಲಿ ದೀದಿಯ ಆಡಳಿತ ಪಕ್ಷ ಮತ್ತು ಕೇಂದ್ರದಲ್ಲೂ ಅಧಿಕಾರದಲ್ಲಿರುವ ಬಿಜೆಪಿ ಪಕ್ಷಗಳ ರಾಜಕೀಯ ಕಾಳಗವು ‘ಸೋನಾರ್ ಬಂಗಾಳ’ದ (ಸುವರ್ಣ ಬಂಗಾಳ) ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿವೆ ಎಂದು ಆರೋಪಿಸಿದ್ದಾರೆ.
BJP and TMC are on a joint mission to ruin Bengal : Shree @JaiveerShergill pic.twitter.com/7P6rukEyVu
— West Bengal Congress (@INCWestBengal) April 2, 2021
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ, 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಾಗುವುದು ಎಂಬ ಅಂಶದ ಬಗ್ಗೆ ಬಿಜೆಪಿಯು ಈಸ್ಟ್ ಇಂಡಿಯಾ ಕಂಪನಿಗೆ ಸಮಾನವಾಗಿದ್ದು, ಬಂಗಾಳವನ್ನು ಲೂಟಿ ಮಾಡುವ ಗುರಿಯನ್ನು ಹೊಂದಿದೆ. ಬಿಜೆಪಿಯು ‘200 ಮೀರಲಿದೆ’ ಅಂದರೆ ಇಂಧನ ಬೆಲೆಯು 200 ರೂ.ಗೆ ಹೆಚ್ಚಿಸಲಾಗುವುದು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರವು 200 ಪ್ರತಿಶತ ಹೆಚ್ಚಾಗಲಿಗೆ ಎಂದವರು ಲೇವಡಿ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಚುನಾವಣೆಯನ್ನು ವಂಚನೆಯಿಂದ ಗೆಲ್ಲುವ ಪ್ರಯತ್ನದಲ್ಲಿ ನಿರತವಾಗಿದೆ. ಪೊಳ್ಳು ಭರವಸೆಗಳಿಂದ ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್-ಎಡರಂಗ-ಐಎಸ್‌ಎಫ್ ಮೈತ್ರಿಕೂಟ ಗೆಲ್ಲಿಸುವಂತೆ ಜನರಲ್ಲಿ ವಿನಂತಿಸಿದರು.