ರಾಜ್ಯ ಬಿಜೆಪಿ ಸರ್ಕಾರದಲ್ಲಿ ಜನಾಭಿವೃದ್ಧಿ ಕೆಲಸಗಳಿಗೆ ಅನುದಾನವೇ ಇಲ್ಲ

ಗದಗ: ರಾಜ್ಯ ಬಿಜೆಪಿ ಸರ್ಕಾರ ಅನುದಾನದ ಕೊರತೆಯ ನೆಪವಡ್ಡಿ ಜನಾಭಿವೃದ್ಧಿ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಎಂದು ಮಾಜಿ ಪುರಸಭೆ ಸದಸ್ಯ ಎಂ.ಎಸ್.ಹಡಪದ ಆರೋಪಿಸಿದ್ದಾರೆ.

ಅವರು ನಗರದ ತಹಶೀಲ್ದಾರ ಕಛೇರಿ ಆವರಣದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ನೇತೃತ್ವದಲ್ಲಿ ನಡೆದ ಮನೆ-ನಿವೇಶನ ವಂಚಿತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರುಒಂದು ತುದಿಯಲ್ಲಿ ಅಡುಗೆ ಅನಿಲ,ತೈಲಬೆಲೆಗಳು ಸೇರಿದಂತೆ ಅಗತ್ಯವಸುಗಳ ಬೆಲೆಗಳು ಗಗನಕ್ಕೇರುತ್ತಿವೆ. ಮತ್ತೊಂದು ಕಡೆ ಜನ ಉದ್ಯೋಗ ವಂಚಿತರಾಗುತ್ತಿದ್ದಾರೆ.

ಇದರ ನಡುವೆ ಸರ್ಕಾರದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಸಕಾಲಕ್ಕೆ ಮನೆ ನಿರ್ಮಾಣದ ಸಹಯಧನವಾಗಲೀ,ನಿವೇಶನದ ಹಕ್ಕುಪತ್ರಗಳು ಸಿಗಲಾರದೇ ಇರುವುದರಿಂದ ಮನೆ ನಿವೇಶನ ವಂಚಿತರ ಕುಟುಂಬಗಳು ದುಬಾರಿ ಬಾಡಿಗೆ ಹಣ ನೀಡಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.ಈ ನಡುವೆ ಹಲವು ಮದ್ಯವರ್ತಿಗಳು ಮನೆ ನಿವೇಶನ ಕೊಡಿಸುವುದಾಗಿ ಸಾಮಾನ್ಯ ಜನರಿಂದ ಹಣ ವಸೂಲಿ ಮಾಡುವುದು ಕೂಡಾ ನಡೆಯುತ್ತಿದೆ. ಎಂದು ಆಪಾಧಿಸಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ತಾಲ್ಲೂಕ ಅದ್ಯಕ್ಷರಾದ ಬಾಲು ರಾಠೋಡ ಮಾತನಾಡಿ ಗಜೇಂದ್ರಗಡ ಈಗ ನೂತನ ತಾಲ್ಲೂಕಾಗಿದೆ. ಅಲ್ಲದೇ ದೊಡ್ಡ ವಾಣಿಜ್ಯ ಕೇಂದ್ರವು ಆಗಿದೆ. ಇದರ ಬೆನ್ನಲ್ಲಿ ಮನೆ ನಿವೇಶನ ವಂಚಿತರ ಸಮಸ್ಯೆ ತೀವ್ರವಾಗಿ ಬೆಳೆಯುತ್ತಿದೆ. ಪುರಸಭೆಯಿಂದ ಹಿಡಿದು ಕೇಂದ್ರ ಸರ್ಕಾರದವರೆಗೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.ಈ ಭಾಗದಲ್ಲಿ ಶಾಸಕರು ಹಾಗೂ ಸಂಸದರು ಬಿಜೆಪಿಯವರೇ ಆಗಿದ್ದಾರೆ.ಇಷ್ಟೆಲ್ಲಾ ರಾಜಕೀಯ ಅನುಕೂಲಕರ ಪರಸ್ಥಿತಿಯಲ್ಲಿಯೂ ಸರ್ಕಾರಗಳ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಹಾಗೂ ಹೊಣೆಗೇಡಿತನದಿಂದಾಗಿ ನಮ್ಮ ಗಜೇಂದ್ರಗಡ ನಗರ ಆಸ್ಪತ್ರೆ,ರಸ್ತೆ,ಕುಡಿಯುವ ನೀರು ಹಾಗೂ ಮನೆ ನಿವೇಶನದಂತಾ ಕನಿಷ್ಟ ಮೂಲಭೂತ ಸೌಕರ್ಯಗಳು ಇಲ್ಲದೇ ಜನ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಇದಕ್ಕೆ ಜನರ ಸಂಘಟಿತ ಹೋರಾಟವಂದೇ ಪರಿಹಾರ ಎಂದರು.

ಇದೇ ಸಂದರ್ಭದಲ್ಲಿ ಮನೆ ನಿವೇಶನ ವಂಚಿತ ಹೋರಾಟ ಸಮಿತಿಯನ್ನು ರಚನೆಯಾಯಿತು. ಅದ್ಯಕ್ಷರಾಗಿ ಬಾಲು ರಾಠೋಡ ಪ್ರಧಾನ ಕಾರ್ಯದರ್ಶಿಯಾಗಿ ರೀಯಾಜ್ ಯಲಿಗಾರ ಆಯ್ಕೆಯಾದರು.

ಸಮಾವೇಶದಲ್ಲಿ ಫಯಾಜ್ ತೋಟದ ಫೀರು ರಾಠೋಡ ಮಾರುತಿ ಚಿಟಗಿ,ಮೈಬುಸಾಬ ಹವಲ್ದಾರ,ಗಣೇಶ ರಾಠೋಡ ಯಲ್ಲಪ್ಪ ಗದ್ದಿ, ಶಾಂತಾ ಹಡಪದ,ಕಳಕಪ್ಪ ಹೊಸಮನಿ, ಯಲ್ಲವ್ವ ರಾಠೋಡ ಶಂಕ್ರಪ್ಪ ಚವ್ಹಾಣ ಹಾಗೂ ರೇಣುಕಾ ಕಲಾಲ ನೇತೃತ್ವ ವಹಿಸಿದ್ದರು.

ವರದಿ: ದಾವಲಸಾಬ ತಾಳಿಕೋಟಿ

Donate Janashakthi Media

Leave a Reply

Your email address will not be published. Required fields are marked *