ಪ್ರಿಯಾಂಕ್ ಖರ್ಗೆ ಮನೆ ಮುಂದೆ ಬಿಜೆಪಿ ಪ್ರತಿಭಟನೆ: ರೆಡ್ ಕಾರ್ಪೆಟ್ ಹಾಸಿ ಪಾನಿಯ ವ್ಯವಸ್ಥೆ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು

ಕಲಬುರಗಿ : ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಯವರ ಆಪ್ತರ ಕೈವಾಡ ಇದೆ, ಇದರಲ್ಲಿ ಪರೋಕ್ಷವಾಗಿ ಪ್ರಿಯಾಂಕ್ ಕೈವಾಡ ಇದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಇದೀಗ ಆವರ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ

ಬೀದರ್ ಮೂಲದ ಕಾಂಟ್ರಾಕ್ಟರ್ ಸಚಿನ್‌ ಪಂಚಾಳ್ ಸುಸೈಡ್ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಕಲಬುರಗಿಯ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ಮುತ್ತಿಗೆ, ಹಾಗೂ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

ಸಚಿವ ಪ್ರಿಯಾಂಕ್ ಖರ್ಗೆ ಮನೆ ಮುಂದೆ ಬಿಜೆಪಿ ಮುತ್ತಿಗೆ ನಡೆಸಲು ಆಯೋಜನೆ ಮಾಡಿರುವ ಹಿನ್ನಲೆ, ಪ್ರಿಯಾಂಕ್ ಖರ್ಗೆ ಅಭಿಮಾನಿಗಳು, ಅವರ ಮನೆ ಮುಂದೆ ರೆಡ್ ಕಾರ್ಪೆಟ್ ಹಾಸಿ ಪಾನಿಯ ವ್ಯವಸ್ಥೆ ಮಾಡಿ ಬರಮಾಡಿಕೊಳ್ಳುವ ತಯಾರಿ ನಡೆಸಿದ್ದಾರೆ.

ಇದನ್ನೂ ಓದಿ : ಟಿಕೆಟ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ವೇಳೆ ಏಕವಚನದಲ್ಲಿ ಕೆಟ್ಟ ಪದಗಳಿಂದ ಪೊಲೀಸ್‌ ಅಧಿಕಾರಿಯನ್ನು ನಿಂಧಿಸಿದ ಆರ್‌ ಆಶೋಕ್

ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಯವರು ನನ್ನ ಮನೆಗೆ ಮುತ್ತಿಗೆ ಹಾಕಲಿ.. ನಾನೇ ಚಹಾ ಪಾನಿಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಅದರಂತೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆಯಂತೆ ಪ್ರತಿಭಟನಾಕಾರರಿಗೆ ಚಹಾ, ಮಜ್ಜಿಗೆ, ಎಳೆ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಇಂದು ಬಿಜೆಪಿ ನಾಯಕರ ದಂಡು ಕಲಬುರಗಿಗೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಿ.ಟಿ ರವಿ ಸೇರಿ ಬಿಜೆಪಿ ನಾಯಕರ ದಂಡೇ ಕಲಬುರಗಿಯತ್ತ ತೆರಳಿದೆ.

ಇಂದು (ಜ.3) ಬೆಳಿಗ್ಗೆ 10 ಗಂಟೆಗೆ ಜಗತ್ ಸರ್ಕಲ್ ನಿಂದ ಬಿಜೆಪಿ ಹೋರಾಟ ಶುರುವಾಗಲಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಲಬುರಗಿಯಲ್ಲಿ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ನೋಡಿ : ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಧಾರ Janashakthi Media

Donate Janashakthi Media

Leave a Reply

Your email address will not be published. Required fields are marked *