ಲಖನೌ : ವಿವಾದಿತ ಹೇಳಿಕೆ ನೀಡುವಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ದೊಡ್ಡ ವಿವಾದ ದೃಷ್ಟಿಸಿದೆ. “ಗುಂಪು ದಾಳಿಯ ಸಂದರ್ಭದಲ್ಲಿ ಯಾವ ಪೊಲೀಸರು ಕೂಡ ನಿಮ್ಮ ಸಹಾಯಕ್ಕೆ ಬರೋದಿಲ್ಲ”, ಆದ್ದರಿಂದ ನಿಮ್ಮ ರಕ್ಷಣೆಗಾಗಿ ಬಾಣ ಹಾಗೂ ಬಾಟಲಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಈ ಗುಂಪು ನಿಮ್ಮ ಬೀದಿ, ನೆರೆಹೊರೆ ಅಥವಾ ಮನೆಗೆ ಇದ್ದಕ್ಕಿದ್ದಂತೆ ಬಂದರೆ, ಅದಕ್ಕೆ ಪರಿಹಾರವಿದೆ… ಅಂತಹ ಅತಿಥಿಗಳಿಗೆ, ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ತಂಪು ಪಾನೀಯಗಳ ಪೆಟ್ಟಿಗೆಗಳು ಮತ್ತು ಕೆಲವು ಆಯುಧಗಳು ಇರಬೇಕು. ಜೈ ಶ್ರೀ ರಾಮ್’ ಎಂದಿದ್ದಾರೆ.
ಅವರ ಈ ಸಂದೇಶದ ಜೊತೆಗೆ, ಕೋಲುಗಳನ್ನು ಹಿಡಿದಿರುವ ಜನರು ಬೀದಿಯಲ್ಲಿ ಅಟ್ಟಿಸಿಕೊಂಡು ಬರುತ್ತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.
ಸಾಕ್ಷಿ ಮಹಾರಾಜರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೋಮು ಗಲಭೆಗಳನ್ನು ಸೃಷ್ಟಿ ಮಾಡಲು ಸಂಸದರ ತಂತ್ರ ಹೂಡೊದಂತೆ ಕಾಣುತ್ತಿದೆ. ಇಂತವರ ವಿರುದ್ಧ ಕಠಿಣ ಕ್ರಮಜರುಗಿಸಬೇಕು. ಸಂಸದರಾಗಿ ಜನರಲ್ಲಿ ಕೋಮುದ್ವೇಷ ಹರಡುತ್ತಿರುವ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.