- ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
- ಆಸ್ತಿ ಲಪಟಾಯಿಸಿದ ಆರೋಪ
- ಕೋರ್ಟ್ ಮೊರೆ ಹೋದ ಮೃತನ ಸಂಬಂಧಿಕರು.
ಚಿತ್ರದುರ್ಗ : ಹೊಳಲ್ಕೆರೆಯಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಲಪಟಾಯಿಸಿರುವ ಆರೋಪ ಕೇಳಿಬಂದಿದ್ದು, ಹೊಳಲ್ಕರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಚಂದ್ರಪ್ಪ, ಪತ್ನಿ ಮತ್ತು ಪುತ್ರರ ವಿರುದ್ದ ದೂರು ದಾಖಲಾಗಿದೆ.
ಜಿಪಿಎ ದುರುಪಯೋಗ ಮಾಡಿಸಿಕೊಂಡು ಶ್ರೀಧರ್ ಎಂಬುವರಿಗೆ ಸೇರಿದ ಆಸ್ತಿ ಕಬಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀಧರ್ ಮೃತರಾದ ಬಳಿಕ ಜಿಪಿಎ ದುರುಪಯೋಗ ಮಾಡಿಕೊಂಡು ಆಸ್ತಿ ಕಬಳಿಕೆ ಮಾಡಿದ್ದಾರೆ ಅಂತ ನಾಗರಾಜ್ ಮತ್ತು ಎಂ ಚಂದ್ರಪ್ಪ ಕುಟುಂಬದ ವಿರುದ್ಧ ಶ್ರೀಧರ್ ಸಹೋದರಿ ಲತಾ ಮತ್ತಿತರರು ಕೋರ್ಟ್ ಮೊರೆ ಹೋಗಿದ್ದರು.
ಅವರ ಮನವಿಯನ್ನು ಪುರಸ್ಕರಿಸಿದ ಕೋರ್ಟ್, ಪೊಲೀಸ್ ಠಾಣೆಗೆ ಸೂಚನೆ ನೀಡಿದ ಹಿನ್ನೆಲೆ ಎಪ್ರಿಲ್ 30 ರಂದು ಕಲಂ 404, 405, 415, 420, 423, 463, 464, 466, 468, 470, ರೆ/ವಿ 149 ಅಡಿಯಲ್ಲಿ ಕೇಸ್ ದಾಖಲಾಗಿದೆ.