ಬೆಳ್ತಂಗಡಿ :ಪ್ರತಿಭಟನಾ ಸಭೆಯೊಂದರಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರಾಷ್ಟ್ರಧ್ವಜಕ್ಕೆ ಅವಮಾನವಾಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಶಾಸಕ ಹರೀಶ್ ಪೂಂಜಾ ಅವರ ಹೇಳಿಕೆ ಸಂವಿಧಾನ ವಿರೋಧಿಯಾಗಿದ್ದು, ರಾಷ್ಟ್ರಧ್ವಜ ಅವಮಾನ ಮಾಡಿದ್ದು ದೇಶದ್ರೋಹದ ಕೆಲಸವಾಗಿದೆ. ಸಂವಿಧಾನದ ಆಧಾರದಲ್ಲಿ ಪ್ರಮಾಣವಚನ ಸ್ವೀಕರಿಸಿದ ಶಾಸಕರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು, ತಕ್ಷಣ ಪ್ರಕರಣ ದಾಖಲಿಸಬೇಕೆಂದು ಬೆಳ್ತಂಗಡಿ ಯುವ ಕಾಂಗ್ರೆಸ್ ಪೋಲಿಸ್ ಠಾಣೆಗೆ ದೂರು ನೀಡಿದೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಅನಿಲ್ ಪೈ, ಯುವ ಕಾಂಗ್ರೆಸ್ ನಗರ ಉಪಾಧ್ಯಕ್ಷ ರಾಘವೇಂದ್ರ ಮೇಲಂತಬೆಟ್ಟು, ಯುವ ಇಂಟಕ್ ಕಾಂಗ್ರೆಸ್ ನಗರ ಅಧ್ಯಕ್ಷ ನವೀನ ಗೌಡ ಸವಣಾಲು, ಮುಖಂಡರಾದ ಗಣೇಶ್ ಕಣಿಯೂರು, ಗುರುರಾಜ್ ಗುರಿಪಳ್ಳ, ಸುಧೀರ್ ದೇವಾಡಿಗ ಬೆಳ್ತಂಗಡಿ, ಧನುಷ್ ಕುಲಾಲ್ ಇಂದಬೆಟ್ಟು, ಸೂರಜ್ ಅಳದಂಗಡಿ, ಸಿದ್ದಿಕ್ ಕೊಯ್ಯೂರು, ವಸಂತ ಮೇಲಂತಬೆಟ್ಟು, ವಿನೋದ್ ಮೇಲಂತಬೆಟ್ಟು ಉಪಸ್ಥಿತರಿದ್ದರು.
ಇದನ್ನೂ ಓದಿ : ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ