ಗಾಜಿಯಾಬಾದ್ : ಉತ್ತರ ಪ್ರದೇಶದ ಬುಲಂದ್ಶಹರ್ ಸದರ್ನ ಬಿಜೆಪಿ ಶಾಸಕ ಪ್ರದೀಪ್ ಚೌಧರಿ ಅವರ 80 ವರ್ಷದ ತಾಯಿ ಸಂತೋಷಾ ದೇವಿ ಮೇಲೆ ನಡುರಸ್ತೆಯಲ್ಲಿಯೇ ಹಲ್ಲೆಯಾಗಿದೆ. ದುಷ್ಕರ್ಮಿಗಳು ಆಕೆಯ ಕಿವಿಯನ್ನು ಹರಿದು ಎರಡೂ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ಗಾಜಿಯಾಬಾದ್ನ ಪ್ರತಾಪ್ ವಿಹಾರ್ನಲ್ಲಿ ನಡೆದಿದೆ.
ಶಾಸಕರ ತಾಯಿ, ಬೆಳಗಿನ ವಾಕಿಂಗ್ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಆಕೆಗೆ ಪಿಸ್ತೂಲ್ನಿಂದ ಹೆದರಿಸಿದ್ದಾರೆ. ಆ ಬಳಿಕ ಆಕೆಯ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಕೀಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಕಿವಿಯೋಲೆಗಳು ಬರದೇ ಇದ್ದಾಗ ದುಷ್ಕರ್ಮಿಗಳು ಕಟರ್ನಿಂದ ಆಕೆಯ ಎರಡೂ ಕಿವಿಯನ್ನು ಕತ್ತರಿಸಿ ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆ ರಸ್ತೆಯಲ್ಲಿ ಬಿದ್ದರೆ, ಲೂಟಿಕೋರರು ತಕ್ಷಣವೇ ಪರಾರಿಯಾಗಿದದ್ದಾರೆ. ಕಳೆದ ಶುಕ್ರವಾರ ಈ ಘಟನೆ ನಡೆಸಿದೆ. ಪ್ರತಾಪ್ ವಿಹಾರ್ನಲ್ಲಿ ಕಿರಿಯ ಮಗ ಜೀತ್ಪಾಲ್ರೊಂದಿಗೆ ಸಂತೋಷಾ ದೇವಿ ವಾಸ ಮಾಡುತ್ತಿದ್ದರು. ಬೆಳಗಿನ ವಾಕಿಂಗ್ಗೆಂದು ಹೊರಟು, ದೆಹಲಿ ಪಬ್ಲಿಕ್ ಸ್ಕೂಲ್ ಬಳಿ ಹೋಗುವ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಕಿವಿಯೋಲೆ ಕದ್ದಿದ್ದಾರೆ. ಮೊದಲು ಕಿವಿಯೋಲೆ ಬಿಚ್ಚಿಕೊಡುವಂತೆ ಹೆದರಿಸಿದ್ದಾರೆ. ಕೊನೆಗೆ ದುಷ್ಕರ್ಮಿಗಳು ತಾವೇ ಪ್ರಯತ್ನಿಸಿದಾಗ ಮೊದಲಿಗೆ ಬಂದಿರಲಿಲ್ಲ.ಕೊನೆಗೆ ಕಟರ್ ಬಳಸಿ ಕಿವಿ ಕತ್ತರಿಸಿ ಚಿನ್ನ ದೋಚಿದಿದ್ದಾರೆ.
ಒಮ್ಮೆ ಆಕೆ ಕೂಗಿಕೊಂಡ ಬಳಿಕ, ಹತ್ತಿರದ ಮನೆಗಳಿದ್ದವರು ಹೊರಬಂದಿದ್ದಾರೆ. ಈ ವೇಳೆಗಾಗಲೇ ಕಳ್ಳರು, ಕಿವಿಯನ್ನು ಹರಿದು ಚಿನ್ನ ಕದ್ದು ಓಡುತ್ತಿದ್ದರು. ತಕ್ಷಣವೇ ಪೊಲೀಸರಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಶಾಸಕ ಪ್ರದೀಪ್ ಚೌಧರಿ ಇಂದಿರಪುರಂನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರದೀಪ್ ಚೌಧರಿ ತಕ್ಷಣವೇ ಆಸ್ಪತ್ರೆಗೆ ಧಾವಿಸಿ ತಾಯಿಯ ಪರಿಸ್ಥಿತಿ ಗಮನಿಸಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣದ ದಾಖಲಿಸಿಕೊಂಡಿದ್ದಾಗಿ ಹೇಳಿದ್ದು, ಕಳ್ಳರನ್ನು ಹಿಡಿಯುವ ಪ್ರಯತ್ನ ಸಾಗಿದೆ ಎಂದಿದ್ದಾರೆ. ಇನ್ನೊಂದೆಡೆ ವಿಜಯ ನಗರ ಪೊಲೀಸ್ ಠಾಣೆ ಭಾನುವಾರ ಇದರ ದೂರು ದಾಖಲಿಸಿಕೊಂಡಿದೆ.